ಜಗನ್ನಾಥ್ ಶೇಗಜಿ ಅವರಿಗೆ ಸನ್ಮಾನ ಸಮಾರಂಭ

ಜಗನ್ನಾಥ್ ಶೇಗಜಿ ಅವರಿಗೆ ಸನ್ಮಾನ ಸಮಾರಂಭ

ಜಗನ್ನಾಥ್ ಶೇಗಜಿ ಅವರಿಗೆ ಸನ್ಮಾನ ಸಮಾರಂಭ

ಕಲಬುರಗಿ: ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಜಗನ್ನಾಥ್ ಶೇಗಜಿ ಅವರಿಗೆ ಕಾಂಟ್ರಾಕ್ಟರ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ನಗರದ ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಸಮಿತಿಯ ವತಿಯಿಂದ ಆಯೋಜನೆ ಮಾಡಲಾಗಿದ್ದ ಸಮಾರಂಭದಲ್ಲಿ ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಜಗನ್ನಾಥ್ ಶೇಗಜಿ ಅವರಿಗೆ ಕಾಂಟ್ರಾಕ್ಟರ್ ಅಸೋಸಿಯೇಷನ್ ಸಂಘದ ಮುಖಂಡರು ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ನಿಲಕಂಠರಾವ್ ಮೂಲಗೆ ಅವರು, ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್'ನ ರಾಜ್ಯ ಘಟಕದ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ಕಲ್ಯಾಣ ಕರ್ನಾಟಕ ಭಾಗದವರು ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು. 

ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ ಅಸೋಸಿಯೇಷನ್ ರಾಜಾಧ್ಯಾಕ್ಷರಾದ ಜಗನ್ನಾಥ ಶೇಗಜಿ ಅವರು, ರಾಜ್ಯದ ಗುತ್ತಿಗೆದಾರರ ನನ್ನ ಮೇಲೆ ನಂಬಿಕೆ ಇಟ್ಟು ರಾಜ್ಯಾಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ. ಅವರ ನಂಬಿಕೆಯನ್ನು ಉಳಿಸಿಕೊಂಡು ಗುತ್ತಿಗೆದಾರರ ಶ್ರೇಯಾಭಿವೃದ್ದಿಗೆ ಶ್ರಮಿಸುವೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಬೆಂಗಳೂರು ಮುಖ್ಯ ಎಸ್.ಹೆಚ್,ಡಿ.ಪಿ ಪ್ರಜಕ್ಟ್ ಅಧಿಕಾರಿ ಜಗನ್ನಾಥ ಹಾಲಂಗೆ, ಕಾಂಟ್ರಾಕ್ಟರ್ಸ್ ಅಸೋಸಿಯೇಶನ್ ಮುಖಂಡರಾದ ಮೋಸಿನ್ ಪಟೇಲ್, ಸಜಯ್ ಆರ್ ಕೆ, ಎಮ್ ಕೆ ಪಾಟೀಲ್, ನಾಗಪ್ಪ ಗುರಾಣ , ಕುಶಾಲ್ ಪಾಟೇಲ್ ಎಸ್ ಜಿ ರಾಮಣ್ಣಾ ರೆಡ್ಡಿ, ಸುದರ್ಶನ್ ನಾಯಕ್, ಚಂದ್ರು ದೇವಳಗಾವ್, ಸಿದ್ರಾಮಪ್ಪ ಪಾಟೀಲ್, ಚಿದಾನಂದಪ್ಪ, ಮನಸ್ಸೂರ್ ಪಟೇಲ್ ತೋಂಚಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

.