"ಕಷ್ಟ ಬಂದರೆ ಕಣ್ಣು ವದ್ದೆ"

"ಕಷ್ಟ ಬಂದರೆ ಕಣ್ಣು ವದ್ದೆ"

"ಕಷ್ಟ ಬಂದರೆ ಕಣ್ಣು ವದ್ದೆ"

ದುಡಿದು ದಣಿದರೆ ಕಣ್ತುಂಬ ನಿದ್ದೆ 

ಕುಂಟೆ ಹರಗಿದರೆ ಹಸನಾಗುವುದು ಗದ್ದೆ

ಹಸಿದ ಹೊಟ್ಟೆ ತುಂಬಿಸುವುದು ಸಾರು ಮುದ್ದೆ.

ಕಷ್ಟ ಬಂದರೆ ಕಣ್ಣು ವದ್ದೆ 

ಕಣ್ಣು ಮಿಟುಕಿಸಿದರೆ ಬರುವುದಿಲ್ಲ ನಿದ್ದೆ 

ಚಾಡಿ ಮಾತುಗಳ ಕೇಳಿ ಹಾಳು ಬಾವಿಗೆ ಬಿದ್ದೆ.

ಚಳಿಗೆ ನಡುಗುವ ಮೈಗೆ ಕೌದಿ ಹೊದ್ದೆ

ದುಡಿದು ತಿನ್ನುವ ಹಾದಿಯಲ್ಲಿ ಹಾಯಾಗಿದ್ದೆ

ತಿಳಿಯದೆ ಮಾಡಿದ ತಪ್ಪಿಗೆ ಮೋಸದ ಬಲೆಗೆ ಬಿದ್ದೆ.

ಕಣ್ಣೀರಿಗೆ ವದ್ದೆಯಾಯಿತು ಗದ್ದೆ 

ಪರರೇಳಿಗೆ ಸಹಿಸದೆ ಮನದಲ್ಲಿ ಕುದ್ಧೆ

ನೊಂದಿರುವ ಹೃದಯದ ನೆಮ್ಮದಿಯ ಕದ್ದೆ.

ಕಟ್ಟಿದ ಕನಸು ಕಣ್ಣೀರಲ್ಲಿ ಮಿಂದೆದ್ದೆ 

ಬಣ್ಣದ ಕನಸು ಕಳೆಯಿತು ಸುಖ ನಿದ್ದೆ 

ಹೃದಯ ಹಿಂಡಿ ಬಂದಾಗ ಕಣ್ಣೆರಡು ವದ್ದೆ.

ಸಹೃದಯರ ಮನವ ಗೆದ್ದೆ 

ಹೆಗಲೇರಿ ಬಂತು ಯಜಮಾನಿಕೆ ಹುದ್ದೆ

ಮನಸು ಬಾಡಿದರೂ ಕಳವಳಿಸದೆ ಮೇಲೆದ್ದೆ.

ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ.ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ ಯಾದಗಿರಿ ಜಿಲ್ಲೆ. ಜಿಲ್ಲಾಧ್ಯಕ್ಷರು ಸಿರಿಗನ್ನಡ ವೇದಿಕೆ ಯಾದಗಿರಿ ಜಿಲ್ಲಾ ಘಟಕ. ದಿನಾಂಕ:೧೬.೧೦.೨೦೨೪