ಪುಸ್ತಕ ಸಂಸ್ಕೃತಿಯನ್ನು ಕಡೆಗಣಿಸಿದ ಮುಖ್ಯಮಂತ್ರಿ

ಪುಸ್ತಕ ಸಂಸ್ಕೃತಿಯನ್ನು ಕಡೆಗಣಿಸಿದ ಮುಖ್ಯಮಂತ್ರಿ

ಪುಸ್ತಕ ಸಂಸ್ಕೃತಿಯನ್ನು ಕಡೆಗಣಿಸಿದ ಮುಖ್ಯಮಂತ್ರಿ  

      ಮುಖ್ಯಮಂತ್ರಿ ಸ್ವತಹ ಅರ್ಥಮಂತ್ರಿಯೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು 16 ಬಜೆಟ್ ಗಳನ್ನು ಮಂಡಿಸಿ ಒಬ್ಬ ಶ್ರೇಷ್ಠ ಅರ್ಥಶಾಸ್ತ್ರಜ್ಞ ಆಡಳಿತಗಾರ ಎನ್ನಿ ಸಿಕೊಂಡಿರುವ ಅವರು ಈ ಬಾರಿ ಬಜೆಟ್ ಮಂಡನೆ ಮಾಡುವ ಸಂದರ್ಭದಲ್ಲಿ ಗ್ರಂಥಾಲಯ ಇಲಾಖೆಯನ್ನು ಕಡೆಗಣಿಸಿ ಎಡವಿದ್ದಾರೆ. ಎಲ್ಲ ರೀತಿಯಿಂದಲೂ ಜ್ಞಾನಿಯಾಗಿರುವ ಸಿದ್ದರಾಮಯ್ಯನವರು ಗ್ರಂಥಾಲಯ ಇಲಾಖೆಗೆ ಅನ್ಯಾಯ ಮಾಡುವುದರ ಮೂಲಕ ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ. ಅವರಿಗೆ ಗ್ರಂಥ ಸಂಸ್ಕೃತಿ ಬಗ್ಗೆ ಅಪಾರವಾದ ಕಳಕಳಿ ಇದೆ. ಗ್ರಂಥಾಲಯ ಉಳಿಸಿ ಬೆಳೆಸಬೇಕೆಂಬುವ ಕಲ್ಪನೆಯು ಇದೆ. ಕನ್ನಡ ನಾಡಿನ ಸಂಸ್ಕೃತಿ ಉಳಿಯಬೇಕಾದರೆ ಸಾಹಿತ್ಯ ಕೃತಿಗಳು ಮತ್ತು ಗ್ರಂಥ ಸಂಸ್ಕೃತಿ ಬಹಳ ಮುಖ್ಯ ಎಂಬ ಅರಿವು ಇದೆ.     

    ಹೀಗಿದ್ದಾಗಲೂ ಕೂಡ ಅವರು ಕಳೆದ ವರ್ಷಕ್ಕಿಂತಲೂ ಈ ವರ್ಷ 15 ಕೋಟಿ ರೂಪಾಯಿ ಕೊರತೆ ಬಜೆಟ್ ಮಂಡಿಸಿದ್ದಾರೆ. ಬಜೆಟ್ ನಲ್ಲಿ ಬಿಡಿಗಾಸು ನೀಡಿಲ್ಲ.ಗ್ರಂಥಾಲಯ ಅಭಿವೃದ್ಧಿ ಅವರಿಗೆ ಬೇಕಾಗಿಲ್ಲ. ಗ್ರಂಥ ಖರೀದಿಗೆ ಮತ್ತು ಫರ್ನಿಚರ್ ನಿಯತಕಾಲಿಕೆಗಳು ಪತ್ರಿಕೆಗಳು ಓದುವುದಕ್ಕೆ ಹಣ ಬಿಡುಗಡೆ ಮಾಡಿಲ್ಲ. ಕೇವಲ ಸಿಬ್ಬಂದಿಗಳ ಸಂಬಳಕ್ಕೆ ಮಾತ್ರ ಹಣ ಬಿಡುಗಡೆ ಯಾಗಿದೆ.ಆಡಳಿತಾತ್ಮಕ ವೆಚ್ಚವಾದ ಸ್ಟೇಷನರಿಗೂ ಹಣ ಬಿಡುಗಡೆ ಮಾಡಿಲ್ಲ. ಯಾಕೆ ಹೀಗೆ ಮಾಡಿದರೋ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ. ಅವರು ಹೀಗೆ ಮಾಡುವುದಕ್ಕೆ ಅವರ ಪ್ರಜ್ಞೆ ವಿವೇಕ ಹೀಗೇಕೆ ಕೆಲಸ ಮಾಡಿದೆ ಎಂಬುದು ಸಂಶಯ ಕೂಡ ಕಾಡುತ್ತಿದೆ.     

          ಈ ಬಾರಿ ಗ್ರಂಥಾಲಯಗಳು ಸೊರಗಿ ಹೋಗುತ್ತವೆ. ಈಗಾಗಲೇ ಗ್ರಂಥ ಸಂಸ್ಕೃತಿ ಕಳೆಗುಂದಿತ್ತಿರುವ ಸಂದರ್ಭದಲ್ಲಿ ಬಿದ್ದವರ ಮೇಲೊಂದು ಕಲ್ಲು ಎಂಬಂತೆ ಬಜೆಟ್ ಮಂಡನೆಯಲ್ಲಿ ಅದಕ್ಕೆ ಅನುದಾನ ಇಡದಿರುವುದು ಆಶ್ಚರ್ಯದ ಸಂಗತಿಯೇ ಆಗಿದೆ. ಇದರಿಂದ ಇದುವರೆಗೆ ಗ್ರಂಥಾಲಯಗಳಿಗೆ ಖರೀದಿಸಿದ 2020 ರಿಂದ ಇದುವರೆಗೆ ಪುಸ್ತಕದ ಬಿಲ್ಲು ಪಾವತಿ ಆಗಿಲ್ಲ.ಮತ್ತು ಪುಸ್ತಕ ಆಯ್ಕೆಯು ಆಗಿಲ್ಲ.ಲೇಖಕರು- ಪ್ರಕಾಶಕರು ಪರದಾಡುತ್ತಿದ್ದಾರೆ.ಇಲಾಖೆ ಸಚಿವರಾದ ಮಧು ಬಂಗಾರ ಪ್ಪನವರು ಶಿಕ್ಷಣ ಇಲಾಖೆಯ ಮಾತ್ರ ನನ್ನದೇ ಎಂಬ ಕಾಳಜಿ ಇದೆ ವಿನಃ ಗ್ರಂಥಾಲಯ ಇಲಾಖೆಗೆ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಇದರಿಂದ ಗ್ರಂಥ ಸಂಸ್ಕೃತಿ ಹಾಳಾಗಿ ಹೋಗುತ್ತದೆ. ಸಾಹಿತಿಗಳು -ಪ್ರಕಾಶಕರು ಹೇಳ ಹೆಸರಿಲ್ಲದಂತಾಗುತ್ತಾರೆ. ಪುಸ್ತಕಗಳು ಖರೀದಿ ಆಗದಿದ್ದರೆ ಗ್ರಂಥಾಲಯಗಳು ಉಳಿಯುವುದಾದರೂ ಹೇಗೆ ?.ಗ್ರಂಥ ಸಂಸ್ಕೃತಿ ಬೆಳೆಯುವುದಾದರೂ ಹೇಗೆ ? ಎಂಬ ಪ್ರಶ್ನೆ ಕಾಡುತ್ತಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಡ ಪಂಗಡದ ಲೇಖಕರಿಗೆ ಹಾಗೂ ಪ್ತಕಾಶಕರಿಗೆ ಅನುದಾನವೇ ಇಲ್ಲದಂತೆ ಮಾಡಿದ್ದಾರೆ.ಇದರಿಂದ ದಲಿತರ ಮೇಲೆ ಎಷ್ಟು ಕಾಳಜಿ ಹೊಂದಿದ್ದಾರೆಂಬುದು ಗೊತ್ತಾಗುತ್ತದೆ.ಕೂಡಲೇ ಮುಖ್ಯಮಂತ್ರಿಗಳು ವಿಶೇಷವಾದಂತಹ ಅನುದಾನ ಬಿಡುಗಡೆ ಮಾಡಿ, ಬಾಕಿ ಇರುವ ಬಿಲ್ಲುಗಳನ್ನು ಪಾವತಿಸಬೇಕು. ಅಷ್ಟೇ ಅಲ್ಲ ಮುಂದಿನ ಪುಸ್ತಕ ಖರೀದಿಗೆ ಅನುಕೂಲವಾಗುವಂತೆ ಹೆಚ್ಚಿನ ಅನುದಾನ ನೀಡಿ ಜೊತೆಗೆ ಆಯಾ ವರ್ಷವೇ ಆಯಾ ಲೇಖಕರ- ಪ್ರಕಾಶಕರ ಕೃತಿಗಳನ್ನು ಖರೀದಿಸಲು ವಿಶೇಷ ಬಜೆಟ್ ಮೀಸಲು ನೀಡಬೇಕು.ಈ ವರ್ಷದ ಬಜೆಟ್ ವಿಶೇಷವಾಗಿ ನೀಡಲು ಒತ್ತಾಯಿಸುತ್ತೇವೆ.  

        ಪ್ರತಿ ವರ್ಷ ಗ್ರಂಥಾಲಯ ಇಲಾಖೆಗೆ 100 ರಿಂದ 80 ಕೋಟಿ ರೂಪಾಯಿಗೆ ಇಳಿಸಿದ್ದಾರೆ.ಕೇಂದ್ರ ಸರಕಾರ ಪ್ರತಿ ವರ್ಷ ಬಜೆಟ್ ಮಂಡನೆ ಮಾಡುವಾಗ 15% ಪ್ರತಿ ಶತ ಹೆಚ್ಚಿಸುತ್ತದೆ. ಆದರೆ ರಾಜ್ಯ ಸರಕಾರ 15 ಕೋಡಿ ರೂಪಾಯಿ ಕಡಿಮೆಗೊಳಿಸಿದ್ದು ವಿಪರ್ಯಾಸದ ಸಂಗತಿಯಾಗಿದೆ.ಪರಿಶಿಷ್ಟ,ಕ್ರೈಸ್ತ,ಮುಸ್ಲಿಂ ಗುತ್ತಿಗೆದಾರರಿಗೆ 20%ಶತ ಹೆಚ್ಚಿಸಿದ ಸರಕಾರ ಪುಸ್ತಕ ಸಂಸ್ಕೃತಿಗೆ ಏಕೆ ಹೆಚ್ವಿಸಲಿಲ್ಲ.? . ಬೃಹತ್ ಗಾತ್ರದ ಬಜೆಟನ್ನು ಒಮ್ಮೆಗೆ ಕಡಿತಗೊಳಿಸಿ ಈ ತರಹ ನಿರ್ಣಯ ಕೈಗೊಂಡಿದ್ದು ಆಘಾತಕಾರಿಯಾದ ಸಂಗತಿಯಾಗಿದೆ. ಕಳೆದ ಇಪ್ಪತ್ತೊಂದು ವರ್ಷಗಳಿಂದ ನಡೆದುಕೊಂಡು ಬಂದ ಏಕ ಗಾವಾಕ್ಷಿ ಪುಸ್ತಕ ಖರೀದಿ ಯೋಜನೆ ನಿಲ್ಲಿಸುವ ಷಡ್ಯಂತ್ರವಾಗಿದೆ.ಇದನ್ನು ಕನ್ನಡ ನಾಡಿನ ಗ್ರಂಥಪ್ರಿಯರು ಯಾರೂ ಸಹಿಸಿಕೊಳ್ಳುವುದಿಲ್ಲವೆಂಬರು ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಅರಿತುಕೊಳ್ಳಬೇಕು ಎಂದು

ಕಲ್ಯಾಣ ಕರ್ನಾಟಕ ಸಾಹಿತಿಗಳಾದ ಮತ್ತು ಪ್ರಕಾಶಕರಾದ ನಾವುಗಳು ಒತ್ತಾಯಿಸುತ್ತೇವೆ ಮತ್ತು ಆಗ್ರಹಿಸುತ್ತೇವೆ. ಒಂದು ವೇಳೆ ವಿಶೇಷ ಅನುದಾನ ಬಿಡುಗಡೆ ಮಾಡದಿದ್ದರೆ ಕಲ್ಯಾಣ ಕರ್ನಾಟಕದ ಎಲ್ಲ ಸಾಹಿತಿ, ಲೇಖಕ,ಪ್ರಕಾಶಕರು,ಓದುಗರು, ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡುತ್ತೇವೆ.            

ಪ್ರೊ.ಶಿವರಾಜ ಪಾಟೀಲ, ಡಾ.ಗವಿಸಿದ್ದಪ್ಪ ಪಾಟೀಲ, ಡಾ.ಚಿ.ಸಿ. ನಿಂಗಣ್ಣ ,ಡಾ. ಮೀನಾಕ್ಷಿ ಬಾಳಿ,ಡಾ.ರಾಜಕುಮಾರ ಮಾಳಗೆ,