ಭಾರತೀಯ ಪರಂಪರೆಯಲ್ಲಿ ಗುರುವಿನ ಸ್ಥಾನ ಮಹತ್ವ-ರಾಗಂ
ಭಾರತೀಯ ಪರಂಪರೆಯಲ್ಲಿ ಗುರುವಿನ ಸ್ಥಾನ ಮಹತ್ವ-ರಾಗಂ
ಕಲಬುರಗಿ:ಭಾರತೀಯ ಪರಂಪರೆಯಲ್ಲಿ ರವೀಂದ್ರನಾಥ್ ಟ್ಯಾಗೋರ್ ಅವರಿಗೆ ಗುರುದೇವ ಎಂದು ಒಪ್ಪಿಕೊಂಡಿದ್ದೇವೆ ಎರಡು ದೇಶದ ರಾಷ್ಟ್ರಗೀತೆಯನ್ನು ಬರೆದ ಮಹನೀಯರಾಗಿದ್ದಾರೆ. ಅವರ ಜ್ಞಾನ ಅಪಾರವಾದದ್ದು ಸಂಸ್ಕೃತಿಯನ್ನು ಪ್ರತಿಪಾದಿಸುತ್ತದೆ. ನಮ್ಮ ಸಂಸ್ಕೃತಿ ಇವನಾರವ ಇವನಾರವ ನೆಂದನಿಸದೆ ಇವ ನಮ್ಮವ ಇವ ನಮ್ಮವನೆಂದುನಿಸಬೇಕು ಪುಸ್ತಕ ಬರೆಯುವುದು ಬಹಳ ಕಷ್ಟದ ಕೆಲಸ .ಪುಸ್ತಕ ಬರೆದು ಕಾವ್ಯ, ಕಥೆ ಶ್ರೇಷ್ಟವಾಗುವುದಿಲ್ಲ; ಅವುಗಳಿಗೆ ಪ್ರಶಸ್ತಿ ಬಂದರೆ ಮಾತ್ರ ಶ್ರೇಷ್ಠ ಎನಿಸಿಕೊಳ್ಳುವುದಿಲ್ಲ. ಆ ಪುಸ್ತಕದಿಂದ ಸಮಾಜಕ್ಕೆ ಪ್ರಯೋಜನವಾದರೆ ಶ್ರೇಷ್ಠ ವಾದ ಪುಸ್ತಕ ವಾಗುತ್ತದೆ. ಸಾಹಿತ್ಯ ಬರೆಯುವುದಕ್ಕೆ ವಯಸ್ಸು ಮುಖ್ಯ ಅಲ್ಲ. ಆ ಪುಸ್ತಕದ ಪ್ರಯೋಜನತೆ ಮುಖ್ಯ. ಜನತೆಯ ಸಾಕಾರಕ್ಕೆ ಉಪಯುಕ್ತವಾದರೆ ಅದರ ಶಕ್ತಿ ಅಳೆಯುವುದಿಲ್ಲ. ಕುವೆಂಪು ಅವರ ಸಾಹಿತ್ಯ ಗುರು ಶಿವರುದ್ರಪ್ಪನವರಿಗೆ ವಂದನೆಗಳನ್ನು ತಮ್ಮ ಕಾವ್ಯದಲ್ಲಿ ಸ್ಮರಿಸಿರುವುದನ್ನು ಕಾಣುತ್ತೇವೆ. ಇದು ಗುರುವಿನ ಮಹತ್ವವನ್ನು ತಿಳಿಸುತ್ತದೆ. ಅನೇಕ ಕಾರ್ಯಕ್ರಮಗಳಲ್ಲಿ ಧರ್ಮದ ಮುಖ ಹೊತ್ತವರು ಸಿಗುತ್ತಾರೆ ಮನುಷ್ಯರು ಸಿಗುವುದಿಲ್ಲ ಮಹಾಪುರುಷರ ಹೆಸರಿನಲ್ಲಿ ವ್ಯಾಪಾರವಾಗುತ್ತಿದೆ. ಮನುಷ್ಯರನ್ನು ವಿಭಾಗಿಸಿ ಸಿಳಿಕೊಂಡ ಅಜ ನಿರ್ಮಾಣವಾಗುತ್ತದೆ. ಈ ನೆಲದ ಬಸವಾದಿ ಶರಣರು ಮನುಷ್ಯರನ್ನಾಗಿ ಮಾಡಿದರು, ಆದರೆ ನಾವು ಅವರಿಗೆ ಒಂದು ಜಾತಿಗೆ ಸೀಮಿತಗೊಳಿಸಿ ಕಟ್ಟಿ ಹಾಕಿದ್ದೇವೆ ಇದು ಬಸವಾದಿ ಪ್ರಮಥರ ವಿಚಾರಗಳಿಗೆ ಮಾಡುವ ದ್ರೋಹವಾಗಿದೆ.ಭಾರತೀಯ ಸಂಸ್ಕತಿಯಲ್ಲಿ ಗುರುವಿಗೆ ಮಹತ್ವದವ ಸ್ಥಾನವಿದೆ ಎಂದು ಪ್ರಖ್ಯಾತ ಸಾಹಿತಿ ರಾಗಂ ಅಭಿಮತ ಪಟ್ಟರು.
ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನ ರಂಗಾಯಣದಲ್ಲಿ ಏರ್ಪಡಿಸಿದ ತ್ರಿವಿಧ ರತ್ನ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿ ಇವತ್ತು ನಮ್ಮ ಗುರುಗಳಿಗೆ ಇರುವ ಸ್ಥಾನ ಯಾರು ಪಡೆಯರು ಎಂದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹಿರಿಯ ವಿದ್ವಾಂಸರಾದ ಡಾಎಸಗ.ಎಂ.ಹಿರೇಮಠರು ಅರ್ಹರಿಗೆ ಪ್ರಶಸ್ತಿ ನೀಡಿರುವುದು ಉತ್ತಮ ಕೆಲಸ.ಮೂವರು ಹೆಸರಲ್ಲಿ ಕೊಡುವ ಪ್ರಶಸ್ತಿ ಮೌಲ್ಯಯತವಾಗಿದೆ. ಸಿರಿಗನ್ನಡದವರು ಸರಿಗನ್ನಡ ಮಾಡಬೇಕೆಂದರು.
ಚಿಂತಕಿ ಡಾ.ಜಯದೇವಿ ಗಾಯಕವಾಡ ಮಾತನಾಡಿ, ಭ್ರಷ್ಟರು, ನಡೆ- ನುಡಿ ಇಲ್ಲದವರಿಗೆ ಉನ್ನತ ಪ್ರಶಸ್ತಿ ದೊರೆಯಬಾರ ದೆಂದರು.
ಗೌರವ ಸನ್ಮಾನ ಸ್ವೀಕರಿಸಿದ ಡಾ.ಶ್ರೀಶೈಲ ನಾಗರಾಳ ಮಾತನಾಡಿ, ಸಾಹಿತ್ಯ, ಸಂಸ್ಕೃತಿ ಪಸರಿಸುವಲ್ಲಿ ಇಂತಹ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು
ಅಧ್ಯಕ್ಷತೆ ವಹಿಸಿದ ಜಿಲ್ಲಾ ವೇದಿಕೆಯ ಡಾ.ಗವಿಸಿದ್ಧಪ್ಪ ಪಾಟೀಲರು ಮಾತನಾಡಿ, ಸಿರಿಗನ್ನಡ ವೇದಿಕೆ ವರ್ಗ,ವರ್ಣ,ಲಿಂಗ ಮೀರಿದ ಇಲ್ಲಿ ಟೀಂ,ಬಣ,ಬಳಗವಿಲ್ಲ ಇದೊಂದು ಮನುಷ್ಯಪರ ವೇದಿಕೆ ಕನ್ನಡ ಬಳಸುವುದಾಗಿದೆ.ಎಂದರು.
ನಾಡಗೀತೆ, ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು ಡಾ.ಸಿದ್ಧಪ್ಪ ಹೊಸಮನಿ ವಂದಿಸಿದರು.
ಡಾ.ಶರಣಬಸವಪ್ಪ ಅಪ್ಪಾ ದಾಸೋಹ ರತ್ನ ಪ್ರಶಸ್ತಿ ಪುರಸ್ಕೃತರು:
ಗುರಪ್ಪ ಪಾಟೀಲ, ಮನೋಹರ ಮರಗುತ್ತಿ,ವಜ್ರಾ ಪಾಟೀಲ, ಸುರೇಶ ಕಾನೇಕರ,ಮಹಾಲಿಂಗ ದೇವರು,ಕಿರಣ ಬಂಗರಗೆ,ಅವಿನಾಶ ದೇವನೂರು,ಅಶೋಕಕುಮಾರ ಪ್ರಭು,ರಾಜಕುಮಾರ ಕಟ್ಟಿಮನಿ, ಡಾಕಪ್ಪ ಮೋತಿಲಾಲ,
ಸಿದ್ದೇಶ್ವರ ಸ್ವಾಮಿ ಆಧ್ಯಾತ್ಮ ಪ್ರಶಸ್ತಿ ಪುರಸ್ಕೃತರು:
ನಾಗಣ್ಣ ಬಡಿಗೇರ,ಸಿದ್ದರಾಮ ಸರಸಂಬಿ,ಮಹಾದೇವಪ್ಪ , ರಾಮಪ್ಪ ಸಿತಾರ,ಹನುಮಂತಪ್ಪ ನಡುವಿನಕೇರಿ
ಎಸ‌್.ರಾಧಾಕೃಷ್ಣನ್ ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತರು:
ಡಾ.ಚಿನ್ನಾ ಆಶಪ್ಪ,ಡಾ.ರಾಜಕುಮಾರ ದುಮ್ಮನಸುರು,ಸಂತೋಷ ಕಂಬಾರ, ಶರಣಪ್ಪ ಗದ್ಲೇಗಾಂವ,ಬಾಬುರಾವ್ ಮುದ್ದನಕರ,ಶೇಖಪ್ಪ ಗ್ಯಾನಪ್ಪ, ಗೌತಮಿ ಹಿರೋಳ್ಳಿ, ಗೀತಾ ಭರಣಿ, ವೈಶಾಲಿ ಸೂರ್ಯವಂಶಿ,ಡಾ.ನೀಲಕಮಲ್,ಡಾ.ಭೀಮಣ್ಣ,ಡಾ.ಜ್ಞಾನ ಮಿತ್ರ ಬೈರಾಮಡಗಿ,ಅಶೋಕ ಕಟ್ಡಿ,ರಾಜೇಂದ್ರ ಝಳಕಿ, ಡಾ.ಪೂರ್ಣಿಮಾ ನಾಗನಾಥರಾವ್,ಡಾ.ಕೈಲಾಸ ಡೋಣಿ, ಡಾ.ಅಶ್ವಿನಿ ಹರಸೂರ,ಮಹಾದೇವ ಶಾಸ್ತಿ,ಅಮ್ರಪಾಲಿ,ಬಸವರಾಜ ಹೊನಮಟ್ಟಿ,ಡಾ.ಸುಖದೇವಿ ಗಂಟಿ,ಕಮಲಾ ದೊಡ್ಡಮನಿ, ಡಾ.ರೇಖಾ ಧೂಳಪ್ಪ,
ವಿವಿಧ ಕ್ಷೇತ್ರದ ಸಾಧಕರಿಗೆ ಡಾ.ನಾರಾಯಣ ರೋಳೆಕರ್, ಡಾ.ಮಲ್ಲಿಕಾರ್ಜುನ ಬಿರಾದಾರ,ಉತ್ತಮ ದೊಡ್ಡಮನಿ ಅವರಿಗೆ ವಿಶೇಷ ಗೌರವ ಸನ್ಮಾನಿಸಲಾಯಿತು.