ಉದನೂರ ಗ್ರಾಮಸ್ಥರಿಂದ ಶಾಸಕ ಹಾಗೂ ಆಯುಕ್ತರಿಗೆ ಎಚ್ಚರಿಕೆ

ಉದನೂರ ಗ್ರಾಮಸ್ಥರಿಂದ ಶಾಸಕ ಹಾಗೂ ಆಯುಕ್ತರಿಗೆ ಎಚ್ಚರಿಕೆ

ಉದನೂರ ಗ್ರಾಮಸ್ಥರಿಂದ ಶಾಸಕ ಹಾಗೂ ಆಯುಕ್ತರಿಗೆ ಎಚ್ಚರಿಕೆ

ಕಲಬುರಗಿ: ಉದನೂರ ಗ್ರಾಮದಲ್ಲಿ ಬೀದಿ ನಾಯಿಗಳ ಗೋದಾಮು ನಿರ್ಮಾಣ ಕಾಮಗಾರಿ ವಿರೋದಿಸಿ ನಡೆಸಿದ ಪ್ರತಿಭಟನಾ ನಿರತ ಸ್ಥಳಕ್ಕೆ ಭೇಟಿ ನೀಡಿದ ಶಾಸಕರಾದ ಅಲ್ಲಮ ಪ್ರಭು ಪಾಟೀಲ್ ಹಾಗೂ ಪಾಲಿಕೆ ಆಯುಕ್ತರಿಗೆ ಗ್ರಾಮಸ್ಥರಿಂದ ಎಚ್ಚರಿಕೆ ನೀಡಲಾಯಿತು.

ಗ್ರಾಮಸ್ಥರ ಬೃಹತ್ ಪ್ರತಿಭಟನೆ ಹಾಗೂ ಎಚ್ಚರಿಕೆಯಿಂದ ಎಚ್ಚೆತ್ತುಕೊಂಡ ಶಾಸಕ ಅಲ್ಲಮ ಪ್ರಭು ಪಾಟೀಲ್ ಅವರು ಈ ಸ್ಥಳದಲ್ಲಿ ಯಾವದೇ ಕಾರಣಕ್ಕೂ ನಾಯಿಗಳ ಗೋದಾಮು ನಿರ್ಮಾಣ ಕಾಮಗಾರಿ ಮಾಡುವದಿಲ್ಲ ಎಂದು ಭರವಸೆ ನೀಡಿದ್ದ ಪ್ರಯುಕ್ತ ಗ್ರಾಮಸ್ಥರು ಪ್ರತಿಭಟನೆ ಕೈ ಬಿಡಲಾಯಿತು.

ಸುಮಾರು 18 ವರ್ಷ ದಿಂದ ಕಲಬುರ್ಗಿ ಮಹಾನಗರ ಪಾಲಿಕೆಯವರು ಕಲಬುರ್ಗಿ ನಗರದ ಕಸ ವಿಲೇವಾರಿಯನ್ನು ಉದನೂರ ಗ್ರಾಮದಲ್ಲಿ ತಂದು ಬೇಕಾಬಿಟ್ಟಿ ಹಾಕುತ್ತಿರುವುದರಿಂದ ಗ್ರಾಮಸ್ಥರಿಗೆ ಡೆಂಗ್ಯೂ, ಮಲೇರಿಯಾ, ಲಕ್ವಾಗಳಂತಹ ಮಾರಕ ರೋಗಗಳು ಹರಡುತ್ತಿದ್ದು ನಗರದ ಎಲ್ಲಾ ನಾಯಿಗಳು ತಂದು ಬಿಡುತ್ತಿದ್ದಾರೆ ಇದರಿಂದ ಬೀದಿ ನಾಯಿಗಳು ಕ್ರೂರವಾಗಿ ಕುರಿಗಳು, ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿದ್ದು ದನಕರುಗಳು ಸತ್ತು ಹೋಗಿವೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಗ್ರಾಮಸ್ಥರು ಈ ಎಲ್ಲಾ ತೊಂಡರೆಗಳ ವಿರೋದಿಸಿ ಕೂಡಲೇ ಇದನ್ನು ಸರಿಪಡಿಸುವಂತೆ ಆಗ್ರಹಿದ ಗ್ರಾಮಸ್ಥರು ಶಾಸಕರಿಗೆ ಹಾಗೂ ಪಾಲಿಕೆ ಆಯುಕ್ತರಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶಿವಪುತ್ರ ಮಾಲಿಪಾಟೀಲ್, ಶಾಂತಕುಮಾರ್ ಬಿರಾದಾರ, ರವಿ ಪಾಟೀಲ್, ವಿಶ್ವನಾಥ್ ಪಾಟೀಲ್, ಹನಮಂತ್ರಾಯ ಕಪನೂರ, ಹಜರತ್ ಸಾಬ್, ಶುಭಾಷ್ ಚಂದ್ರ ಮುಲಗೆ, ವಿಠಲ ಚವಾಣ್, ಬಸವರಾಜ್, ಸತೀಶ್, ಮಲ್ಲಿಕಾರ್ಜುನ್, ಶಿವಪುತ್ರಪ್ಪ ಪಾಟೀಲ್. ಭೀಮಣ್ಣ ಶೇರಿಕರ, ರೇವಣಸಿದ್ದ ದುದನಿ, ಪ್ರಸನ್ನ, ಶುಭಂ ಶೇರಿಕರ್, ಮಾಂತೇಶ್ ಪಾಟೀಲ್, ಶರಣು.ಟಿ, ಗುಂಡು ಗಾವ್, ಶರಣು, ಪೂಜಾರಿ, ಗುಂಡು ದೇವಣ್ಣಗಾವ್, ಜೈಭಿಮು ಕೊರಳ್ಳಿ, ರಾಣಪ್ಪ ಕೊರಳ್ಳಿ ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.