ಅಂಬಾರಾಯ ಮಡ್ಡೆ

ಅಂಬಾರಾಯ ಮಡ್ಡೆ

ವೃತ್ತಿಯಲ್ಲಿ ಸಹಶೀಕ್ಷಕರಾಗಿರುವ ಶ್ರೀ ಅಂಬಾರಾಯ ಮಡ್ಡೆ ಇವರು ಮೃದು ಸ್ವಭಾವದವರಗಿದ್ದು, ಕಳಕಳಿಯುಳ್ಳ ವ್ಯಕ್ತಿಯಾಗಿದ್ದಾರೆ. ನಿರಂತರವಾದ ಅಧ್ಯಯನಶಿಲತೆ, ಕ್ರಿಯಾಶೀಲತೆ, ಉತ್ತಮವಾದ, ಮತ್ತು ವಿಶಿಷ್ಟ ಶೈಲಿಯ ನಿರೂಪಣೆ ಕೌಶಲ್ಯದಿಂದ ಹೆಸರಗಿದ್ದಾರೆ. ಇವರು ಮೂಲತ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮದಗುಣಕಿ ಗ್ರಾಮದವರಾಗಿದ್ದು, ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರು,. ಇವರು ಶ್ರೀಮತಿ ಲಕ್ಷ್ಮಿಬಾಯಿ ಶ್ರೀ ರಾಮಚಂದ್ರ ಮಡ್ಡೆ ಇವರ ದ್ವಿತೀಯ ಸುಪುತ್ರರಾಗಿ ದಿನಾಂಕ,07.07.1989 ರಲ್ಲಿ ಜನಿಸಿದರು. ಇವರು ಬಾಲ್ಯವನ್ನು ಬಡತನದಲ್ಲಿ ಕಳೆದ ಇವರು ಕಾರಣಾಂತರಗಳಿಂದ ಕಮಲಾಪುರ ತಾಲೂಕಿನ ಕುರಿಕೋಟ ಗ್ರಾಮಕ್ಕೆ ಕುಟುಂಬ ಸಮೇತರಾಗಿ ಬಂದು ನೆಲೆಸಿದ್ದಾರೆ. ಬಡತನದ ಹೋರಾಟದಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ ಇವರು ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ವಿಭಾಗದಲ್ಲಿ ಉನ್ನತ ಶ್ರೇಣಿಯೊಂದಿಗೆ ತೇರ್ಗಡೆಯಾಗಿದ್ದಾರೆ.

ವೃತ್ತಿಯಲ್ಲಿ ಪದವಿಧರ ಶಿಕ್ಷಕರಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದಸ್ತಾಪುರ ತಾ. ಕಮಲಾಪುರ ದಲ್ಲಿ ತಮ್ಮ ಶಿಕ್ಷಕ ಸೇವೆ ಪ್ರಾರಂಭಿಸಿ 08ವರ್ಷ ಸೇವೆ ಸಲ್ಲಿಸಿದ್ದರು. ನಂತರ ವರ್ಗಾವಣೆ ಹೊಂದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಹಾಗಾವ್ ಕ್ರಾಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆಯ ಎಲ್ಲ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿರುವುದು ಶಾಲೆಯ, ಇಲಾಖೆಯ ಹೆಮ್ಮೆಯ ಶಿಕ್ಷಕರು. ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಸ್ಪರ್ಧಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡುತ್ತಿದ್ದಾರೆ. ಇವರು ಸಾಮಾನ್ಯ ಕನ್ನಡ, ಸ್ಪರ್ಧೆಗಾಗಿ ಕನ್ನಡ ಎಂಬ ಎರಡು ಪುಸ್ತಕಗಳನ್ನು ಸಮರ್ಪಸಿದ್ದಾರೆ. ವಿದ್ಯಾರ್ಥಿ ಕವಿತೆ, ಕವನ, ಕಥೆ, ಬರೆಯುವಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಅನೇಕ ಕವನಗಳು ಪ್ರಕಟವಾಗಿವೆ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಕಾರ್ಯಕ್ರಮಗಳ ಯಶಸ್ಸಿನಲ್ಲಿ ಇವರ ನಿರೂಪಣೆ ಕೌಶಲ್ಯ ಉಪಯುಕ್ತವಾಗಿದೆ. ವಿಶೇಷವಾಗಿ ಮಠ, ಮಂದಿರ, ಜಗದ್ಗುರುಗಳ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿವೆ.

ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಕಮಲಾಪುರದ ಸದಸ್ಯರಾಗಿ, ಕಮಲಾಪುರ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಪರಿಷತ್ ವಲಯ ಘಟಕ ಮಹಾಗಾವ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಶಿಕ್ಷಕ ಸೇವೆಯನ್ನು ಗುರುತಿಸಿ "ಮಹಾತ್ಮಾ ಜ್ಯೋತಿಭಾ ಪುಲೆ ಪ್ರಶಸ್ತಿ ", ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ನೀಡುವ "ಜಿಲ್ಲಾ ಶ್ರೇಷ್ಠ ಶಿಕ್ಷಕ"ಪ್ರಶಸ್ತಿ, ಪಡೆದಿದ್ದಾರೆ,,. ತಾಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದಾರೆ. ಶಿಕ್ಷಕರ ಸಹ ಪಠ್ಯ ಚಟುವಟಿಕೆಯ "ಆಶುಭಾಷಣ "ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿಕ್ಷಕರ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ವೃತ್ತಿಯಲ್ಲಿ ಶಿಕ್ಷಕರಾಗಿ, ಪ್ರವೃತ್ತಿಯಲ್ಲಿ ನಿರೂಪಕರಾಗಿ, ಯುವ ಸಾಹಿತಿಗಳಾಗಿ, ವಿವಿಧ ಸಾಹಿತ್ಯ, ಸಂಘಟನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಮಲಾಪುರ ತಾಲೂಕು, ಕಲಬುರಗಿ ಜಿಲ್ಲಾ ಮಟ್ಟದ, ಅನುಭವ ಸಂಗಮ ಕಾರ್ಯಕ್ರಮ ಮುಂತಾದ 500ಕ್ಕೂ ಹೆಚ್ಚಿನ ವೇದಿಕೆಗಳಲ್ಲಿ ನಿರೂಪಣೆ ಮಾಡಿ ಯಶಸ್ವೀಯಾಗಿದ್ದಾರೆ. ಶಿಕ್ಷಕರಾಗಿ ಮಕ್ಕಳ, ಶಾಲೆಯ, ಇಲಾಖೆಯ ಅಭಿವೃದ್ಧಿ ಕಾರ್ಯದ ಜೊತೆಗೆ ಸಮುದಾಯದ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

                                                  ಡಾ.ಶರಣಬಸಪ್ಪ ವಡ್ಡನಕೇರಿ