ಬಸಮ್ಮಗೆ ಒಲಿದ ಎಪಿಎಂಸಿ ಅಧ್ಯಕ್ಷ ಪಟ್ಟ.

ಬಸಮ್ಮಗೆ ಒಲಿದ ಎಪಿಎಂಸಿ ಅಧ್ಯಕ್ಷ ಪಟ್ಟ.

ಬಸಮ್ಮಗೆ ಒಲಿದ ಎಪಿಎಂಸಿ ಅಧ್ಯಕ್ಷ ಪಟ್ಟ.

ಶಹಾಪುರ : ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಚೇರಿಯಲ್ಲಿ ಜರುಗಿದ ಚುನಾವಣೆಯಲ್ಲಿ ನೂತನ ಎಪಿಎಂಸಿ ಅಧ್ಯಕ್ಷರಾಗಿ ತಾಲೂಕಿನ ಸಗರ ಗ್ರಾಮದ ಬಸಮ್ಮ ತಿಪ್ಪಣ್ಣ ಊರಕಾಯಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೊದಲಿನ ಅಧ್ಯಕ್ಷ ಭೀಮಣ್ಣ ಹಾಲಗೇರ ಅವರ ರಾಜೀನಾಮೆಯಿಂದ ತೆರುವುಕೊಂಡಿದ್ದ ಸ್ಥಾನಕ್ಕೆ ಚುನಾವಣೆ ಜರುಗಿತು,ಈ ಚುನಾವಣೆಗೆ ಬಸಮ್ಮ ತಿಪ್ಪಣ್ಣ ಊರಕಾಯಿ ಅವರು ಮಾತ್ರ ಏಕೈಕವಾಗಿ ನಾಮಪತ್ರ ಸಲ್ಲಿಸಿದ್ದರಿಂದ,ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೆ ಮತ್ತಷ್ಟು ಸಹಕಾರಿಯಾಯಿತು.

ತಹಸಿಲ್ದಾರ್ ಉಮಾಕಾಂತ ಹಳ್ಳೆ ಯವರು ಚುನಾವಣಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು,ಈ ಸಂದರ್ಭದಲ್ಲಿ ಆಯ್ಕೆಯಾದ ನೂತನ ಅಧ್ಯಕ್ಷ ಬಸಮ್ಮ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ,ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆ ಜಾರಿಗೊಳಿಸಿದ್ದರಿಂದ ರೈತರಿಗೆ ಮತ್ತಷ್ಟು ವರದಾನವಾಗಲಿದೆ, ಜೊತೆಗೆ ರೈತರಿಗೆ ತಾಲೂಕು ಎಪಿಎಂಸಿ ವತಿಯಿಂದ ಉತ್ತಮ ಸೇವೆ ನೀಡುವಂತೆ,ಸಲಹೆ ನೀಡಿದರು,

ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ,ಜಿಲ್ಲೆಯ ಹಾಗೂ ತಾಲೂಕಿ ಎಲ್ಲಾ ಎಪಿಎಂಸಿ ಗಳಿಗೆ ಸಾಧ್ಯವಾದಷ್ಟು ಬೇಕಾದ ಪೂರಕ ಯೋಜನೆಗಳನ್ನು ಅತಿ ಹೆಚ್ಚು ತರುವ ಮೂಲಕ ರೈತರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುವೆ ಎಂದು ಭರವಸೆ ನೀಡಿದರು.ಅಲ್ಲದೆ ರೈತರು ಈ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಬಸವರಾಜ ಹಯ್ಯಾಳ, ನಿರ್ದೇಶಕರಾದ ಗದಿಗೆಪ್ಪ ದೇಸಾಯಿ,ಸೋಮಶೇಖರಗೌಡ ಚನಶೆಟ್ಟಿ,ಈರಣ್ಣ ಸಾಹು ತಡಬಿಡಿ, ಶರಣಗೌಡ ಪಾಟೀಲ್ ಇಟಗಿ, ಸಂತೋಷ್ ನಿರ್ಮಲ್ಕರ್,ಸಣ್ಣ ನಿಂಗಪ್ಪ ನಾಯ್ಕೋಡಿ,ಬಸವರಾಜ ಕನಗುಂಡ,ರಾಮಣ್ಣ ಸಾಹು ಖಾನಾಪುರ,ಮಲ್ಲಮ್ಮ ಶರಣಪ್ಪ ದೋರನಹಳ್ಳಿ,ಅಯ್ಯಣ್ಣ ಹಾಲಗೇರ,ಶೆಖುಭಾಯಿ ಉಮಾಸಿಂಗ್ ಗೋಗಿ,ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಚಂದಪ್ಪ ಸೇರಿ, ದೇವೇಂದ್ರಪ್ಪ ತೋಟಗೇರ ಸೇರಿದಂತೆ ಇತರರು ಹಾಜರಿದ್ದರು.