ಮಹಿಳಾ ಸಾಹಿತ್ಯ ವಾಸ್ತವತೆಯ ದಿಕ್ಸೂಚಿ - ಶಿವಲೀಲಾ ಡೇಂಗಿ

ಮಹಿಳಾ ಸಾಹಿತ್ಯ ವಾಸ್ತವತೆಯ ದಿಕ್ಸೂಚಿ - ಶಿವಲೀಲಾ ಡೇಂಗಿ

ಮಹಿಳಾ ಸಾಹಿತ್ಯ ವಾಸ್ತವತೆಯ ದಿಕ್ಸೂಚಿ - ಶಿವಲೀಲಾ ಡೇಂಗಿ 

ಕಲಬುರಗಿ : ಮಹಿಳಾ ಸಾಹಿತ್ಯವು ಸ್ತ್ರೀ ವಾದಿ ಚಿಂತನೆಗಳ ಪ್ರಭಾವದಿಂದಾಗಿ ಮಹಿಳೆಯರ ಬದುಕಿನ ವಾಸ್ತವತೆಯ ದಿಕ್ಸೂಚಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಿವಲೀಲಾ ಡೇಂಗಿ ಹೇಳಿದರು.

ನಗರದ ಸ್ವಾಮಿನಾರಾಯಣ ಕಲ್ಯಾಣ ಮಂಟಪದ ಹತ್ತಿರ ಇರುವ, ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ,ಧರಣಿ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿರುವ "ಮಹಿಳಾ ಸಾಹಿತ್ಯ ಒಂದು ಅವಲೋಕನ" ಕಾರ್ಯಕ್ರಮದಲ್ಲಿ ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಷ್ಟ್ರೀಯ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಶ್ರೀದೇವಿ ಕಾಲೇ ಬಾಗ್ ಮಾತನಾಡಿ,ಮಹಿಳೆಯರು ಸಾಹಿತ್ಯ ರಚಿಸುವಾಗ ತಾವು ಕಂಡುಂಡ ನೋವು ನಲಿವುಗಳನ್ನು ಸಹಿಸಿಕೊಂಡು,ಅನುಭವಗಳ ಮೂಲಕ ಹಂಚಿಕೊಳ್ಳುವ ಮಹಿಳಾ ಸಾಹಿತ್ಯ ಒಂದು ಹೊಸ ಆಯಾಮವೇ ಸೃಷ್ಟಿಸಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಈ ಸಂಸ್ಥೆಯ ಅಧ್ಯಕ್ಷರಾದ ಜ್ಯೋತಿ ಪಾಟೀಲ್ ಎಲ್ಲರನ್ನ ಸ್ವಾಗತಿಸಿದರು, ಈ ಸಮಾರಂಭದ ವೇದಿಕೆಯ ಮೇಲೆ ಶ್ರೀದೇವಿ ಹಿರೇಮಠ,ಜಗದೇವಿ ಪೂಜಾರಿ,ಅರುಂಧತಿ ಜೋಷಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.