ಆಳಂದ ಆರೋಗ್ಯ ಇಲಾಖೆ ಉತ್ತಮ ಕಾರ್ಯಕ್ಕೆ ಪ್ರಶಂಸೆಯ ಗರಿ

ಆಳಂದ ಆರೋಗ್ಯ ಇಲಾಖೆ ಉತ್ತಮ ಕಾರ್ಯಕ್ಕೆ ಪ್ರಶಂಸೆಯ ಗರಿ

ಆಳಂದ ಆರೋಗ್ಯ ಇಲಾಖೆ ಉತ್ತಮ ಕಾರ್ಯಕ್ಕೆ ಪ್ರಶಂಸೆಯ ಗರಿ

ಆಳಂಈ : 2024 25 ನೇ ಸಾಲಿನ ಎನ್ ಕ್ಯೂ.ಎ.ಎಸ್.,ಲಕ್ಷ್ ಮತ್ತು ಮುಸ್ಕಾನ್ ಕಾರ್ಯಕ್ರಮದನ್ವಯ ಸರ್ಕಾರಿ ಆಸ್ಪತ್ರೆಗಳ ರಾಷ್ಟ್ರೀಯ ಪ್ರಮಾಣಿಕರಣ ಪಡೆದ ಆರೋಗ್ಯ ಸಂಸ್ಥೆಗಳಿಗೆ ಪ್ರಶಂಸನೀಯ ಹಾಗೂ ಸನ್ಮಾನ ಸಮಾರಂಭವನ್ನು ಜಿಲ್ಲಾಧಿಕಾರಿ ಬಿ.ಪೌಜಿಯಾ ತರನ್ನುಮ್ ಕಲಬುರ್ಗಿ ಹಾಗೂ ಅಧ್ಯಕ್ಷರು ಜಿಲ್ಲಾ ಗುಣಮಟ್ಟ ಭರವಸೆ ಸಮಿತಿ ಕಲಬುರ್ಗಿ ಅವರಿಂದ ಜಿಲ್ಲಾಧಿಕಾರಿ. ಕಛೇರಿಯಲ್ಲಿ ಹಮ್ಮಿಕೊಳ್ಳಲಾಯಿತು. 

ಈ ಸಂದರ್ಭದಲ್ಲಿ ಆಳಂದ್ ತಾಲೂಕ ಆರೋಗ್ಯ ಅಧಿಕಾರಿ ಡಾ ಸುಶೀಲ್ ಕುಮಾರ್ ಅಂಬುರೆ ಅವರಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ನಂತರ ಮಾತನಾಡಿದ ಡಾ. ಸುಶೀಲ್ ಕುಮಾರ್ ಅಂಬುರೆ ಈ ಅಭಿನಂದನಾ ಪತ್ರ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ಸಿಬ್ಬಂದಿಯ ಕರ್ತವ್ಯ ನಿಷ್ಠೆಗೆ ಮತ್ತು ಹಿರಿಯ ಅಧಿಕಾರಿಗಳ ಅವರ ಸಹಕಾರದಿಂದ ಒಲಿದು ಬಂದಿದೆ ಎಂದರು .

ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಖ್ಯಾತನಾಳ,ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಮತ್ತು ನೋಡಲ್ ಅಧಿಕಾರಿಗಳು ಕ್ವಾಲಿಟಿ ಆಶುರೆನ್ಸ್ ಕಾರ್ಯಕ್ರಮದ ಡಾ. ಶಿವಶರಣಪ್ಪ ಎಂ. ಡಿ ., ಜಿಲ್ಲಾ ಆರ್ ಸಿ ಎಚ್ ಅಧಿಕಾರಿ ಡಾ. ವಿವೇಕಾನಂದ್ ರೆಡ್ಡಿ , ಸಮೀಕ್ಷಣಾಧಿಕಾರಿಗಳು ಡಾ. ರಾಕೇಶ್ ಕಾಂಬಳೆ, ಆಳಂದ್ ತಾಲೂಕ ಆರೋಗ್ಯ ಅಧಿಕಾರಿ ಡಾ. ಸುಶೀಲ್ ಕುಮಾರ್ ಅಂಬೋರೆ ಹಾಗೂ ಎಲ್ಲಾ ತಾಲೂಕ ಆರೋಗ್ಯ ಅಧಿಕಾರಿಗಳು ಜಿಲ್ಲಾ ಸಂಯೋಜಕರು ಕ್ವಾಲಿಟಿ ಆಶುರೆನ್ಸ್ ಡಾ. ವಿನೋದ್ ಕುಮಾರ್ ಬಿರಾದರ್,ಜಿಲ್ಲಾ ಆಸ್ಪತ್ರೆಯ ಕ್ವಾಲಿಟಿ ವ್ಯವಸ್ಥಾಪಕರು ಮಹ್ಮದ್ ಇರ್ಫಾನ್ ಎಸಿಪಿಎ ಕ್ವಾಲಿಟಿ ಆಶುರನ್ಸ್ ಕಾರ್ಯಕ್ರಮದ ನೀಲಕಂಠಪ್ಪ ಇದ್ದರು ಇದ್ದರು.