ಪಿಎಸ್ಐ ಪರಶುರಾಮ ಸಾವು ಕುರಿತು ಸಿಬಿಐ ತನಿಖೆ ನಡೆಸಿ ನ್ಯಾಯ ಒದಗಿಸಲು: ಡಾ ಅಂಬಾರಾಯ ಅಷ್ಠಗಿ ಆಗ್ರಹ

ಪಿಎಸ್ಐ ಪರಶುರಾಮ ಸಾವು ಕುರಿತು ಸಿಬಿಐ ತನಿಖೆ ನಡೆಸಿ ನ್ಯಾಯ ಒದಗಿಸಲು: ಡಾ ಅಂಬಾರಾಯ ಅಷ್ಠಗಿ ಆಗ್ರಹ

ಕಲಬುರಗಿ: ಯಾದಗಿರಿ ನಗರ ಠಾಣೆಯ ಪಿಎಸ್‍ಐ ಪರಶುರಾಮ ಅವರ ಸಾವಿನ ಕುರಿತು ಸಿಬಿಐ ತನಿಖೆ ಮಾಡಿಸಿ ಕುಟುಂಬಸ್ಥರಿಗೆ ಸುಕ್ತ ನ್ಯಾಯ ಒದಗಿಸಿ ಕೊಡಬೇಕು’ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ ಅಂಬಾರಾಯ ಅಷ್ಠಗಿ ರಾಜ್ಯ ಸರ್ಕಾರಕ್ಕೆ ಆಗ್ರಹಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಠಾಣೆಯಲ್ಲಿ ಮುಂದುವರಿಯಲು ಸ್ಥಳೀಯ ಶಾಸಕರು ಮತ್ತು ಅವರ ಪುತ್ರ ಪಿಎಸ್ಐ ಪರಶುರಾಮನಿಗೆ ₹30 ಲಕ್ಷ ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು ನೋಡಿದರೆ ಸರ್ಕಾರದಲ್ಲಿ ಭೃಷ್ಟಾಚಾರ ಯಾವ ಮಟ್ಟದಲ್ಲಿ ತಾಂಡವವಾಡುತ್ತಿದೆ ಎಂಬುದು ಮೇಲ್ನೊಟಕ್ಕೆ ಕಾಣುತ್ತದೆ ಎಂದು ಡಾ ಅಂಬಾರಾಯ ಅಷ್ಠಗಿ ಕಳವಳ ವ್ಯಕ್ತಪಡಿಸಿದ್ದಾರೆ..

ಪಿಎಸ್‍ಐ ಪರಶುರಾಮ ಸಾವಿನ ಸೂಕ್ತ ತನಿಖೆಯಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ರಾಜ್ಯ ಸರ್ಕಾರ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಅವರ ಪತ್ನಿ ಶ್ವೇತಾ ಅವರಿಗೆ ಪಿಎಸ್‍ಐ ಸ್ಥಾನಮಾನ ಅಥವಾ ಅದಕ್ಕಿಂತಲೂ ಮೇಸ್ಥರದ ಡಿವೈಎಸ್ಪಿ ಹುದ್ದೆ ನೀಡಬೇಕು’ ಹಾಗೂ ಅವರ ಕುಟುಂಬಕ್ಕೆ 2 ಕೋಟಿ ರೂಪಾಯಿಗಳ ಪರಿಹಾರ ನೀಡಬೇಕೆಂದು ಡಾ ಅಂಬಾರಾಯ ಅಷ್ಠಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.