ಕಿತ್ತೂರು ರಾಣಿ ಚೆನ್ನಮ್ಮ ಮಹಿಳೆಯರಿಗೆ ಸ್ಪೂರ್ತಿ.
ಕಿತ್ತೂರು ರಾಣಿ ಚೆನ್ನಮ್ಮ ಮಹಿಳೆಯರಿಗೆ ಸ್ಪೂರ್ತಿ.
ಶಹಪುರ : ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿ ಸ್ವಾತಂತ್ರ್ಯ ದೊರಕಿಸಿಕೊಟ್ಟ ಕಿತ್ತೂರು ರಾಣಿ ಚೆನ್ನಮ್ಮಳ ಆದರ್ಶ ತತ್ವಗಳು ಮಹಿಳೆಯರಿಗೆ ಸ್ಪೂರ್ತಿ ಎಂದು ರಾಜಶೇಖರ ಸಾಸನೂರು ಹೇಳಿದರು.
ಶಹಾಪುರ ನಗರದ ಗದ್ದುಗೆ ರಸ್ತೆಯಲ್ಲಿರುವ ಸೂಗುರೇಶ್ವರ ನಿಲಯದ ಆವರಣದಲ್ಲಿ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿರುವ ಕಿತ್ತೂರು ರಾಣಿ ಚೆನ್ನಮ್ಮಳ ಜಯಂತೋತ್ಸವ ಅಂಗವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಿತ್ತೂರು ರಾಣಿ ಚೆನ್ನಮ್ಮ ತನ್ನ ನಡೆ ನುಡಿಗಳ ಮೂಲಕ ಸ್ವಾತಂತ್ರ್ಯ ಸ್ವಾಭಿಮಾನಕ್ಕಾಗಿ ಹೋರಾಡಿದ ದಿಟ್ಟ ಮಹಿಳೆ ಎಂದು ನುಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಶಿವಣ್ಣ ಮರಬಿ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮಳ ಧೈರ್ಯ,ಶೌರ್ಯ,ಸಾಹಸ,ಇಂದಿನ ಯುವ ಪೀಳಿಗೆಗೆ ತಿಳಿಪಡಿಸಿ ಉತ್ತಮ ಸಂಸ್ಕಾರದೊಂದಿಗೆ ಬದುಕು ಕಟ್ಟಿಕೊಳ್ಳುವಂತೆ ಪಾಲಕರು ತಮ್ಮ ತಮ್ಮ ಮಕ್ಕಳಿಗೆ ಅರ್ಥೈಸಿ ಕೊಡಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು ಇನ್ನೂ ಹೆಚ್ಚೆಚ್ಚು ಆಗಬೇಕಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತಿಷ್ಠಾನದ ಅಧ್ಯಕ್ಷರಾದ ಆನಂದ ಎಂ.ಅಂಗಡಿ ಪ್ರಸ್ತಾವಿಕ ಮಾತುಗಳನ್ನಾಡಿದರು ಈ ಸಮಾರಂಭದ ವೇದಿಕೆಯ ಮೇಲೆ, ಶರಣಮ್ಮ ವಿ.ಅಂಗಡಿ,ಬಸಮ್ಮ ಸುರಪುರ,ಸೇರಿದಂತೆ ಇತರರು ಉಪಸ್ಥಿತರಿದ್ದರು.ಧನುಶ್ರೀ ಪ್ರಾರ್ಥಿಸಿದರು,ಮಹಾಂತೇಶ್ ದೋರನಹಳ್ಳಿ ಸ್ವಾಗತಿಸಿದರು,ಕಾವ್ಯ ಭಂಗಿ ನಿರೂಪಿಸಿದರು,ಶರಣಗೌಡ ಹಿರೂರ ವಂದಿಸಿದರು.