ಬುದ್ಧಿವಂತರಿಗಾಗಿ

ಬುದ್ಧಿವಂತರಿಗಾಗಿ

ಬುದ್ಧಿವಂತರಿಗಾಗಿ...

ದೊಡ್ಡವರಾಗಿದ್ದೇವೆ ? ಸರ್ವರೂ ದಡ್ಡರೆಂಬ ಬ್ರಮೆಯೊಂದಿಗೆ 

ಬುದ್ದಿವಂತರಾಗಿದ್ದೇವೆ ? ನಮ್ಮವರನ್ನು ತುಳಿಯುವುದರೊಂದಿಗೆ

ಜ್ಞಾನಿಗಳಾಗಿದ್ದೇವೆ ? ದೀಪ ಹಚ್ಚುವ ಹಮ್ಮಿನೊಳಂದಿಗೆ 

ವಿದ್ವಾಂಸರಾಗಿದ್ದೇವೆ ? ಮನಸ್ಸನ್ನು ಧ್ವಂಸಗೊಳಿಸುವುರೊAದಿಗೆ.

ವಿಶ್ವ ಮುಷ್ಟಿಯಲ್ಲಿದೆ; ಕಡ್ಡಿ ಪೆಟ್ಟಿಗೆಯೊಂದಿಗೆ, 

ಪ್ರಾಚೀನ ಪ್ರಜ್ಞೆ; ಅನಾಥವಾಗಿದೆ ಪಾಚಿಯೊಂದಿಗೆ 

ಧರ್ಮ, ಸಿದ್ದಾಂತಗಳು: ನಲಗುತ್ತಿವೆ ಬಿಳಿ ಆನೆಗಳೊಂದಿಗೆ, 

ಸಂಸ್ಕೃತಿ, ಸಂಸ್ಕಾರ. ಮಿಲನವಾಗುತ್ತಿವೆ ಕಾಳ-ಬೆಳಕಿನೊಂದಿಗೆ,

ಪ್ರಕೃತಿ-ವಿಕೃತಿಯಾಗಿ: ಆಚಾರ-ಅನಾಚಾರವಾಗಿ,

ಚಿಂತನೆ-ಚಿAತೆಯಾಗಿ ವಿಚಾರ-ವಿಶ್ರಾಂತಿ ಪಡೆದಿದೆ 

ಸಂವಿಧಾನ-ಅಡಿಯಲ್ಲಿ; ವಾಹಿನಿಗಳ ಅಬ್ಬರವಾಗಿ 

ಯೋಜನೆ, ಕೌಶಲ್ಯ ಸಾಮರ್ಥ್ಯ ಕತ್ತಲೊಳಗೆ ಸಾಬಿತಾಗಿದೆ

ಪ್ರಬುದ್ಧ, ಸಮೃದ್ಧ, ನಾಗಾಲೋಟದ ಆ-ಕರಣಗಳು 

ಯಂತ್ರ, ತಂತ್ರದ ಸಂಘರ್ಷ, ಮರಣದ ವ್ಯಾಪಾರಗಳು 

ಬಂದೂಕಿನ ತುದಿಗೆ ಕಟ್ಟಿಕೊಳ್ಳುವ ಗೂಡುಗಳು 

ಹೊಕ್ಕಳು ಹೂ-ಬಳ್ಳಿ-ಕಳಚಿ ಅನಾಥವಾಗುವ ಕಂಕುಳಗಳು 

                        -ಸಿದ್ರಾಮ ರಾಜಮಾನೆ (ಸಿರಾ) 9449986157