ಗಾಂಧೀಜಿ ಸ್ಮರಣೆಗೆ ಸ್ವಚ್ಛತೆಯೇ ಸೇವೆ ಅಭಿಯಾನ :..

ಗಾಂಧೀಜಿ ಸ್ಮರಣೆಗೆ ಸ್ವಚ್ಛತೆಯೇ ಸೇವೆ ಅಭಿಯಾನ :..

ಗಾಂಧೀಜಿ ಸ್ಮರಣೆಗೆ ಸ್ವಚ್ಛತೆಯೇ ಸೇವೆ ಅಭಿಯಾನ 

ಶಹಾಬಾದ : - ಮಹಾತ್ಮ ಗಾಂಧೀಜಿ ಅವರ ಜನ್ಮದಿನದ ಅಂಗವಾಗಿ ತಾಲ್ಲೂಕಡಳಿತದ ವತಿಯಿಂದ ಹಮ್ಮಿಕೊಂಡಿರುವ 'ಸ್ವಚ್ಛತೆಯೇ ಸೇವೆ' ಅಭಿಯಾನದ ಭಾಗವಾಗಿ ತಹಶೀಲ್ ಕಾರ್ಯಾಲಯದಲ್ಲಿ

 ತಹಶೀಲ್ದಾರ್ ಜಗದೀಶ ಚೌರ ಕಸ ಗುಡಿಸಿ ಚಾಲನೆ ನೀಡಿದರು. 

ಈ ಸಂಧರ್ಭದಲ್ಲಿ ಮಾತನಾಡಿದ ಅವರು ದೇಶದ ಉದ್ದಗಲದ ಎಲ್ಲ ಸಂಘಟನೆಗಳೂ ದೇಶವನ್ನು ಶುಭ್ರಗೊಳಿಸಲು ವಿವಿಧ ರೀತಿಯಲ್ಲಿ ಸಂಘಟಿತರಾಗಿ ಇದು ನಮ್ಮ ಮೂಲಭೂತ ಕರ್ತವ್ಯ ಎಂದೇ ಭಾವಿಸಿ ನಗರ, ಬೀದಿ, ಬಡಾವಣೆಗಳಲ್ಲಿನ ಸ್ವತ್ಛತೆಯನ್ನು ಕಾಪಾಡಲು ಕಸಪೊರಕೆ ಹಿಡಿದಿರುವುದಿದೆಯಲ್ಲ, ಇದನ್ನು ಸ್ವಾತಂತ್ರ್ಯಾ ನಂತರದ ಮಹತ್ವದ ಆಂದೋಲನವೆಂದೇ ಹೇಳಬಹುದು, 

ಗಾಂಧೀಜಿ ಅವರ ಸರಳ ಜೀವನದಲ್ಲಿ ಸ್ವಚ್ಛತೆಯ ಸಂದೇಶವೂ ಇತ್ತು, ಪ್ರಕೃತಿ ಮಲಿನಗೊಳ್ಳದಿರಲು ನಿಸರ್ಗವನ್ನು ಸಂರಕ್ಷಿಸಲೂ ಕರೆ ನೀಡಿದ್ದರು ಮತ್ತು ತಾಯಿನಾಡಿನ ಸ್ವತ್ಛತೆಗೆ ಗಾಂಧೀಜಿ ನಾಂದಿಯಾದವರು ಎಂದರು. 

ನಗರ ಸಭೆಯ ಪೌರಾಯುಕ್ತ ಡಾ. ಗುರುಲಿಂಗಪ್ಪ ಮಾತನಾಡಿ, ಸ್ವಚ್ಛತೆಯೇ ಸೇವೆ ಅಭಿಯಾನದಡಿ ಗ್ರಾಮ ಮಟ್ಟದಿಂದ ಶಾಲಾ ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ, ಶಾಲಾ ಮಕ್ಕಳಿಗೂ ಸಹ ಈಗಿನಿಂದಲೇ ಸ್ವಚ್ಛತೆಯ ಪ್ರಜ್ಞೆಯನ್ನು ಮೂಡಿಸಲಾಗುತ್ತಿದೆ, ಸ್ಥಳೀಯವಾಗಿರುವ ಸರ್ಕಾರೇತರ ಸಂಸ್ಥೆಗಳು, ಸಾಮಾಜಿಕ ಕ್ಲಬ್‌ಗಳು, ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರನ್ನು ಸಹ ಅಭಿಯಾನದಲ್ಲಿ ಒಳಗೊಂಡಿದ್ದಾರೆ, ಅಲ್ಲಲ್ಲಿ ಜಾಗೃತಿ ಜಾಥಾ ಮೂಡಿಸಲಾಗುತ್ತಿದೆ, ಒಟ್ಟಿನಲ್ಲಿ ಸ್ವಚ್ಛತೆಯ ಕುರಿತು ಸಾರ್ವಜನಿಕವಾಗಿ ಅರಿವು ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದರು.

ಈ ಸಂಧರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಗುರುರಾಜ ಸಂಗಾವಿ, ಪಿಎಸ್ಐ ಚಂದ್ರಕಾಂತ ಮಕಾಲೆ, ತಾ. ಪಂ. ಅನಿಲಕುಮಾರ ಮಾನ್ಪಡೆ, ಜೆಸ್ಕಾಂ ಎಇಇ ಸೈಯದ್ ಯೂನುಷ, ಅಗ್ನಿಶಾಮಕ ದಳದ ಪಿಎಸ್ಐ ನಾಗರಾಜ, ಪ್ರಾ. ಶಾ. ಸಿ. ಸಂ ದ ಅಧ್ಯಕ್ಷ ಶಿವಪುತ್ರ ಕರಣಿಕ, ಶರಣಗೌಡ ಸೇರಿದಂತೆ ಅನೇಕರು ಇದ್ದರು.

ಶಹಾಬಾದ್ ತಾಲೂಕು ವರದಿ ನಾಗರಾಜ್ ದಂಡಾವತಿ