ಕ್ಯಾಂಪ್ ಬೆಲ್ಸ್ ಶಾಲೆಯ ಮಕ್ಕಳು ಜೂಡೋ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಕ್ಯಾಂಪ್ ಬೆಲ್ಸ್ ಶಾಲೆಯ ಮಕ್ಕಳು ಜೂಡೋ  ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಕ್ಯಾಂಪ್ ಬೆಲ್ಸ್ ಶಾಲೆಯ ಮಕ್ಕಳು ಜೂಡೋ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಕಲಬುರಗಿ: ಉಪ ನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಳಗಾಂ ಜಿಲ್ಲೆ ಅವರು 14 ಮತ್ತು 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿ ರವರಿಗೆ ಆಯೋಜಿಸಿದ ರಾಜ್ಯ ಮಟ್ಟದ ಜೂಡೋ ಕ್ರೀಡಾಕೂಟದ ಸ್ಪರ್ಧೆಯಲ್ಲಿ ನಗರದ ಕ್ಯಾಂಪ್ ಬೆಲ್ಸ್ ಶಾಲೆಯ ಮಕ್ಕಳು ಕಲಬುರ್ಗಿ ಜಿಲ್ಲೆಯನ್ನು ಪ್ರತಿನಿಧಿಸಿ 17 ವರ್ಷದ ಬಾಲಕಿಯರ ಸ್ಪರ್ಧೆಯಲ್ಲಿ ಕುಮಾರಿ ಅನಾಮಿಕ ಅನಿಲಕುಮಾರ್ ಅದೇ ರೀತಿ 17 ವರ್ಷದೊಳಗಿನ ಬಾಲಕರ ಸ್ಪರ್ಧೆಯಲ್ಲಿ ಕುಮಾರ್ ಆದಿತ್ಯ ಅನಿಲಕುಮಾರ್ ಇವರಿಬ್ಬರು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ದಿನಾಂಕ 25.10.2025 ರಿಂದ ಬೆಳಗಾವಿ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಜುಡೋ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. 

ವಿದ್ಯಾರ್ಥಿಗಳ ಈ ಸಾಧನೆಗೆ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳಾದ ರಾಜಶೇಖರ್ ಗೋನಾಯಕ್, ತಾಲೂಕು ದೈಹಿಕ ಶಿಕ್ಷಣ ಅಧಿಕಾರಿಗಳಾದ ಬಸವರಾಜ್ ರಟಕಲ್, ದಶರಥ ಜಿಲ್ಲಾ ಮತ್ತು ತಾಲೂಕು ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಭೋಜನಗೌಡ ಪಾಟೀಲ್, ರಾಘವೇಂದ್ರ ಮುಸರಬು, ಅಶೋಕಕುಮಾರ್, ಚಂದ್ರಶೇಖರ್, ಗೋಶಾಲ್, ಮಲ್ಲಿಕಾರ್ಜುನ್ ಬಿದನೂರ ಹಾಗೂ ಶಾಲಾ ಆಡಳಿತ ಮಂಡಳಿಯ ಆಡಳಿತ ಅಧಿಕಾರಿ ಇಮಾನ್ವಲ್ ಜಯವಂತ್, ಮುಖ್ಯ ಗುರುಗಳಾದ ಸೂರ್ಯಕಾಂತ್ ಪವಾರ್ ತರಬೇತಿದಾರರಾದ ಅಶೋಕ್ ಮಲ್ಲೇಶಿ, ದೈಹಿಕ ಶಿಕ್ಷಕರಾದ ದತ್ತಾತ್ರೇಯ ಕೆ ಜೇವರ್ಗಿ ಮತ್ತು ಶ್ರೀಮತಿ ಶೀಲಾ ದೇವಿ ವಿದ್ಯಾರ್ಥಿಗಳ ಈ ಸಾಧನೆಯ ಶುಭ ಹಾರೈಸಿದ್ದಾರೆ.