ದೇವಿದಾಸ ಜೋಶಿ ಅವರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ

ದೇವಿದಾಸ ಜೋಶಿ ಅವರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ

ದೇವಿದಾಸ ಜೋಶಿ ಅವರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ  

ಬೀದರ್ : ನವೆಂಬರ್ ೫ ರಂದು ನಗರದ ರಂಗ ಮಂದಿರದಲ್ಲಿ ನಡೆದ ಶ್ರೀ ಕೇತಕಿ ಶೈಕ್ಷಣಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಹಣಮ್ಮಪಾಜಿ ಗೆಳೆಯರ ಬಳಗದ ಸಹಯೋಗದೊಂದಿಗೆ ಆಯೋಜಿಸಲಾದ ೬೯ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯಮಟ್ಟದ" ಕನ್ನಡ ಸೇವಾ ರತ್ನ ಪ್ರಶಸ್ತಿ "ಪ್ರದಾನ ಸಮಾರಂಭ ಜರುಗಿತು.

ಕಾರ್ಯಕ್ರಮದಲ್ಲಿ  ಪ್ರಭುದೇವ್ ಸ್ವಾಮಿ ಮತ್ತು ವಿನಯ್ ಕುಮಾರ್ ಜಿ ವಿ ಕಾರ್ಯಕ್ರಮದ ಉದ್ಘಾಟಿಸಿದರು.  ಹನುಮಪ್ಪಾಜಿ ಅಧ್ಯಕ್ಷತೆ ವಹಿಸಿದ್ದರು,

  ಸುರೇಶ್ ಚೆನ್ನ ಶೆಟ್ಟಿ ವಿರೂಪಾಕ್ಷ ಗಾದಿಗೆ ಈಶ್ವರ್ ಸಿಂಗ್ ಠಾಕೂರ್ ಸಂಜು ಕುಮಾರ್ ಅತ್ತಿವಾಳೆ ಹೌ ಸಿಪಿಐ ಮಲ್ಲಿಕಾರ್ಜುನ್ ಯಾತನೂರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಬೀದರ್,ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಶ್ರೀ ದೇವಿದಾಸ ಜೋಶಿ ಅವರಿಗೆ ಶಿಕ್ಷಣ ಕ್ಷೇತ್ರದಿಂದ ಆಯ್ಕೆ ಮಾಡಿ ರಾಜ್ಯಮಟ್ಟದ ಕನ್ನಡ ಸೆವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

69ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸಂಸ್ಥೆಯ ಅಧ್ಯಕ್ಷರು ಸಾಧಕರಿಗೆ ಗೌರವ ಸನ್ಮಾನ ಮಾಡಿದರು.

ಬೀದರ್ ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಸಿದ್ರಾಮ ಸಿಂಧೆ, ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಜನಶೆಟ್ಟಿ , ಅವರು ಸಾಧಕರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. 

ಕಾರ್ಯಕ್ರಮದಲ್ಲಿ ಕನ್ನಡ ಅಭಿಮಾನಿಗಳು , ವಿದ್ಯಾರ್ಥಿಗಳು ಸಾಮಾಜಿಕ ಚಿಂತಕರು, ಸಾಹಿತಿಗಳು ಕಲಾವಿದರು ಉಪಸ್ಥಿತರಿದ್ದರು

 ವರದಿ: ಮಛಂದ್ರನಾಥ ಕಾಂಬ್ಳೆ ಬೀದರ್