ಧಮ್ಮಚಕ್ರ ಸಾರಿದ ಅಂಬೇಡ್ಕರ್ ವಿದ್ಯಾರ್ಥಿಗಳು

ಧಮ್ಮಚಕ್ರ ಸಾರಿದ ಅಂಬೇಡ್ಕರ್ ವಿದ್ಯಾರ್ಥಿಗಳು
ಕಲಬುರಗಿ: ಹೊರವಲಯದ ಬುದ್ಧ ವಿಹಾರದ ಬಯಲು ರಂಗಮAದಿರದಲ್ಲಿ ೬೮ನೇ ಧಮ್ಮ ಚಕ್ರ ಪ್ರವರ್ತನಾ ದಿನದ ನಿಮಿತ್ತ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಕಲಾ ಮತ್ತು ವಾಣ ಜ್ಯ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಧಮ್ಮ ಚಕ್ರ ನಾಟಕ ಪ್ರೇಕ್ಷಕರಿಗೆ ಬುದ್ಧ ಸಂದೇಶ ಸಾಗಿ ಬಂದ ಕಥೆ ಸಾರಿತು. ಪ್ರೊ.ಇಶ್ವರ ಇಂಗನ್ ಬರೆದ ನಾಟಕವೂ ಬುದ್ಧನ ಜನ್ಮ, ಜ್ಞಾನೋದಯದ ನಂತರ ಬುದ್ಧ ಯಾರಿಗೆ ಬೋಧನೆ ಮಾಡಬೇಕು ಎಂಬ ಪ್ರಶ್ನೆಯೂ ಮೂಡಿದಾಗ ಧಮ್ಮ ಪ್ರಸಾರಕ್ಕೆ ಕೈಗೊಂಡ ಹಂತಗಳ ಕುರಿತು ನಾಟಕ ಮನೋಜ್ಞವಾಗಿ ತಿಳಿಸಿತು.
ಬುದ್ಧನು ಬೌದ್ಧ ಧಮ್ಮವನ್ನು ತಮ್ಮ ಶಿಷ್ಯರಿಗೆ ಬೋಧಿಸಿದ್ದು, ಅಲ್ಲಿಂದ ಅಶೋಕ ಚಕ್ರವರ್ತಿಗೆ ಧಮ್ಮ ಜ್ಞಾನ ಬಂದಿದ್ದು ಸೇರಿ ಕಲಬುರಗಿಯ ಬುದ್ಧ ವಿಹಾರ ನಿರ್ಮಾಣದವರೆಗೆ ಧಮ್ಮ ಚಕ್ರ ಸಾಗಿ ಬಂದ ಗತಿಯನ್ನು ನಾಟಕ ಪ್ರದರ್ಶಿಸಿತು. ಸಾಲು ಸಾಲು ಸವಾಲುಗಳ ಮಧ್ಯೆ ಬುದ್ಧ ಧಮ್ಮವೂ ವಿಶ್ವಾದ್ಯಂತ ಪಸರಿಸಿದ್ದನ್ನು ವಿದ್ಯಾರ್ಥಿಗಳು ಅತ್ಯಂತ ಮನೋಜ್ಞವಾಗಿ ನಟಿಸುವ ಮೂಲಕ ಗಮನ ಸೆಳೆದರು. ಡಾ.ವಿಶ್ವರಾಜ ಪಾಟೀಲ್ ನಿರ್ದೇಶಿಸಿದ್ದರು.