ದೀಪ ಹಚ್ಚುವ ಹಬ್ಬ,

ದೀಪ ಹಚ್ಚುವ ಹಬ್ಬ,
ದೀಪಗಳು ಹೊರಗಿನ ಕತ್ತಲೆಯನ್ನು ಕಳೆದರೆ,
ಜ್ಞಾನವು ಓಳಗಿನ ಕತ್ತಲೆಯನ್ನು,
ಸಾಲು ಪಣತಿಯಲ್ಲಿ ದೀಪ ಹಚ್ಚುವ ಹಬ್ಬ,
ಕತ್ತಲೆ ಕಳೆದು ಹರುಷ ಹಂಚುವ ಹಬ್ಬ.
ಮನೆ ಮನಸಿಗೂ ಖುಷಿ ಕೊಡುವ ಹಬ್ಬ,
ಎಲ್ಲರೂ ಒಂದಾಗಿ ಫಲಾಹಾರ ಹಂಚುವ ಹಬ್ಬ,
ಕಾರ್ತಿಕ್ ಮಾಸದಲ್ಲಿ ಪಣತಿಗೆ ಹೆಚ್ಚಿದ ಬೇಡಿಕೆ,
ಕುಂಬಾರನ ಬದುಕಿಗೆ ಸಂತಸದ ಶ್ರೀಮಂತಿಕೆ.
ಪ್ರಕೃತಿಯ ಮಡಿಲ ಮಕ್ಕಳು ನಾವೆಲ್ಲರೂ,
ಪಣತಿಯು ಪ್ರಕೃತಿಯ ಕೊಡಿಗೆ,
ಬಡವರಿಗೂ ಕೈಗೆ ನಿಲುಕುವ ಪಣತಿ,
ಕುಂಬಾರನ ಕೈ ಸುಂದರ ಅಕೃತಿ.
ಪ್ರಕೃತಿಯ ಕೊಡಿಗೆಯಲ್ಲವೇ ಎಣ್ಣೆ, ಬತ್ತಿ,
ಸುಂದರ, ಸೊಬಗು ಈ ನಮ್ಮ ಪ್ರಕೃತಿ,
ಭಾರತಾoಬೆಯ ಮಕ್ಕಳು ನಾವು ವಿಶ್ವಕ್ಕೆ ಮಾದರಿ,
ನಮ್ಮ ಸಂಸ್ಕೃತಿ ಇಡಿ ವಿಶ್ವಕ್ಕೆ ಆರತಿ.
ವಿ. ಚ. ಸಿ.