ನೇಕಾರರ ಮೂಲ ಸಂಸ್ಕೃತಿ ಸಂಪ್ರದಾಯ ಮರೆಯಬಾರದು : ಗುರು ಸದಾನಂದ ಅಪ್ಪಾಜಿ
ನೇಕಾರರ ಮೂಲ ಸಂಸ್ಕೃತಿ ಸಂಪ್ರದಾಯ ಮರೆಯಬಾರದು : ಗುರು ಸದಾನಂದ ಅಪ್ಪಾಜಿ
ಕಲಬುರಗಿ : ನಮ್ಮ ಪೂರ್ವಜರು ಹಾಕಿಕೊಟ್ಟ ಸಂಸ್ಕೃತಿ, ಸಂಪ್ರದಾಯ,ಆಧ್ಯಾತ್ಮಿಕ, ಧಾರ್ಮಿಕ ಆಚರಣೆ ದೇವರ ದಾಸಿಮಯ್ಯ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು ಎಂದು ಗುರು ಸದಾನಂದ ಅಪ್ಪಾಜಿ ಹೇಳಿದರು
ಸಸ್ತಾಪೂರ ಗ್ರಾಮದಿಂದ ಕಲಬುರಗಿ ನಗರಕ್ಕೆ ಆಗಮಿಸಿದ ಅವರು ಭಕ್ತರ ಮನೆಗೆ ಹೋಗಿ ಆಶೀರ್ವದಿಸಿದರು ನಂತರ ಕೈಲಾಸ್ ನಗರದ ಅವರ ಪರಮ ಭಕ್ತರಾದ ವೀರಸಂಗಪ್ಪ ಬುಳ್ಳಾ ಅವರ ಮನೆಯಲ್ಲಿ ತಂಗಿದ್ದರು ಶಿವಲಿಂಗಪ್ಪ ಅಷ್ಟಗಿ ಅವರ ಆಮಂತ್ರಣದ ಮೇರೆಗೆ ಸೋಮವಾರ 14 ಅಕ್ಟೋಬರ್ 24 ರಂದು ದೇವರ ದಾಸಿಮಯ್ಯ ಕಾನೂನು ಸೇವಾ ಸಂಸ್ಥೆಗೆ ಆಗಮಿಸಿದ, ಗುರುಗಳಿಗೆ ನ್ಯಾಯವಾದಿ ಜೀ.ವಿನೋದಕುಮಾರ ಮಾದನ ಹಿಪ್ಪರಗಾದ ಕೈ ಮಗ್ಗದಿಂದ ತಯಾರಿಸಿದೆ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು.
ಸದಾನಂದ ಅಪ್ಪಾಜಿ ಮಾತನಾಡುತ್ತ ನಮ್ಮ ಕಲೆ, ಸಂಸ್ಕೃತಿ ಸಂಪ್ರದಾಯ ಮರೆಯಬಾರದು ದೇವರ ದಾಸಿಮಯ್ಯ ನವರ ವಚನಗಳ ಸಾರ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು
ನೇಕಾರರ ಸಂಸ್ಥೆ ಇಂದ ಸಮಾಜದ ಏಳಿಗೆಗಾಗಿ ಶ್ರಮಿಸಿ, ಹಿಂದುಳಿದ ಬಡವರನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡಿ, ಕಾನೂನಾತ್ಮಕವಾಗಿ ದಿಟ್ಟ ಮತ್ತು ಗಟ್ಟಿಯಾಗಿ ಸಮುದಾಯದ ಧ್ವನಿಯಾಗಿ ಕೆಲಸ ಮಾಡಿ ಎಂದು ತಿಳಿಸಿದರು.
ಸಪ್ತ ನೇಕಾರರ ಸೇವಾ ಸಂಘದ ಕಾರ್ಯದರ್ಶಿ ಮ್ಯಾಳಗಿ ಚಂದ್ರಶೇಖರ್ ವಂದಿಸಿದರು