ಡಾ.ವಾಸುದೇವ ಸೇಡಂ ಎಚ್ ಹೇಳಿಕೆ | ಕದಂಬ ಪಿಯು ಕಾಲೇಜಿನಲ್ಲಿ ಸ್ವಾತಂತ್ರೊಂತ್ಸವದ ಸರಣಿ ಉಪನ್ಯಾಸ ಮಾಲಿಕೆಗೆ ಚಾಲನೆ
ಸ್ವಾತಂತ್ರ ಹೋರಾಟಗಾರರ ಸ್ಮರಣೆ ಅಗತ್ಯ
ಯಡ್ರಾಮಿ: ನಮ್ಮ ದೇಶದ ಸ್ವಾತಂತ್ರಕ್ಕಾಗಿ ಅನೇಕ ಹೋರಾಟಗಾರರು, ದೇಶಪ್ರೇಮಿಗಳ ತಮ್ಮ ಜೀವವನ್ನು ನೀಡಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಅವರ ಬಗ್ಗೆ ಅಧ್ಯಯನ, ಸ್ಮರಣೆ ಮಾಡಬೇಕು. ಗುರು-ಹಿರಿಯರು, ತಂದೆ-ತಾಯಿ, ದೇಶಕ್ಕೆ ಗೌರವ ನೀಡಬೇಕು. ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ದೇಶಕ್ಕೆ ಉನ್ನತವಾದ ಸೇವೆಯನ್ನು ನೀಡಬೇಕು ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಎಚ್. ಹೇಳಿದರು.
ಪಟ್ಟಣದ ಕದಂಬ ಪದವಿ ಪೂರ್ವ ಕಾಲೇಜಿನಲ್ಲಿ ‘ನಿಸರ್ಗ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ’ಯು ತನ್ನ ಸ್ಥಾಪನೆಯ ಬೆಳ್ಳಿ ಮಹೋತ್ಸವ ಪ್ರಯುಕ್ತ ದೇಶದ ಸ್ವಾತಂತ್ರೊತ್ಸವದ ಅಂಗವಾಗಿ ಹಮ್ಮಿಕೊಂಡ ಸರಣಿ ಉಪನ್ಯಾಸ ಮಾಲಿಕೆ ಮಂಗಳವಾರ ಜರುಗಿದ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ಮಾಜಿ ಸೈನಿಕ ರೇಣುಕಾಚಾರ್ಯ ಎಸ್.ಸ್ಥಾವರಮಠ, ಯುವಕರಲ್ಲಿ ದೇಶಪ್ರೇಮ ಮೈಗೂಡಬೇಕಾಗಿದೆ. ಅನೇಕ ಮಹನೀಯರ ಫಲವಾಗಿ ದೇಶ ಸ್ವಾತಂತ್ರವಾಗಿದೆ. ಅದನ್ನು ಉಳಿಸಿಕೊಂಡು ಹೋಗುವಲ್ಲಿ ದೇಶದ ಪ್ರತಿಯೊಬ್ಬರು ಸೈನಿಕರಂತೆ ಕಾರ್ಯನಿರ್ವಹಿಸಬೇಕಾಗಿದೆ. ಜಾತಿ, ಧರ್ಮ, ಭಾಷೆ, ಪ್ರದೇಶ ಇವೆಲ್ಲವುಗಳನ್ನು ಮೀರಿ ನಾವೆಲ್ಲರು ಭಾರತೀಯರು ಒಂದೇ ಎಂಬ ಭಾವನೆ ಮೈಗೂಡಿಸಿಕೊಳ್ಳಬೇಕಾಗಿದೆ. ರಾಜಕಾರಣಿಗಳು, ಅಧಿಕಾರಿಗಳು ಅಧಿಕಾರದಾಹದಿಂದ ಹೊರಬಂದು ದೇಶಕ್ಕಾಗಿ ದುಡಿಯಬೇಕು. ದೇಶದ ಭವಿಷ್ಯ ಯುವಕರ ಮೇಲಿದ್ದು, ಇದನ್ನು ಜವಬ್ದಾರಿಯಿಂದ ಮಾಡಬೇಕು ಎಂದು ಅನೇಕ ದೃಷ್ಟಾಂತಗಳೊAದಿಗೆ ವಿವರಿಸಿದರು.
ನಿಸರ್ಗ ಸಂಸ್ಥೆಯ ಕಾರ್ಯದರ್ಶಿ ದೂಳಪ್ಪ ಬಿ.ದ್ಯಾಮನಕರ್ ಮತ್ತು ಕಾಲೇಜಿನ ಪ್ರಾಚಾರ್ಯ ದೇವೇಂದ್ರ ಬಿ.ಗುಡೂರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜೇವರ್ಗಿ ಸರ್ಕಾರಿ ಪಿಯು ಕಾಲೇಜಿನ ಅರ್ಥಶಾಸ್ತç ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಕಾಲೇಜಿನ ಉಪನ್ಯಾಸಕರಾದ ಉತ್ತರದೇವಿ ಎ.ಜೆ, ಮಹಾನಂದ ಹಿರೇಮಠ, ಅಬ್ದುಲ್ವಾಬ್, ಆರ್.ಬಿ.ಮಯೂರ, ಕಾಶಿನಾಥ ಎಂ.ನವಲಕರ್, ಭಾಗ್ಯಶ್ರೀ ಗೌಡಗೇರಿ, ಸೇವಕಿ ಸುಧಾಬಾಯಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿನಿಯರಾದ ಸಂಜನಾ ಹಾಗೂ ಈಶ್ವರಿ ಪ್ರಾರ್ಥಿಸಿದರು. ಉಪನ್ಯಾಸಕರಾದ ಇಬ್ರಾಹಿಂಸಾಬ್ ವಸ್ತಾರಿ ಸ್ವಾಗತಿಸಿದರು. ಸಿದ್ರಾಮಯ್ಯ ಹಿರೇಮಠ ನಿರೂಪಿಸಿದರು. ಪ್ರತಿಭಾ ಬಿ.ಜಿ ವಂದಿಸಿದರು.