ಕೋಲಿ ಸಮಾಜವನ್ನು ಎಸ್ಟಿ ಮಾಡಿ, ಉಪಮುಖ್ಯಮಂತ್ರಿಯಾಗಿಯೇ ಸಾಯುತ್ತೇನೆ: ಬಾಬುರಾವ ಚಿಂಚನಸೂರ

ಕೋಲಿ ಸಮಾಜವನ್ನು ಎಸ್ಟಿ ಮಾಡಿ, ಉಪಮುಖ್ಯಮಂತ್ರಿಯಾಗಿಯೇ ಸಾಯುತ್ತೇನೆ: ಬಾಬುರಾವ ಚಿಂಚನಸೂರ

ಕೋಲಿ ಸಮಾಜವನ್ನು ಎಸ್ಟಿ ಮಾಡಿ, ಉಪಮುಖ್ಯಮಂತ್ರಿಯಾಗಿಯೇ

ಸಾಯುತ್ತೇನೆ: ಬಾಬುರಾವ ಚಿಂಚನಸೂರ

ಚಿತ್ತಾಪುರ: ಬಾಬುರಾವ ಚಿಂಚನಸೂರ್ ಕಾರ್ ಎಕ್ಸಿಡೇಂಟ್ ಆಗಿದೆ ಅವರು ಬದುಕಲ್ಲ ಸಾಯುತ್ತಾರೆ. ಡೆಡ್ ಬಾಡಿ ಬರುತ್ತದೆ ಎಂದು ನಮ್ಮ ಸಮಾಜದವರೇ ಗುರುಮಿಠಕಲ್

ಕ್ಷೇತ್ರದ ಮತದಾರರಿಗೆ ಸುಳ್ಳು ಹೇಳಿ ನನ್ನನ್ನು ಸೋಲಿಸಿದ್ರು. ನಾನು ಸಾಯಲಿಲ್ಲ ಆದರೆ ಚುನಾವಣೆಯಲ್ಲಿ ಸೋತಿದ್ದೇನೆ. ನಾನು ಪ್ರಭಾವಿ

ರಾಜಕಾರಣಿಯಾಗಿದ್ದರಿಂದ ಮತ್ತೇ ಅಧಿಕಾರ ಪಡೆದುಕೊಂಡು ಬಂದಿದ್ದೇನೆ ಎಂದು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಸಪ್ತ ಖಾತೆಗಳ ಮಾಜಿ ಸಚಿವ ಬಾಬುರಾವ ಚಿಂಚನಸೂರ ಹೇಳಿದರು.

ಪಟ್ಟಣದಲ್ಲಿ ತಾಲೂಕು ಕೋಲಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ೯೦೫ನೇ ಜಯಂತ್ಯೋತ್ಸವ ನಿಮಿತ್ಯ ಚೌಡಯ್ಯನವರ ಮೂರ್ತಿಯ ಬೃಹತ್ ಶೋಭಾಯಾತ್ರೆ ಸಮಾವೇಷವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಅಷ್ಟು ಸುಲಭವಾಗಿ ಸಾಯುವ ಮನುಷ್ಯ ಅಲ್ಲ. ಕೋಲಿ ಸಮಾಜವನ್ನು ಎಸ್ಟಿ ಮಾಡಿ, ರಾಜ್ಯದ ಉಪ ಮುಖ್ಯಮಂತ್ರಿಯಾಗಿಯೇ

ಸಾಯುತ್ತೇನೆ. ಇದು ಬಿದ್ದು ಹೋಗುವ ಶರೀರ. ನನಗೆ ತಂದೆ ತಾಯಿ ಮಕ್ಕಳಿಲ್ಲ. ಕೋಲಿ ಸಮಾಜ ಎಸ್ಟಿ ಮಾಡಿಯೇ ಜೀವ ಬಿಡುತ್ತೇನೆ ಎಂದರು.

ನನಗೆ ಯಾವಾಗ ಅಧಿಕಾರ ಸಿಕ್ಕಿದೆ ಅವಾಗ ನಾನು ಕೋಲಿ ಸಮಾಜಕ್ಕಾಗಿಯೇ ಹಗಲು ರಾತ್ರಿ ಎನ್ನದೇ ದುಡಿದಿದ್ದೇನೆ. ನಾನು ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೇ ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಅಷ್ಟೇ

ಸತ್ಯ ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮನೆಯ ಹತ್ತಿರ ಹೋಗಿ ಧರಣಿಗೆ ಕುಳಿತು ಕೋಲಿ ಸಮಾಜವನ್ನು ಎಸ್ಟಿಗೆ ಸೆರ್ಪಡೆಮಾಡಲೇಬೇಕು ಎಂದು ಪಟ್ಟು ಹಿಡಿಯುತ್ತಿದ್ದೇ ಎಂದರು.

ಮೋದಿ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಕೋಲಿ ಸಮಾಜವನ್ನು

ಎಸ್ಟಿಗೆ ಸೇರ್ಪಡೆ ಮಾಡುತ್ತೇನೆ ಎಂದು ಹೇಳಿದ್ದರು. ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೆ, ಆದರೆ ಅವರು ಮಾತಿನ ತಕ್ಕಂತೆ ನಡೆಯಲಿಲ್ಲ. ಹೀಗಾಗಿ

ನಾನು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಕೇಂದ್ರದಲ್ಲಿ ಈ ಭಾಗದ ಜನನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಭಾವಿ ರಾಜಕಾರಣಿಯಾಗಿದ್ದರಿಂದ ಬಿಜೆಪಿಯವರು ಅವರ ಮಾತು ಕೇಳುತ್ತಾರೆ. ಕೋಲಿ

ಸಮಾಜವನ್ನು ಎಸ್ಟಿ ಮಾಡಬೇಕೆಂದು ನಾನು ಮತ್ತು ಭೀಮಣ್ಣ ಸಾಲಿ ಅವರು ಹೋಗಿ ಒತ್ತಡ ಹೇರುತ್ತೇವೆ ಎಂದರು.

ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ಬೃಹತ್ ಸಮಾವೇಶ ಮಾಡಿ ಅವರಿಗೆ ಕೋಲಿ ಸಮಾಜವನ್ನು ಪ್ರವರ್ಗ-೧ ಕ್ಕೆ ಸೇರಿಸಿದ್ರು. ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸಲೇಬೇಕೆಂದು ಬೃಹತ್ ಸಮಾವೇಶ ಮಾಡಿದ್ದೇನೆ ಎಂದರು.

ರಾಜ್ಯದಲ್ಲಿ ಕೋಲಿ ಸಮಾಜದವರು ಅತೀ ಬಡವರಾಗಿದ್ದಾರೆ. ಕೋಲಿ ಸಮಾಜದ

ಯಾರೋಬ್ಬರು ದೊಡ್ಡ ದೊಡ್ಡ ಹುದ್ದೇಯಲ್ಲಿಲ್ಲ. ಬರೀ ಸಾಲಿ ಮಾಸ್ತರ, ಕಂಡಕ್ಟರ್ ಮಾತ್ರ ಇದ್ದಾರೆ. ಹೀಗಾಗಿ ಕೋಲಿ ಸಮಾಜದವರು ಎಲ್ಲರೂ ಒಗ್ಗಟ್ಟಾಗಿ ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸಲೇಬೇಕೆಂದು ಹೋರಾಟ ಮಾಡಿದಾಗ ಮಾತ್ರ ದೊಡ್ಡ ಹುದ್ದೆಗಳು ಸಿಗುವುದರ ಮೂಲಕ ಸಮಾಜದ ಜನರು ಆರ್ಥಿಕವಾಗಿ ಬಲಿಷ್ಠರಾಗುತ್ತಾರೆ ಎಂದರು.

ಕೋಲಿ ಸಮಾಜದ ಹಿರಿಯ ಮುಖಂಡರಾದ ಭೀಮಣ್ಣ ಸಾಲಿ, ಲಚ್ಚಪ್ಪ ಜಮಾದಾರ,ಮಲ್ಲಿಕಾರ್ಜುನ ಎಮ್ಮೆನೂರ್ ಮಾತನಾಡಿದರು.ತೋನಸನಳ್ಳಿಯ ಶ್ರೀ ಮಲ್ಲಣಪ್ಪ ಮಹಾಸ್ವಾಮಿ ಸಾನಿಧ್ಯವಹಿಸಿ ಆಶಿರ್ವಚನ ನೀಡಿದರು.

ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣ ಹೇಗಲೇರಿ, ನಗರ ಅಧ್ಯಕ್ಷ ಪ್ರಭು ಹಲಕರ್ಟಿ, ರಾಮಲಿಂಗ ಬಾನರ, ಹಣಮಂತ ಸಂಕನೂರ, ಸುರೇಶ ಬೆನಕನಳ್ಳಿ, ಬಸವರಾಜ ಚಿನ್ನಮಳ್ಳಿ, ಭೀಮಣ್ಣ ಹೋತಿನಮಡಿ, ಸಿದ್ದು ಸಂಗಾವಿ,

ರೇಖಾ ತಳವಾರ, ಸಂತೋಷ ಮಳಬಾ, ಶರಣು ಡೋಣಗಾಂವ, ಕರಣಕುಮಾರ ಅಲ್ಲೂರ, ಚಂದ್ರು ಕಾಳಗಿ, ದೇವಿಂದ್ರ ಹೊನಗುಂಟಿ, ಮಹಿಪಾಲ ಮೂಲಿಮನಿ, ನಾಗೇಂದ್ರ ಸೇಡಂ, ಮಂಜು ಮುತ್ಯಾ ಕೊಂಚೂರ, ಬಸವರಾಜ ಮೈನಾಳಕರ್

ಸೇರಿದಂತೆ ಕೋಲಿ ಸಮಾಜದ ಅನೇಕ ಮುಖಂಡರು, ಪದಾಧಿಕಾರಿಗಳು ಇದ್ದರು.ದೇವಿಂದ್ರ ಅರಣಕಲ್ ನಿರೂಪಣೆ ಮಾಡಿದರು.

ಬೃಹತ ಶೋಭಾಯಾತ್ರೆ:ಕೋಲಿ ಸಮಾಜದ ಯುವ ಅಧ್ಯಕ್ಷ ರಾಜೇಶ ಹೋಳಿಕಟ್ಟಿ ಅವರ ನೇತೃತ್ವದಲ್ಲಿನಿಜಶರಣ ಅಂಬಿಗರ ಚೌಡಯ್ಯನವರ ಬೃಹತ್ ಶೋಭಯಾತ್ರೆ ನಡೆಯಿತು.ಮೆರವಣಿಗೆಯಲ್ಲಿ ೯ ಅಡಿ ಎತ್ತರದ ನಿಜಶರಣ ಅಂಬಿಗರ ಚೌಡಯ್ಯನವರಪುತ್ಥಳಿ, ಡೊಳ್ಳು, ಹಲಗಿ, ಡಿಜೆ, ಬಾಜಾ ಭಜಂತ್ರಿ ಸೇರಿದಂತೆ ವಿವಿಧ ಸಮಾಜದಶರಣರ ಭಾವಚಿತ್ರಗಳು ಜನಮನ ಸೆಳೆದವು.

ಅಂಬಿಗರ ಚೌಡಯ್ಯನವರ ಭವನದಿಂದ ಪ್ರಾರಂಭಗೊಂಡ ಮೆರವಣಿಗೆಯೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಪಿಎಸ್'ಐ ಶ್ರೀಶೈಲ್ ಅಂಬಾಟಿ ಅವರು ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿದರು.