ಗಾಂಧೀಜಿ. ಶಾಸ್ತ್ರೀ ಜೀವನ ಮಾರ್ಗದರ್ಶಕ : ಪಿಡಿಒ ನಿರ್ಮಾಲಾ

ಗಾಂಧೀಜಿ. ಶಾಸ್ತ್ರೀ ಜೀವನ ಮಾರ್ಗದರ್ಶಕ : ಪಿಡಿಒ ನಿರ್ಮಾಲಾ

ಹೊಳಸಮುದ್ರ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಬುಧವಾರ ಮಹಾತ್ಮಾ ಗಾಂಧೀಜಿ ಜಯಂತಿ ಪ್ರಯುಕ್ತ ಶ್ರಮದಾನ ಮಾಡಿದರು.

ಗಾಂಧೀಜಿ. ಶಾಸ್ತ್ರೀ ಜೀವನ ಮಾರ್ಗದರ್ಶಕ : ಪಿಡಿಒ ನಿರ್ಮಾಲಾ 

ಕಮಲನಗರ: ಸರಳ ಬದುಕು ಎತ್ತರ ವ್ಯಕ್ತಿತ್ವದ ಆದರ್ಶಗಳ ಪಾಲನೆ ಕುರಿತು ಮಕ್ಕಳಲ್ಲಿ ಸದಾ ಜಾಗೃತ ಪ್ರಜ್ಞೆ ಮೂಡಿಸಬೇಕು. ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜೀವನ ದಾರಿದೀಪವಾಗಿದೆ ಎಂದು ಪಿಡಿಒ ನಿರ್ಮಲಾ ಹೇಳಿದರು.

ಬುಧವಾರ ಹೊಳಸಮುದ್ರ ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಿದ್ದ ಗಾಂಧೀ-ಶಾಸ್ತ್ರೀ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಮಹಾತ್ಮ ಗಾಂಧೀಜಿ ಅವರು ಪ್ರತಿಪಾದಿಸಿದ ಸಿದ್ಧಾಂತ ಜಗತ್ತಿಗೆ ಮಾರ್ಗದರ್ಶಕವಾಗಿದೆ. ಸರ್ವರನ್ನು ಸಮಾನವಾಗಿ ಕಂಡು ಸಮಾಜವನ್ನು ಶೋಷಣೆ ಮುಕ್ತವಾಗಿಸುವಲ್ಲಿ ಅವರು ಹಾಕಿಕೊಟ್ಟ ಸಿದ್ಧಾಂತ ಸಾರ್ವಕಾಲಿಕವಾಗಿ ಉಳಿಯಲಿದೆ. ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಪ್ರಾಮಾಣಿಕತೆಗೆ ಹೆಸರಾಗಿ ದೇಶ ಕಟ್ಟಿದವರು ಎಂದರು. 

ಕಾರ್ಯದರ್ಶಿ ರಂಗಾಚಾರಿ ಪ್ರತಿಜ್ಞಾ ವಿಧಿ ವಿಧಿಸಿದರು. 

ಅಧ್ಯಕ್ಷ ಯೋಗಿತಾ ಮಾರುತಿ ಆಳಂದೆ, ಡಿಇಒ ಮಹೇಶ ಬಳತೆ, ಬಿಲ್ ಕಲೆಕ್ಟರ್ ಪಾಂಡುರಂಗ ಜಾಧವ, ಗೋಪಾಳರಾವ ಪಾಟೀಲ, ಪ್ರದೀಪ ಪಾಟೀಲ, ಮಾಧವ ಬೆಣ್ಣೆ, ರಾಹುಲ ಪಾಟೀಲ, ಭೀಮ ಜಗದೊಂಡೆ, ಕೃಷ್ನಾ ಕಾಳೆ, ಸತೀಷ ಭೂರೆ, ಅಂಕುಶ ಗಾಯಕವಾಡ್, ಮಾರುತಿ ಆಳಂದೆ ಹಾಗೂ ಡಿಜಿಟಲ್ ಸಖಿ ಈರಮ್ಮಾ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.

ನಂತರ ಪೊರಕೆ ಹಿಡಿದು ಗ್ರಾಮದ ಪ್ರಮುಖ ಸ್ಥಳಗಳಾದ ರಾಮ ಮಂದಿರ ಆವರಣ, ಬಸವೇಶ್ವರ ವೃತ್ತ, ಶಿವಾಜಿ ವೃತ್ತ, ಬಸ್ ನಿಲ್ದಾಣ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿನ ಕಸ ಗೂಡಿಸಿ ಸ್ವಚ್ಛಗೊಳಿಸಿದರು.