ಸದ್ಭಾವನೆಗಳ ಕೃಷಿಕರಾಗಿ - ಹಾರಕೂಡ ಶ್ರೀ

ಸದ್ಭಾವನೆಗಳ ಕೃಷಿಕರಾಗಿ - ಹಾರಕೂಡ ಶ್ರೀ
ಪ್ರತಿಯೊಬ್ಬರು ಸದ್ಭಾವನೆಗಳ ಕೃಷಿಕರಾದಾಗ ಸಮಾಜ ಧರ್ಮದ ಉಗ್ರಾಣವಾಗಿ ಮಾರ್ಪಡುತ್ತದೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಗದಲೇಗಾಂವ ಬಿ. ಗ್ರಾಮದ ಭಕ್ತಾದಿಗಳಿಂದ ಆಯೋಜಿಸಿದ 868ನೇ ತುಲಾಭಾರ ಹಾಗೂ ಶ್ರಾವಣ ಮಾಸದ ನಿತ್ಯ ಪಾದಯಾತ್ರೆ ಮಹಾಮಂಗಲ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮನುಷ್ಯ ಭಾವನಾ ಜೀವಿಯಾಗಿದ್ದು, ಆತನಲ್ಲಿ ಹುಟ್ಟುವ ಭಾವನೆಗಳು ಭಗವದೀಯವಾಗಿದ್ದಲ್ಲಿ ವೈಯಕ್ತಿಕ ಹಾಗೂ ಸಾಮಾಜಿಕ ಜೀವನ ಸುಂದರ ಹಾಗೂ ಶ್ರೇಯಸ್ಸಿನಿಂದ ಕೂಡಿರುತ್ತದೆ.
ಬೇರೆಯವರ ಉನ್ನತಿ ಕಂಡು ಅಸೂಯೆ ಪಡದೆ, ಅವರಿಂದ ಪ್ರೇರಣೆ ಪಡೆದಾಗ ತೂಕದ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ಪಾದಯಾತ್ರೆ ಭಿನ್ನತೆ ತೊಲಗಿಸಿ ಭಾವೈಕ್ಯದ ಸದ್ಭಾವನೆ ಅರಳಿಸುತ್ತದೆ.
ಎಲ್ಲರೂ ಕೂಡಿ ನಡೆಯುವಾಗ, ಉಂಟಾಗುವ ಸಾಮರಸ್ಯದ ಭಾವ ಬಾಳಿಗೊಂದು ಸಹಜತೆಯ, ಸರಳತೆಯ ಪಾಠ ಬೋಧಿಸುತ್ತದೆ.
ಹಾರಕೂಡ ಗುರುಪೀಠದ ಮೇಲೆ ಇಟ್ಟಿರುವ ನಿಷ್ಠೆ ಭಕ್ತಿಯಿಂದ ಗದಲೇಗಾಂವ ಬಿ. ಗ್ರಾಮದ ಹಾಗೂ ಎಲ್ಲಾ ಭಕ್ತರ ಜೀವನ ಶುಭದಿಂದ ಕೂಡಿರಲಿ ಎಂದು ಹಾರೈಸಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಮಹಾಂತಪ್ಪ ಶ್ರೀಚಂದ, ನಾಗಣ್ಣ ಪಾಟೀಲ, ಗೋಪಾಲರಾವ ರಾಯಜಿ, ರಾಘವೇಂದ್ರರೆಡ್ಡಿ ಚುಮ್ಮನಚೂಡ, ವಿಜಯಕುಮಾರ ಬೈಟ ಪಾಟೀಲ, ತುಕಾರಾಮ ರೆಡ್ಡಿ ಬಾಕಾರೆ, ಸೋಮನಾಥ ಪೊಲೀಸ್ ಪಾಟೀಲ, ಶಿವಲಿಂಗಪ್ಪ ಪೊಲೀಸ್ ಪಾಟೀಲ, ಗೋವಿಂದ ರೆಡ್ಡಿ ಸೇಳಗೆ, ಕಲ್ಯಾಣರಾವ ಬೆಳಮಗೆ ಮುಂತಾದವರು ಉಪಸ್ಥಿತರಿದ್ದರು.
ಕಾರ್ತಿಕ ಸ್ವಾಮಿ ಯಲ್ಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು.
ಮಾನಸಿ ಸೂರ್ಯವಂಷಿ ಸಾಂಸ್ಕೃತಿಕ ನೃತ್ಯ ರೂಪಕ ಪ್ರಸ್ತುತಪಡಿಸಿದ್ದರು.
ಆನಂದಿ ಹರಿದಾಸ ಮತ್ತು ಮಾನಸಿ ಗದಲೇಗಾಂವ ಭರತನಾಟ್ಯ ಮಾಡಿದರು.
ಸಂತೋಷಿ ಹಡಪದ ಭಕ್ತಿ ಗೀತೆ ಹಾಡಿದರು.
ವಿಠಲ ಹೂಗಾರ ಸ್ವಾಗತಿಸಿ, ನಿರೂಪಣೆ ಮಾಡಿದರು.
ಮಹದೇವ ಪಾಟೀಲ ವಂದನಾರ್ಪಣೆ ಮಾಡಿದರು.
ಚಿತ್ರ : ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಗದಲೇಗಾಂವ ಬಿ. ಗ್ರಾಮದ ಭಕ್ತಾದಿಗಳಿಂದ ಆಯೋಜಿಸಿದ 868ನೇ ತುಲಾಭಾರ ಹಾಗೂ ಶ್ರಾವಣ ಮಾಸದ ನಿತ್ಯ ಪಾದಯಾತ್ರೆ ಮಹಾಮಂಗಲ ಕಾರ್ಯಕ್ರಮವನ್ನು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಮಹಾಂತಪ್ಪ ಶ್ರೀಚಂದ, ನಾಗಣ್ಣ ಪಾಟೀಲ, ಗೋಪಾಲರಾವ ರಾಯಜಿ, ವಿಜಯಕುಮಾರ ಬೈಟ ಪಾಟೀಲ, ಸೋಮನಾಥ ಪೊಲೀಸ್ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.