ದೃಷ್ಟಿ ಸರಿ ಇದ್ದರೆ ಸೃಷ್ಟಿ ಸರಿಯಾಗಿ ಕಾಣುತ್ತದೆ :..ಡಾ.ಹಿರೇಮಠ.
|ಉಚಿತ ನೇತ್ರ ತಪಾಸಣೆ ಮತ್ತು ಔಷಧಿ ವಿತರಣಾ ಶಿಬಿರ|
ದೃಷ್ಟಿ ಸರಿ ಇದ್ದರೆ ಸೃಷ್ಟಿ ಸರಿಯಾಗಿ ಕಾಣುತ್ತದೆ :..ಡಾ.ಹಿರೇಮಠ.
ಶಹಾಬಾದ : - 58 ವರ್ಷಗಳಿಂದ ಹೈ- ಕ ಶಿಕ್ಷಣ ಸಂಸ್ಥೆಯ ಎಸ.ಎಸ. ಮರಗೋಳ ಕಾಲೇಜ್ ವತಿಯಿಂದ ಜ್ಞಾನ ದಾಸೋಹದ ಜೊತೆಗೆ ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಕಣ್ಣಿನ ಉಚಿತ ತಪಾಸಣೆ ಶಿಬಿರಗಳು ಸೇರಿದಂತೆ ಹಲವಾರು ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಬಂದಿದ್ದೇವೆ ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ. ಬಸವರಾಜ್ ಹಿರೇಮಠ್ ಹೇಳಿದರು.
ಅವರು ಹೈ-ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ.ಎಸ. ಮರಗೋಳ ಕಾಲೇಜ್ ಹಾಗೂ ಸಿದ್ದರಾಮೇಶ್ವರ ಕಣ್ಣಿನ ಅಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಔಷಧಿ ವಿತರಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು
ದೃಷ್ಟಿ ಸರಿ ಇದ್ದರೆ ಸೃಷ್ಟಿ ಸರಿಯಾಗಿ ಕಾಣುತ್ತದೆ, ಬೇಡರ ಕಣ್ಣಪ್ಪ ತನ್ನ ಕಣ್ಣು ಶಿವಲಿಂಗ ಕ್ಕೆ ಅರ್ಪಣೆ ಮಾಡಿದ ಇತಿಹಾಸವಿದೆ, ಇಂದಿನ ನಾಗರಿಕರು ತಮ್ಮ ಕಣ್ಣುಗಳನ್ನು ಮಣ್ಣು ಪಾಲು ಮಾಡದೆ, ಕಣ್ಣು ದಾನ ಮಾಡಬೇಕು ಎಂದು ಹೇಳಿದರು.
ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಡಾ. ಮಲ್ಲಿಕಾರ್ಜುನ ನೀಲಶೆಟ್ಟಿ ಮತ್ತು ಡಾ. ನಾಗರಾಜ ಗವಿಮಠ ಮಾತನಾಡಿ, 1992 ರಿಂದ ಪ್ರಾರಂಭವಾದ ಆಸ್ಪತ್ರೆ ಇಲ್ಲಿವರೆಗೆ 2 ಲಕ್ಷ ಜನರಿಗೆ ಉಚಿತ ನೇತ ಚಿಕಿತ್ಸೆ ಜೊತೆಗೆ ಔಷಧಿ ನೀಡಲಾಗಿದೆ, ಬಡವರಿಗಾಗಿ ರೂಪಿಸಿದ ಹಮಾರಾ ಬಂಧನ್ ಯೋಜನೆ ಅಡಿಯಲ್ಲಿ ತಿಂಗಳಲ್ಲಿ 2-3 ಶಿಬಿರಗಳು ಮಾಡಲಾಗುತ್ತಿವೆ ಸುಮಾರು ಜನರಿಗೆ ಉಚಿತವಾಗಿ ಔಷಧ ಮತ್ತು ನೇತ್ರ ಚಿಕಿತ್ಸೆ ಮಾಡಲಾಗಿದೆ ಎಂದರು.
ವೇದಿಕೆ ಮೇಲೆ ಪ್ರಾಚಾರ್ಯ ಡಾ. ಬಸವರಾಜ ಹಿರೇಮಠ, ಸಂಸ್ಥೆಯ ಸದಸ್ಯ ಸುಭಾಶ್ಚಂದ್ರ ಇಂಗಿನಶೆಟ್ಟಿ, ಡಾ.ಲಕ್ಷ್ಮಣ ರಾಠೋಡ, ಸಿದ್ದರಾಮೇಶ್ವರ ಆಸ್ಪತ್ರೆಯ ಡಾ.ಮಲ್ಲಿಕಾರ್ಜನ ನೀಲಶೆಟ್ಟಿ, ಡಾ.ನಾಗರಾಜ ಗವಿಮಠ ಮತ್ತು ಪತ್ರಕರ್ತ ನಿಂಗಣ್ಣ ಜಂಬಗಿ ಇದ್ದರು
250 ಜನ ಶಿಬಿರಾರ್ಥಿಗಳು ಉಚಿತವಾಗಿ ನೇತ್ರ ತಪಾಸಣೆ ಮಾಡಕೊಂಡರು ಹಾಗೆ 55 ಜನರಿಗೆ ನೇತ್ರ ಶಸ್ತ್ರ ಚಿಕ್ಸತೆಗೆ ಸಲಹೆ ನೀಡಿ, ದಿನಾಂಕ ನಿಗದಿಪಡಿಸಲಾಯಿತು.
ಈ ಸಂದರ್ಭದಲ್ಲಿ ಡಾ.ವೆಂಕಟರಾಜಪ್ಪ, ಪ್ರೋ.ಸ್ಥಾವರಮಠ, ಡಾ.ಸೇಡಂಕರ,
ಡಾ.ಸುರೇಖಾ ನಾಟೀಕಾರ,ಡಾ.ಕಾವೇರಿ, ಪ್ರೋ.ಶಿವಕುಮಾರ ಕುಸಾಳೆ, ಮಹ್ಮದ ಇರ್ಫಾನ, ಕುಪೇಂದ್ರ ಚಹ್ವಾಣ, ಹಾಗೂ ನಗರ ಮತ್ತು ಗ್ರಾಮದಿಂದ ಶಿಬಿರ ಕ್ಕೆ ಆಗಮಿಸಿದ ನೂರಾರು ಜನ ಉಪಸ್ಥಿತರಿದ್ದರು.
ಪ್ರೋ.ಶಿವಕುಮಾರ ಹಿರೇಮಠ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
