ಹೆಬ್ಬಾಳ|| ಪ್ರಪ್ರಥಮವಾಗಿ ಸಿಜರಿಯನ್ ಶಸ್ತ್ರಚಿಕಿತ್ಸೆ ಯಶಸ್ಸು

ಹೆಬ್ಬಾಳ|| ಪ್ರಪ್ರಥಮವಾಗಿ ಸಿಜರಿಯನ್ ಶಸ್ತ್ರಚಿಕಿತ್ಸೆ ಯಶಸ್ಸು
ಕಲಬುರಗಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪಾ ಕ್ಯಾತನಾಳ ಹಾಗೂ ಮಾನ್ಯ ಆರ್‌ಸಿಹೆಚ್‌ಓ ಕಲಬುರಗಿ, ಮಾನ್ಯ ಟಿಹೆಚ್‌ಓ ಚಿತ್ತಾಪೂರ ರವರ ಮಾರ್ಗದರ್ಶನದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಹೆಬ್ಬಾಳ ತಾ||ಚಿತ್ತಾಪೂರ ಜಿ||ಕಲಬುರಗಿ ಆಸ್ಪತ್ರೆಯಲ್ಲಿ ಪ್ರಪ್ರಥಮವಾಗಿ ಸಿಜರಿಯನ್ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಗೊಂಡಿದ್ದು, 3.1 ಕೆ.ಜಿ ತೂಕದ ಹೆಣ್ಣು ಮಗು ಜನಿಸಿದ್ದು, ತಾಯಿ ಮತ್ತು ಮಗು ಸ್ವಸ್ಥವಾಗಿರುತ್ತಾರೆ. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಮೋಹ್ಮದ ಇರ್ಫಾನ ಇನಾಮದಾರ ರವರು ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಂಡದ ಡಾ. ನಂದಿನಿ ಪ್ರಸೂತಿ ಸ್ತ್ರೀ-ರೋಗ ತಜ್ಞ, ಡಾ. ಶರಣಬಸಪ್ಪಾ ಸಂಗೊಳಗಿ ಮಕ್ಕಳ ತಜ್ಞರು, ಡಾ.ಅಜೀಮ ಅರವಳಿಕೆ ತಜ್ಞರು ಹಾಗೂ ಆಸ್ಪತ್ರೆಯ ಛಿಟiಟಿiಛಿಚಿಟ ಚಿಟಿಜ ಟಿoಟಿ ಛಿಟiಟಿiಛಿಚಿಟ ಅಧಿಕಾರಿ/ಸಿಬ್ಬಂದಿಗಳಿಗೆ ಶಸ್ತ್ರಚಿಕಿತ್ಸೆ ಯಶಸ್ವಿಗೊಂಡಿರುವುದಕ್ಕೆ ಅಭಿನಂದನೆ ಮತ್ತು ಹರ್ಷ ವ್ಯಕ್ತ ಪಡಿಸಿರುವುದಲ್ಲದೆ, ಹೆಬ್ಬಾಳ ಮತ್ತು ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರಿಗೆ ಸದರಿ ಶಸ್ತ್ರ ಚಿಕಿತ್ಸೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು.