ದೊಡ್ಡಪ್ಪ ಅಪ್ಪ ಕಾಲೇಜಿನಲ್ಲಿ ಗಾಂಧಿ-ಶಾಸ್ತ್ರಿಜಿ ಜಯಂತಿ

ದೊಡ್ಡಪ್ಪ ಅಪ್ಪ ಕಾಲೇಜಿನಲ್ಲಿ ಗಾಂಧಿ-ಶಾಸ್ತ್ರಿಜಿ ಜಯಂತಿ

ದೊಡ್ಡಪ್ಪ ಅಪ್ಪ ಕಾಲೇಜಿನಲ್ಲಿ ಗಾಂಧಿ-ಶಾಸ್ತ್ರಿಜಿ ಜಯಂತಿ

ನಗರದ ದೊಡ್ಡಪ್ಪ ಅಪ್ಪ ವಸತಿ ವಿಜ್ಞಾನ ಪದವಿ-ಪೂರ್ವ ಮಹಾವಿದ್ಯಾಲಯದಲ್ಲಿ ಲಾಲ ಬಹಾದ್ದೂರ ಶಾಸ್ತ್ರಿ ಮತ್ತು ಮಹಾತ್ಮ ಗಾಂಧಿ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ ಕಲಬುರಗಿಯ ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷರಾದ ಶ್ರೀ. ಶಂಕರಯ್ಯ. ಆರ್. ಘಂಟೆ ರಂಗ ಭೂಮಿಯ ಹಿರಿಯ ನಿರ್ದೇಶಕರವರು ಮಾತನಾಡುತ್ತ ಭಾರತ ಸ್ವಾತಂತ್ರ್ಯ ಪಡೆಯುವಲ್ಲಿ ಗಾಂಧಿಜೀಯವರ ಪಾತ್ರ ಅಪಾರವಾಗಿದೆ. ಗಾಂಧಿಜೀಯು ಕೂಡ ದುಶ್ಚಟಗಳಿಗೆ ಒಳಗಾಗಿದ್ದಾರು ಅದರಿಂದ ಪಶ್ಚಾತಾಪಕ್ಕೆ ಒಳಗಾಗಿ ಅವುಗಳಲ್ಲಿ ತ್ಯೇಜಿಸಿದರು ಮಹಾತ್ಮಾ ಗಾಂಧಿಜಿಯವರು ದಕ್ಷಿಣ ಆಫ್ರಿಕಾಗೆ ಅಬ್ದುಲ್ ಶೇಠ ಅವರ ಪರವಾಗಿ ವಕೀಲ ಮಾಡಲು ತೆರಳಿದ್ದರು. ಆ ಸಂದರ್ಭದಲ್ಲಿ ಗಾಂಧಿಜೀಯವರು ಅಲ್ಲಿಯ ಜೀತದಾಳುಗಳನ್ನು ನೋಡಿ ಅವರ ಪರವಾಗಿ ಹೋರಾಟ ಮಾಡಿದರು ಅವರಿಗೆ ನ್ಯಾಯ ಒದಗಿಸಿ ಕೊಟ್ಟರು. ಗುಲಾಮಗಿರಿ ಪದ್ದತಿಯನ್ನು ದಕ್ಷಿಣ ಆಪ್ರಿಕಾದಿಂದ ಕಿತ್ತೋಗೆದರು.

ಗಾಂದೀಜಿಯವರಿಗೆ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟ ಕೈಗೊಳ್ಳಲು ದಕ್ಷಿಣ ಆಫ್ರಿಕಾ ಒಂದು ಸತ್ಯಾಗ್ರಹದ ಪ್ರಯೋಗ ಶಾಲೆಯಾಗಿ ಪರಿಗಣಿಸಿತು. ಬ್ರಿಟೀಷರು ಭಾರತದ ಕಚ್ಚಾ ವಸ್ತುಗಳನ್ನು ತೆಗೆದುಕೊಂಡು ಹೋಗಿ ಬಟ್ಟೆಗಳನ್ನು ತಯಾರಿಸಿ ಭಾರತಕ್ಕೆ ತಂದು ಮಾರುತ್ತಿದ್ದರು ಆದ್ದರಿಂದ ಭಾರತೀಯವರು ತಮ್ಮ ಬಟ್ಟೆಗಳನ್ನು ತಾವೇ ತಯಾರಿಸಿ ಕೊಳ್ಳಬೇಕೆಂದು ಚರಕ ಹಿಡಿದರು. ಅಹಿಂಸಾ ಚಳುವಳಿ, ಉಪ್ಪಿನ ಸತ್ಯಾಗ್ರಹ, ಭಾರತಬಿಟ್ಟು ತೋಲಗಿ, ಹೋರಾಟಗಳನ್ನು ಗಾಂಧಿಜೀ ಮಾಡಿದರು.

ಜೀವಿಗಳಿಗೆ ಕೊಲ್ಲುವ ಹಕ್ಕು ಮಾನವರಿಗಿಲ್ಲ ಜೀವ ಕೊಡುವ ಹಕ್ಕು ಮಾನವರಿಗಿಲ್ಲವೆಂದ ಮೇಲೆ ಜೀವ ತೆಗೆಯುವ ಹಕ್ಕು ಮಾನವರಿಗಿಲ್ಲ. ವಿದ್ಯಾಥಿಗಳ ಸ್ವಾಭಿಮಾನದಿಂದ ನಿಮ್ಮ ಬದುಕನ್ನು ಕಟ್ಟುಕೊಳ್ಳಬೇಕು. ಆಗ ಗಾಂಧಿ ಜಯಂತಿಯ ಆಚರಣೆಯ ಸಾರ್ಥಕವಾಗುತ್ತದೆ. ಗಾಂಧಿಜೀಯ ಬಗ್ಗೆ ಅಸಹ್ಯ ಮಾತನಾಡಬಾರದು. ಗಾಂಧಿಜಿಯ ವ್ಯಕ್ತಿತ್ವ ಉತ್ತಮವಾಗಿತ್ತು.

ಗಾಂಧಿ ತನ್ನ ನಾಲ್ಕು ಜನ ಮಕ್ಕಳನ್ನು ಗಾಂಧಿಜಿಯು ಮಡದಿಯವರು ಶಿಕ್ಷಣ ಕೊಡಿಸುತ್ತಾರೆ. ತನ್ನ ಮಗ ಹರಿಲಾಲ್‌ನನ್ನು ಪರವಹಿಸಲಿಲ್ಲ ಗಾಂಧಿಜಿಯವರು ಗಾಂಧಿಜಿ ನಿಜವಾಗಿ ಮಹಾತ್ಮಾನಾಗಿದ್ದು ಹೆಂಡತಿ ಕಸ್ತೂರಬಾಳಿಂದ.

ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ವಿನೋದಕುಮಾರ ಎಲ್ ಪತಂಗೆಯವರು ಹಾಜರಿದ್ದರು. ಕು.ಸಿಂಚನಾ ಹಾಗೂ ಬಾಗ್ಯಶ್ರೀ ಮಾಕೆರೆ ಅವರ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕರಾದ ಡಾ|| ಆನಂದ ಸಿದ್ದಮಣಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ಹಾಜರಿದ್ದರು. ರಾಷ್ಟ್ರೀಗೀತೆಯೋಂದಿಗೆ ಕಾರ್ಯಕ್ರಮ ಮುಕ್ತಾಂಯವಾಯಿತು.