ಬಡವರ ಸೌಕರ್ಯಗಳನ್ನು ಕೊಳೆಸುತ್ತಿರುವ ವಾಡಿ ಪುರಸಭೆ: ವೀರಣ್ಣ ಯಾರಿ
ಬಡವರ ಸೌಕರ್ಯಗಳನ್ನು ಕೊಳೆಸುತ್ತಿರುವ ವಾಡಿ ಪುರಸಭೆ: ವೀರಣ್ಣ ಯಾರಿ
ವಾಡಿ: ಪಟ್ಟಣದ ಪುರಸಭೆ ಅಧಿಕಾರಿಗಳು ಬಡಜನರಿಗಾಗಿ ಬಂದಿರುವಂತ ಹೊಲಿಗೆ ಯಂತ್ರ, ತ್ರಿಚಕ್ರ ವಾಹನಗಳು ಸೇರಿದಂತೆ ವಿವಿಧ ಸೌಕರ್ಯ ವಸ್ತುಗಳನ್ನು ತ್ಯಾಜ್ಯ ವಿಲೇವಾರಿ ಘಟಕದಲ್ಲಿಟ್ಟು ಕೊಳೆಸುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಗಂಭೀರವಾಗಿ ಆರೋಪಿಸಿದ್ದಾರೆ.
ಸರ್ಕಾರ ಬಡ ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ನೀಡಿದ ಸುಮಾರು ನೂರಾರು ಹೊಲಿಗೆ ಯಂತ್ರಗಳನ್ನು, ಅಂಗವೈಕಲ್ಯ ಹೊಂದಿರುವ ಬಡಜನರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸರ್ಕಾರ ನೀಡಿದ್ದ ತ್ರಿಚಕ್ರ ವಾಹನಗಳನ್ನು ಅರ್ಹ ಬಡ ಜನರಿಗೆ ನೀಡಿದೆ ಹಾಳು ಮಾಡುತ್ತಿದ್ದಾರೆ.
ಇಲ್ಲಿನ ಜನಸಾಮಾನ್ಯರಿಗೆ ಶುದ್ಧ ನೀರು,ಶೌಚಾಲಯ, ಸ್ವಚ್ಛ ವಾತಾವರಣ ಒದಗಿಸದೇ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಇಲ್ಲಿನ ಅಧಿಕಾರಿಗಳು ಸರ್ಕಾರದಿಂದ ಬಂದಂತ ಹೊಲಿಗೆ ಯಂತ್ರ, ತ್ರಿ ಚಕ್ರ ವಾಹನಗಳನ್ನು ಅರ್ಜಿ ಸಲ್ಲಿಸಲಿಸಿದ ಅರ್ಹರಿಗೆ ನೀಡದೆ ಅನ್ಯಾಯ ಮಾಡಿದ್ದಾರೆ.
ಸ್ವಚ್ಚತಾ ಅಭಿಯಾನದ ಅಂಗವಾಗಿ ಸುಮಾರು ಸಾವಿರಾರು ಕಸದ ಡಬ್ಬಿಗಳು ಬಂದಿವೆ ಅವುಗಳನ್ನು ಸಹ ವಿತರಿಸದೆ ಸಾರ್ವಜನಿಕ ಸಂಪತ್ತನ್ನು ಹಾಳುಮಾಡುತ್ತಿದ್ದಾರೆ.
ಮತ್ತೆ ಕಸದ ಡಬ್ಬಿಗಳಿಗೆ ಟೆಂಡರ್ ಕರೆಯುವ ಮಾಹಿತಿ ಬಂದಿದೆ.ಇಂತಹ ಹಗಲು ದರೋಡೆ ಮಾಡುವ ಅಧಿಕಾರಿಗಳಿಂದ ಪಟ್ಟಣದ ಅಭಿವೃದ್ಧಿ ಕನಸಿನ ಮಾತೆ ಆಗಿದೆ.
ಕಾಮಗಾರಿಗಳ ನೆಪದಲ್ಲಿ ನಕಲಿ ಬಿಲ್ ಗಳ ಮುಖಾಂತರ ಹಣ ಲಪಟಾಯಿಸುತ್ತಿರುವ ಅನುಮಾನ ದಟ್ಟವಾಗಿರು ಹಿನ್ನೆಲೆಯಲ್ಲಿ,ಮಾಹಿತಿ ಹಕ್ಕಿನ ಮೂಲಕ ಪುರಸಭೆ ನಿಧಿಯಿಂದ ಕೈಗೊಂಡ ಕಾಮಗಾರಿಗಳ ಮಾಹಿತಿ ಕೇಳಿ ಒಂದು ತಿಂಗಳು ಕಳೆದರು ಇನ್ನೂ ಕೊಟ್ಟಿಲ್ಲ.
ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿನ ತ್ಯಾಜ್ಯ ಸಂಸ್ಕರಣ ಘಟಕಗಳಿದ್ದು,ಅದರಿಂದ ಕಸವನ್ನು ಬೇರ್ಪಡಿಸಿ ರೈತರಿಗೆ ಕಡಿಮೆ ದರದಲ್ಲಿ ಗೊಬ್ಬರ ತಯಾರಿಸಿ ಕೂಡುವ ಯಂತ್ರಗಳನ್ನು ಬಳಸದೆ ಹಾಳು ಮಾಡಿದ್ದಾರೆ.
ಅವೈಜ್ಞಾನಿಕವಾಗಿ ಕಸವನ್ನು ಸುಟ್ಟು ವಾತಾವರಣ ಕಲುಷಿತ ಗೊಳಿಸಿ, ಜನರನ್ನು ಅನಾರೋಗ್ಯಕ್ಕೆ ದೊಡುತ್ತಿದ್ದಾರೆ.
ಈ ರೀತಿಯ ಅನೇಕ ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳಿಗೆ ಬೇಜವಬ್ದಾರಿತನ ತೋರುತ್ತಿರುವುದರಿಂದ ಸಾರ್ವಜನಿಕರ ಆಕ್ರೋಶ ಹೆಚ್ಚಾಗುತ್ತಿದೆ.
ಇದೆಲ್ಲಾ ಮಾಧ್ಯಮಗಳ ಮೂಲಕ ಜಿಲ್ಲಾಧಿಕಾರಿ ಗಳಿಗೆ ಮತ್ತು ಸಂಭಂದಿಸಿದ ಮೇಲಾಧಿಕಾರಿಗಳಿಗೆ ಗಮನಕ್ಕೆ ತಲುಪಿದರು, ಕ್ರಮಕೈಗೊಳ್ಳದೆ ಸುಮ್ಮನಿರುತ್ತಿರುವುದು ಯಾಕೆ ಅಂತ ಗೊತ್ತಾಗುತ್ತಿಲ್ಲ.
ಪತ್ರಿಕಾ ಮಾಧ್ಯಮ ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗ ಎನ್ನಲಾಗುತ್ತದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಷ್ಟೇ ಪ್ರಬಲವಾದ ಶಕ್ತಿ ಪತ್ರಿಕೋದ್ಯಮಕ್ಕೆ ಇದೆ. ಆ ನಿಟ್ಟಿನಲ್ಲಿ ಸಮಾಜದಲ್ಲಿ ಸುಧಾರಣೆ ತರಲು ಮಧ್ಯಮದ ವರದಿಗಳು ಆಧಾರವಾಗಿವೆ.
ಹಾಗೂ ಸಾರ್ವಜನಿಕ ಹಿತಾಸಕ್ತಿಗಾಗಿ ಧ್ವನಿ ಎತ್ತುವವರ ಸಲಹೆ ಗಳನ್ನು ಸಹ ಸ್ವೀಕರಿಸಿ ಅಭಿವೃದ್ಧಿಗೆ ಪೂರಕವಾಗಿ ಕರ್ತವ್ಯ ನಿರ್ವಹಿಸಬೇಕೆಂಬ
ಎಂಬ ಅರಿವು ಅಧಿಕಾರಿಗಳಿಗೆ ಇಲ್ಲದಂತಿದೆ.
ಈಗಲಾದರೂ ನಾವೆಲ್ಲರೂ ಜನಸಾಮಾನ್ಯರ ಮೂಲಭೂತ ಸೌಕರ್ಯಗಳನ್ನು ಕಸಿಯುತ್ತಿರುವ ಭ್ರಷ್ಟ
ಅಧಿಕಾರಿಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.