ಸೇ.೧೯ ರಿಂದ 'ಹಜರತ್ ಸಾತು ಶಹೀದ್' ದರ್ಗಾ ಉರುಸ್
ಸೇ.೧೯ ರಿಂದ 'ಹಜರತ್ ಸಾತು ಶಹೀದ್' ದರ್ಗಾ ಉರುಸ್
ಕಲಬುರಗಿ: ತಾಲೂಕಿನ ಸೈಯದ್ ಚಿಂಚೋಳಿ ಗ್ರಾಮದ ಸುಪ್ರಸಿದ್ದ ಆರಾಧ್ಯ ದೈವರಾದ ಹಜರತ್ ಸಾತು ಶಹೀದ್ (ಆಚ್.ಎಚ್)ರವರ ಉರುಸ್ (ಜಾತ್ರೆ) ಸೇ.೧೯ ರಿಂದ ೨೧ ರವರೆಗೆ ವಿಜೃಂಭಣೆಯಿAದ ಹಮ್ಮಿಕೊಳ್ಳಲಾಗಿದೆ.
ಸೇ.೧೯ ರಂದು ಸಂಜೆ ನಮಾಝ್ ಮಗರಿಫ್ ನೆರವೇರಲಿದ್ದು, ಪಿಕ್ಕೆ ಜಾತ್ರಾಮಹೋತ್ಸವ ಕಾರ್ಯಾಕ್ರಮಕ್ಕೆ ಚಾಲನೆ ಮತ್ತು ಭಾಷಣ ನಮಾಝ ಇಶಾ ಆದ ನಂತರ ೯ ಗಂಟೆಗೆ ಹಜರತ್ ಸಾತು ಶಹೀದ್ ದರ್ಗಾದ ಮುತವಲಿ ಮತ್ತು ಸಜ್ಜಾದ ನಶೀನರಾದ ಶ್ರೀ ಅಶ್ಪಾಕ್ ಅಹ್ಮದ್ ಸಿದ್ದಿಕಿ ಅವರ ಮನೆಯಿಂದ ಗಂದದ (ಸಂದಲ್) ಮೆರವಣಿಗೆ ಹೊರಟು ಹಜರತ್ ಸಾತು ಶಹೀದ್ ದರ್ಗಾಗೆ ತಲುಪಲಿದ್ದು ಸಂದಲ್ ಮಾಲಿ ಕಾರ್ಯಕ್ರಮ ಜರುಗಲಿದೆ. ವಾದ ಬಳಿಕ ರಾತ್ರಿ ೮ ಗಂಟೆಗೆ
ಸೇ.೨೦ ರಂದು ದೀಪೋತ್ಸವ (ಚಿರಾಗ್) ಕಾರ್ಯಕ್ರಮ ನಡೆಯಲಿದ್ದು, ಸೇ.೨೧ ರಂದು ಜಿಯಾರತ್ ಪೂಜಾ ಕಾರ್ಯಗಳು ಜರುಗಲಿವೆ. ಸೇ.೧೯ ರಿಂದ ಜರುಗುವ ಜಾತ್ರಾಮಹೋತ್ಸವಕ್ಕೆ ಗ್ರಾಮದ ಸರ್ವಧರ್ಮದ ಹಿರಿಯರು, ಮುಖಂಡರು, ಯುವಕರು ಸಹ ಕೈ ಜೋಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಜಾತ್ರಾಮಹೋತ್ಸವ ಯಶಸ್ವಿಗೊಳಿಸಬೇಕೆಂದು ದರ್ಗಾದ ಮುತವಲಿ ಮತ್ತು ಸಜ್ಜಾದೆ ನಶೀನರಾದ ಶ್ರೀ ಅಶ್ಪಾಕ್ ಅಹ್ಮದ್ ಸಿದ್ದಿಕಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.