'ಆರ್ಕ್ ವಿಸ್ತಾರ- 2025' ಸಮ್ಮೇಳನ: 'ನಮ್ಮ ದೃಷ್ಟಿ - ನಿಮ್ಮ ಸೃಷ್ಟಿ' ಧ್ಯೇಯದೊಂದಿಗೆ ವಾಸ್ತುಶಿಲ್ಪಿಗಳ ಸಮಾವೇಶ

'ಆರ್ಕ್ ವಿಸ್ತಾರ- 2025' ಸಮ್ಮೇಳನ: 'ನಮ್ಮ ದೃಷ್ಟಿ - ನಿಮ್ಮ ಸೃಷ್ಟಿ' ಧ್ಯೇಯದೊಂದಿಗೆ ವಾಸ್ತುಶಿಲ್ಪಿಗಳ ಸಮಾವೇಶ

ಮೇ 2 ರಿಂದ 3 ದಿನಗಳ ಕಾಲ "ಆರ್ಕ್ ವಿಸ್ತಾರ- 2025 " ವಿಶೇಷ ಸಮ್ಮೇಳನ

"ನಮ್ಮ ದೃಷ್ಟಿ - ನಿಮ್ಮ ಸೃಷ್ಟಿ" ಸಮ್ಮೇಳನದ ಧ್ಯೇಯ: ವಾಸ್ತು ವಿನ್ಯಾಸಕಾರ ಭರತ್ ಭೂಷಣ್ ಹೇಳಿಕೆ

ಕಲಬುರಗಿ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ ನ (ಐಐಎ) ಕಲಬುರಗಿ ಜಿಲ್ಲಾ ಘಟಕದ ವತಿಯಿಂದ "ನಮ್ಮ ದೃಷ್ಟಿ- ನಿಮ್ಮ ಸೃಷ್ಟಿ" ಧ್ಯೇಯವಾಕ್ಯದೊಂದಿಗೆ ಕಲಬುರಗಿಯಲ್ಲಿ ಮೇ 2ರಿಂದ ನಾಲ್ಕರವರೆಗೆ "ಆರ್ಕ್ ವಿಸ್ತಾರ 2025"ವಿಶೇಷ ಸಮ್ಮೇಳನವನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಐಐಎ ಕಲಬುರಗಿ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ವಾಸ್ತು ವಿನ್ಯಾಸಕಾರ ಭರತ್ ಭೂಷಣ್ ತಿಳಿಸಿದರು. 

   ಕಲಬುರಗಿಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಮಾರ್ಚ್ 28ರಂದು ನಡೆದ "ಆರ್ಕ್ ವಿಸ್ತಾರ 2025" ಕೈಪಿಡಿ ಅನಾವರಣ ಹಾಗೂ ವೆಬ್ಸೈಟ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ ನಿರ್ಮಾಣ ಕ್ಷೇತ್ರದಲ್ಲಿ ವಾಸ್ತು ವಿನ್ಯಾಸಕಾರರ ಅಗತ್ಯ ಮತ್ತು ಪಾತ್ರ, ವಿಚಾರಗೋಷ್ಠಿ, ಪಾರಂಪರಿಕ ನಡಿಗೆ "ಕಲಬುರಗಿ ದೃಷ್ಟಿಕೋನ - 2035" ಈ ವಿಷಯಗಳ ಕುರಿತು ಕಲಬುರಗಿ ನಗರದ ಐವಾನ್ ಶಾಹಿ ರಸ್ತೆಯ ಬಂಜಾರಾ ಭವನದಲ್ಲಿ ಮೂರು ದಿನಗಳ ಸಮ್ಮೇಳನ ನಡೆಯಲಿದೆ. ಇದರಲ್ಲಿ ಸಾರ್ವಜನಿಕರು, ಮಂತ್ರಿಗಳು ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಒಟ್ಟುಗೂಡಿ ಚರ್ಚಿಸುವ ಅಪೂರ್ವ ವೇದಿಕೆ ನಿರ್ಮಾಣವಾಗಲಿದೆ. ರತನ್ ಟಾಟಾ ವಸ್ತು ಪ್ರದರ್ಶನ ಕೇಂದ್ರದಲ್ಲಿ 180ಕ್ಕೂ ಹೆಚ್ಚು ಮಳಿಗೆಗಳು ನಿರ್ಮಾಣ ರಂಗದ ಮುನ್ನೋಟವನ್ನು ನೀಡಲಿದೆ. "ಪ್ಲಾಟ್ ಟು ಪೂಜಾ"ಎಂಬ ಪರಿಕಲ್ಪನೆಯಲ್ಲಿ ಜಮೀನು ಖರೀದಿಯಿಂದ ಹಿಡಿದು ನಿರ್ಮಾಣ, ವಿನ್ಯಾಸ ವಾಸ್ತು ಪೂಜೆಯವರೆಗಿನ ಎಲ್ಲಾ ಅಧಿಕೃತ ಮಾಹಿತಿಗಳನ್ನು ಹಂಚಿಕೊಳ್ಳುವ ಹಾಗೂ ದೇಶದ ವಾಸ್ತು ವಿನ್ಯಾಸ ತಂತ್ರಜ್ಞಾನ, ಉಪನ್ಯಾಸಗಳು, ಕೃತಕ ಬುದ್ಧಿಮತ್ತೆ (ಎಐ) ಬಳಕೆಯಿಂದ ವಾಸ್ತು ವಿನ್ಯಾಸ ಕ್ಷೇತ್ರಕ್ಕಿರುವ ಸವಾಲುಗಳು ಹಾಗು ಸಂವಾದ ನಡೆಯಲಿದೆ. 20035 ರಲ್ಲಿ ಕಲಬುರ್ಗಿ ಜಿಲ್ಲೆಯ ಮುನ್ನೋಟದ ಬಗ್ಗೆ ವಿಸ್ತೃತ ಚರ್ಚೆಯನ್ನು ಆಯೋಜಿಸಲಾಗಿದೆ ಇದಕ್ಕಾಗಿ ಸಾರ್ವಜನಿಕವಾಗಿ ಕೆಲಸ ನಿರ್ವಹಿಸುವ ಎಲ್ಲ ಸ್ವಯಂಸೇವಾ ಸಂಸ್ಥೆಗಳ ಸಹಭಾಗಿತ್ವ ಮಾರ್ಗದರ್ಶನದೊಂದಿಗೆ ಕಲ್ಬುರ್ಗಿ ಪ್ರಗತಿಯ ಬಗ್ಗೆ ನೀಡಲಾಗುವುದು. ಜೊತೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಇಚ್ಛಾ ಶಕ್ತಿಯ ಅಗತ್ಯವಿದೆ: ಡಾ. ಪೆರ್ಲ

ವಾಸ್ತು ವಿನ್ಯಾಸ ತಂತ್ರಜ್ಞಾನ ಸಮಾವೇಶವು ತಮ್ಮ ವೃತ್ತಿಬದ್ಧತೆಯ ಜೊತೆಗೆ ಸಾಮಾಜಿಕವಾಗಿ ಬೆಳವಣಿಗೆಯ ದೂರ ದೃಷ್ಟಿಕೋನ ಹೊಂದಿದೆ "ಕಲಬುರಗಿ ದೃಷ್ಟಿಕೋನ 2035" ಹಮ್ಮಿಕೊಂಡಿರುವುದು ಶ್ಲಾಘನೀಯ ವಿಚಾರ. ಸಾರ್ವಜನಿಕರು, ಜನಪ್ರತಿನಿಧಿಗಳು ಅಭಿವೃದ್ಧಿಯಲ್ಲಿ ಸಹಭಾಗಿತ್ವ ಹೊಂದಲು ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ. ಬದ್ಧತೆ ಹಾಗೂ ಹೋರಾಟದ ಮನೋಭಾವ ಕಡಿಮೆಯಾಗಿ ಕಲಬುರಗಿಯ ತಲಾ ಆದಾಯ ಹಾಗೂ ಪ್ರಗತಿಯಲ್ಲಿ ತೀವ್ರ ಹಿನ್ನಡೆ ಉಂಟಾಗಿದೆ. ನಂಜುಂಡಪ್ಪ ವರದಿ ಮತ್ತು ಗೋವಿಂದರಾವ್ ಸಮಿತಿ ವರದಿಯಂತೆ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಎಲ್ಲರೂ ಕಟಿಬದ್ಧರಾಗಿ ಪ್ರಗತಿಯ ಹಾದಿಯಲ್ಲಿ ಕೈಜೋಡಿಸಬೇಕಾಗಿದೆ ಎಂದು ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಸಹಭಾಗಿತ್ವ ಕುರಿತು ಮಾತನಾಡಿದ ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಆಶಯ ವ್ಯಕ್ತಪಡಿಸಿದರು. 

   ಆರ್ಕ್ ವಿಸ್ತಾರ 2025 ಮುನ್ನೋಟದ ಕೈಪಿಡಿಯನ್ನು ಐ ಐ ಎ ಕಲಬುರ್ಗಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ವಿ. ಬಿ ಮೆಹ್ತಾ ಅನಾವರಣಗೊಳಿಸಿದರು. ಅಧ್ಯಕ್ಷತೆ ವಹಿಸಿದ ಹಿರಿಯ ವಾಸ್ತು ವಿನ್ಯಾಸಕಾರರಾದ ಪ್ರಭುಲಿಂಗ ಮಹಾಗಾಂವಕರ್ ವೆಬ್ಸೈಟ್ ಬಿಡುಗಡೆಗೊಳಿಸಿ ಮಾತನಾಡಿ ಕಲ್ಬುರ್ಗಿಯಲ್ಲಿ ಅಪಾರವಾದ ಸಂಪನ್ಮೂಲಗಳಿದ್ದು ಅದನ್ನು ಸದ್ಬಳಕೆ ಮಾಡಿದರೆ ಜಿಲ್ಲೆಯು ಕರ್ನಾಟಕದಲ್ಲಿ ಮೊದಲ ಸ್ಥಾನ ಪಡೆಯಲಿದೆ. ನಾಗರಿಕರು ಅಭಿವೃದ್ಧಿಗಗಾಗಿ ಸಂಘಟನೆಯ ಮನೋಭಾವದಿಂದ ಜನಪ್ರತಿನಿಧಿ ಆಡಳಿತದವರ ಗಮನ ಸೆಳೆಯಬೇಕು.ಹಕ್ಕೊತ್ತಾಯ ಮಾಡಬೇಕು ಎಂದರು.

ಸಂವಾದದಲ್ಲಿ ಕೆಕೆಸಿಸಿಐನ ನಿಯೋಜಿತ ಅಧ್ಯಕ್ಷ

ಶರಣು ಪಪ್ಪಾ,,ಹಿರಿಯ ಮುಖಂಡ ನೀಲಕಂಠ ರಾವ್ ಮೂಲಗೆ,ಇತಿಹಾಸ ತಜ್ಞ ಡಾ.ಶಂಭುಲಿಂಗ ವಾಣಿ,ಹಿರಿಯ ಉದ್ಯಮಿ ರಾಧಾಕೃಷ್ಣ ರಘೋಜಿ,ಆರ್ಕಿಟೆಕ್ಟ್ ಕಾಲೇಜಿನ ಪ್ರಾಂಶುಪಾಲ ಸಂಜೊತ್ ಶಹಾ, ಸಿಎ ಉತ್ತಮ ಬಜಾಜ್,ಉದ್ಯಮಿ ನಿತಿನ್ ತೂಸೆ,ನಿವೃತ್ತ ಪ್ರಾಂಶುಪಾಲರಾದ ಶಂಕರಪ್ಪ ಹತ್ತಿ, ಸಾಯಿ ಕುಮಾರ್ 

ರುಸ್ತಂಪೂರ,ಶಿರೀಷಾ ಲಿಮ್ಕರ್, ಶ್ಯಾಮ್ ಕುಮಾರ್ ಬಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂವಾದವನ್ನು ಬಿ.ಜೆ ಖಂಡೇರಾವ್ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ಅವರ ಸಂದೇಶ ಪ್ರಸಾರ ಮಾಡಲಾಯಿತು. ಕಾರ್ಯಕ್ರಮದಲ್ಲಿ ರವೀಂದ್ರ ,ತೆಗನೂರ್ ಶಿವಕುಮಾರ್ ಚಟ್ನಳ್ಳಿ ಶರಣ್ ಅಲ್ಲಮ ಪ್ರಭು ಪಾಟೀಲ್, ಪರಂಜ್ಯೋತಿ ಆರ್ ಪಾಟೀಲ್, ವರುಣ್ ಪಾಟೀಲ್, ಅದಿತಿ, ಪಾಟೀಲ್, ನಳಿನಿ ಮಹಗಾಂವಕರ, ಮಲ್ಲಿನಾಥ ದೇವರಮನಿ, ಮಜಿದ್ ಮಣಿಯಾರ್, ಶ್ರೀನಿವಾಸ್, ಬಸವರಾಜ್ ಕಣ್ಣಿ, ಜಗದೀಶ್ ಕುಂಸಗಿ, ಮೊಹಮ್ಮದ್ ಖದೀರ್, ಚನ್ನವೀರ ದಂಡೋತಿ ತೇಜ ಲಿಂಗ ಹರಸಣಗಿ ಮತ್ತಿತರ ಅನೇಕರು ಉಪಸ್ಥಿತರಿದ್ದರು .ಕಾರ್ಯಕ್ರಮದಲ್ಲಿ ಸಿದ್ದರಾಮ ಹಂಚಿನಾಳ ಪ್ರಾರ್ಥನಾ ಗೀತೆಯನ್ನು ಶ್ರೀಮತಿ ರೇಷ್ಮಾ ಪರ್ವೀನ್ ಸ್ವಾಗತಿಸಿದರು.

ಅಸಾದುಲ್ಲಾ ಖಾನ್ ಧನ್ಯವಾದವಿತ್ತರು. ಶ್ರೀಮತಿ ಶಶಿಕಲಾ ಜಡೆ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.