ಠಾಣ ಕುಶ್ನೂರ್ ಇಚ್ಛಾಪೂರ್ತಿ ಮಾತಾ ಜಗದಂಬಾ ದೇವಿಯ ನವರಾತ್ರಿ ಉತ್ಸವ.
ಠಾಣ ಕುಶ್ನೂರ್ ಇಚ್ಛಾಪೂರ್ತಿ ಮಾತಾ ಜಗದಂಬಾ ದೇವಿಯ ನವರಾತ್ರಿ ಉತ್ಸವ.
ಕಮಲನಗರ: ತಾಲುಕಿನ ಠಾಣಾಕುಶನೂರ್ಗ್ರಾಮದಲ್ಲಿ ಜೈ ಭವಾನಿ ಮಾತಾ ಜಾತ್ರಾ ಮಹೋತ್ಸವದ ನಿಮಿತ್ತ ಭವಾನಿ ಮಂದಿರದಲ್ಲಿ ಘಟ ಸ್ಥಾಪನೆ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನದಂತೆ ಜರುಗಿತು.
ನವರಾತ್ರಿ ನಿಮಿತ್ಯ ನಾನಾ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿದಿನ ಬೆಳಗ್ಗೆ ಅಂಬಭವಾನಿ ದೇವಸ್ಥಾನದಲ್ಲಿ ಆರತಿ, ಅಭಿಷೇಕ ಪೂಜೆ ನಡೆಯಲಿದೆ ಹಾಗೂ ರಾಮ ಪುರಾಯಣ ರಘುನಾಥ್ ರಟ್ಟೆ ನಡೆಸಿಕೊಟ್ಟರು .ಎಂದು ಟ್ರಸ್ಟ್ ಅಧ್ಯಕ್ಷ ಧನರಾಜ ವಡಿಯಾರ ತಿಳಿಸಿದರು. ಬೆಳಗ್ಗೆ ಮಂದಿರದಲ್ಲಿ ಪ್ರತಿ ದಿನ ಬೆಳಗ್ಗೆ ಒಬ್ಬೊಬ್ಬ ಸದಸ್ಯರು ಭವಾನಿ ಮಾತೆಗೆ ಅಭಿಷೇಕ ನೆರವೇರಿಸಿದರು. ಅರ್ಚಕ ಗೋಪಾಲ ದೇಸಾಯಿ ಅವರು ದೇವಿಗೆ ಸೀರೆ ಮತ್ತು ಹಸಿರು ಬಳೆಗಳನ್ನು ತೊಡಿಸಿ ಶೃಂಗರಿಸಲಾಯಿತು. ದೇವಿ ಮೂರ್ತಿ ಎದುರು ಘಟಸ್ಥಾಪನೆ ಕಾರ್ಯ ಕೈಗೊಳ್ಳಲಾಯಿತು. ನಂತರ
ಗ್ರಾಮದಲ್ಲಿನ ಮಾತಾ ದೇವಿ ದೇವಸ್ಥಾನದಲ್ಲಿ ಜಗದಂಬಾ ಪೂಜೆ, ಅರ್ಚನೆ, ಅಭಿಷೇಕದಂತಹ ಪೂಜಾ ಕಾರ್ಯಕ್ರಮಗಳನ್ನು ಭಕ್ತಿ ಭಾವದಿಂದ ನೆರವೇರಿಸಿದರು.
ಇಚ್ಛಾಪೂರ್ತಿ ಮಾತಾ ಜಗದಂಬಾ ದೇವಿಯ ಶಕ್ತಿ ಅಪಾರವಾಗಿದೆ.ದೇವರ ಮೊರೆ ಹೋಗುವ ಭಕ್ತರ ಎಲ್ಲ ಕಷ್ಟಗಳು ಪರಿಹಾರವಾಗುತ್ತವೆ. ಬದುಕು ಸುಂದರವಾಗುತ್ತದೆ. ಮಾತೆಯ ಕೃಪೆ ಇರುತ್ತದೆ ಎಂದು ಟ್ರಸ್ಟ್ ಅಧ್ಯಕ್ಷ ಧನರಾಜ ನಾಗಪ್ಪ ಒಡೆಯಾರ ತಿಳಿಸಿದರು .
ಶನಿವಾರ ಅಭಿಷೇಕ ಬಾಬುರಾವ ಬಿರಾದಾರ ದಂಪತಿಯಿಂದ ಮತ್ತು ಪೂಜೆ ಮಾಣಿಕ ವಡೆಯರ ಹಾಗೂ ಸಂಜುಕುಮಾರ ಕದಮ ದಂಪತಿ ವತಿಯಿಂದ ಜರುಗಿತು
ಈ ಸಂಧರ್ಭದಲ್ಲಿ ಭವಾನಿ ಮಂದಿರ ಟ್ರಸ್ಟ್ ಅಧ್ಯಕ್ಷರು ಧನರಾಜ ವಡೆಯರ, ಉಮಾಕಾಂತ ಬಿರಾದಾರ,ಮಹೇಶ ವಡೆಯರ,ರಮೇಶ ವಡೆಯರ,ವಿಕಾಸ.S. ವಡೆಯರ, ನಾಗೇಶ ಶಂಕರ .ವಿನೋದ ಪವಾರ .ನಿತೀಶ ಪವಾರ ಮೇಘರಾಜ. ಸತೀಶ ಬಿರಾದಾರ .ಅಜಯ ಪವಾರ .ರತಿಕಾಂತ ಬಿರಾದಾರ .ಕಮಳಮ್ಮಾ ಗೈಬಣ್ಣ ಗೈ ಬಣ್ಣ ವಡೆಯರ. ಸೂರ್ಯಕಾಂತ ಬಿರಾದಾರ ಹಾಗೂ ಗ್ರಾಮಸ್ಥರು ಮಹಿಳೆಯರು ಉಪಸ್ಥಿತರಿದ್ದರು.