ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ

ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ

ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ

ಕಲಬುರಗಿ : ತಾಲೂಕಿನ ಕಡಣಿ ಗ್ರಾಮದ ಬಗರ ಹುಕುಂ ಸಾಗುವಳಿ ಅರ್ಜಿಗಳನ್ನು ಇತ್ಯರ್ಥ ಕುರಿತು ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ನಗರದ ತಹಶಿಲ್ದಾರರ ಕಚೇರಿ ಸಭಾಂಗಣದಲ್ಲಿ ಕರೆಯಲ್ಲಿಗಿದ್ದ ಸಭೆಯಲ್ಲಿ ಬಗರ ಹುಕುಂ ಸಾಗುವಳಿ ರೈತರು, ತಹಶಿಲ್ದಾರರು ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿ ರೈತರಿಗೆ ಸಂಭAದಿಸಿದ ದಾಖಲಾತಿ ನೀಡುವಂತೆ ಸೂಚಿಸಿದರು. 

ಈ ವೇಳೆ ಮಾತನಾಡಿದ 11ಜನ ಬಗರ ಹುಕುಂ ಅರ್ಜಿದಾರರನ್ನು ಕರೆದು ವಿಚಾರಣೆ ಮಾಡಲಾಗಿದ್ದು, ಸಂಬAಧಿಸಿದ ಮಾಹಿತಿ ಹಾಗೂ ದಾಖಲಾತಿಗಳನ್ನು ತೆಗೆದುಕೊಂಡು ಜನೆವರಿ 24ನೇ ಬರಲು ತಿಳಿಸಲಾಗಿದ್ದು, ಸುಮಾರು 35ವರ್ಷಗಳ ಹಿಂದೆ ಇದ್ದವರು ಯಾರು ಬದುಕುಳಿದಿಲ್ಲದ ಕಾರಣ ಅವರ ಸಂಬAಧಿಕರಿಗೆ ಸೂಕ್ತ ದಾಖಲಾತಿಗಳೊಂದಿ ಬರಲು ತಿಳಿಸಲಾಗಿದೆ. ಸೂಕ್ತ ದಾಖಲಾತಿ ದೊರೆತ ನಂತರ ಅರ್ಜಿಗಳ ಇತ್ಯಾರ್ಥ ಮಾಡಲಾಗುವುದು ಎಂದು ತಿಳಿಸಿದರು. 

ಬಳಿಕ ಮಾತನಾಡಿದ ತಹಶಿಲ್ದಾರ ಆನಂದ ಶೀಲ್ ಅವರು, ಸರ್ಕಾರದ ಆದೇಶದಂತೆ ಶಾಸಕರ ಅಧ್ಯಕ್ಷತೆಯಲ್ಲಿ ಪ್ರಥಮ ಸಭೆ ನಡೆಸಲಾಗಿದ್ದು, ದಾಖಲಾಗಿದೆ ಬಂದ ನಂತರ ಸಮಿತಿ ಪರಿಶೀಲನೆ ಮಾಡಿ ಜನೆವರಿ 24ರಂದು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. 

ಸಭೆಯಲ್ಲಿ ಸಮಿತಿಯ ಸದಸ್ಯರಾದ ಅರ್ಜುನ್ ಗೊಬ್ಬೂರಕರ್, ಸಾಹೇರಾಬಾನು, ಭೀಮಾಶಂಕರ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

.