ಪ್ರೀತಿಯ ಉಂಡಿ
ಪ್ರೀತಿಯ ಉಂಡಿ
ಬಾ ಪುಟ್ಟ ಬಾ ಪುಟ್ಟ
ಉಂಡಿ ತಿನ್ನುವ
ಉಂಡಿ ತಿಂದು ಗಟ್ಟಿಯಾಗಿ
ಆಟ ಆಡುವ
ಎಷ್ಟು ರುಚಿ ಅಮ್ಮ ಇವು
ಎಲ್ಲಿಂದ ತಂದಿರುವೆ
ತುಪ್ಪ ಹಚ್ಚಿದ ಈ ಉಂಡಿ
ಇಂದೇ ಕಂಡಿರುವೆ
ಶಿವಮೊಗ್ಗದಿಂದ ಬಂದಿವೆ
ಈ ಪ್ರೀತಿ ಉಂಡಿ
ರಾಗ ಅನುರಾಗದ ಈ
ಜೀವದ ಉಂಡಿ
ಕಾಳು ಕಾಳು ಕಟ್ಟಿದ ಅದರ
ಬಣ್ಣ ನೋಡು
ಒಂದೊಂದು ಕಾಳಿನ ಅದರ
ಸವಿಯು ನೋಡು
ನಿಮ್ಮಪ್ಪ ಕವಿಯಪ್ಪ
ಭಾವ ಬೆಲ್ಲ
ಸವರಿದಳು ನನ್ನವ್ವ
ನನ್ನ ಗಲ್ಲ
ರಾಜೇಂದ್ರ ಕೆ ಝಳಕಿ