ಲೇಖಕ ದಯಾನಂದ ಪಾಟೀಲರಿಗೆ ಗೌರವ ಸಮ್ಮಾನ

ಲೇಖಕ ದಯಾನಂದ ಪಾಟೀಲರಿಗೆ ಗೌರವ ಸಮ್ಮಾನ
ಮಹಾರಾಷ್ಟ್ರ: ಜತ್ತ ನೆರೆಯ ಕಾಗವಾಡ ತಾಲೂಕಿನ ಗಡಿನಾಡಿನಲ್ಲಿ ನಡೆದ "ಕನ್ನಡ ಜಾಗೃತಿ ಸಾಂಸ್ಕೃತಿಕ ಸಂಭ್ರಮ - 25" ಕಾರ್ಯಕ್ರಮದಲ್ಲಿ ಖ್ಯಾತ ಲೇಖಕರಾದ ದಯಾನಂದ ಪಾಟೀಲರನ್ನು ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾಗವಾಡ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ರಾಜು ಅಣ್ಣಾ ಕಾಗೆ ಅವರು ದಯಾನಂದ ಪಾಟೀಲರಿಗೆ ಸಮ್ಮಾನ ನೀಡಿ ಗೌರವಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಗಣ್ಯರಾದ ಡಾ. ವ್ಹಿ ಎಸ್ ಮಾಳಿ, ಎಂ.ಬಿ. ಹೂಗಾರ, ಡಾ. ಎಸ್.ಎ. ಕರ್ಕಿ, ಪಿ.ಬಿ. ನಂದಾಳೆ ಮತ್ತು ಸ್ಟಫ್ನೀಲ ಪಾಟೀಲರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಹಬ್ಬದ ವಾತಾವರಣ ಕಲ್ಪಿಸಿದರು.
ಈ ಕಾರ್ಯಕ್ರಮದ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮಹತ್ವವನ್ನು ಬಿಂಬಿಸುವ ಮಹತ್ವದ ಕಾಯಕವನ್ನು ನಿಭಾಯಿಸಲಾಯಿತು.