ಭಾರತ ಮಾತಾ ಮಂದಿರದಲ್ಲಿ ಆಗಸ್ಟ್ 15 ರಂದು100 ಅಡಿ ಧ್ವಜಸ್ತಂಭದ ಮೇಲೆ ಧ್ವಜಾರೋಹಣ
ಭಾರತ ಮಾತಾ ಮಂದಿರದಲ್ಲಿ ಆಗಸ್ಟ್ 15 ರಂದು100 ಅಡಿ ಧ್ವಜಸ್ತಂಭದ ಮೇಲೆ ಧ್ವಜಾರೋಹಣ
ಕಲಬುರಗಿ: ಜೈ ಭಾರತ ಮಾತಾ ಸೇವಾ ಸಮಿತಿ ( ರಿ ) ನವದೆಹಲಿ ವತಿಯಿಂದ ಆಳಂದ ತಾಲೂಕಿನ ಲಾಡ ಚಿಂಚೋಳಿ ಹತ್ತಿರದ ಭಾರತ ಮಾತಾ ಮಂದಿರದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿ ಅಗಸ್ಟ 15 ರಂದು ಅದ್ದೂರಿಯಾಗಿ ಆಯೋಜಿಸಲಾಗಿದೆ.
ನಾಳೆ ಬೆಳಗ್ಗೆ 6 ಗಂಟೆಗೆ ಭಾರತಾಂಬೆಯ ಮೂರ್ತಿಗೆ ದೇಶ ಬಾಂಧವರಿಂದ ವಿಶೇಷ ಪೂಜೆ ನೆರವೇರಿಸಲಾಗುವುದು, ನಂತರ ಬೆಳಗ್ಗೆ 8 ಕ್ಕೆ ಮಂದಿರದ ಆವರಣದಲ್ಲಿ ಕಲಬುರಗಿ- ಬಿದರ ಯಾದಗಿರಿ ಹಾಲುಒಕ್ಕುಟ (KMF) ದ ಅಧ್ಯಕ್ಷರಾದ ಶ್ರೀ ಆರ್.ಕೆ. ಪಾಟೀಲ ಅವರ ವತಿಯಿಂದ ನಿರ್ಮಿಸಲಾದ 100 ಅಡಿ ಎತ್ತರದ ರಾಷ್ಟ್ರಧ್ವಜ ಸ್ತಂಭದ ಮೇಲೆ ತ್ರಿವರ್ಣ ಧ್ವಜಾರೋಹಣ ನೆರವೇರಿಸಲಾಗುವುದು,
ಜೈ ಭಾರತ ಮಾತಾ ಸೇವಾ ಸಮಿತಿ (ರಿ) ನವದೆಹಲಿಯ ಸಂಸ್ಥಾಪಕ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜ (ನಿರಗುಡಿ ಮುತ್ತ್ಯಾ) ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸುವರು, ಕರ್ನಾಟಕ ರಾಜ್ಯ ಸರಕಾರದ ಮಾನ್ಯ ಮುಖ್ಯಮಂತ್ರಿಗಳ ಸಲಹೆಗಾರರು ಆಳಂದನ ಶಾಸಕರಾದ ಶ್ರೀ ಬಿ.ಆರ್. ಪಾಟೀಲ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ, ಈ ಕಾರ್ಯಕ್ರಮದಲ್ಲಿ ಹಾಲಿ - ಮಾಜಿ ಜನಪ್ರತಿನಿಧಿಗಳು, ಗಣ್ಯರು, ಯೋಧರು ಭಾಗವಹಿಸಲಿದ್ದಾರೆ,
ದಿನವಿಡಿ ದೇಶಭಕ್ತಿ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದ್ದು ಈ ದೇಶಭಕ್ತಿ ಕಾರ್ಯಕ್ರಮದಲ್ಲಿ ದೇಶಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಮಿತಿ ವಕ್ತಾರ ವೈಜನಾಥ ಎಸ್. ಝಳಕಿ ಪ್ರಕಟಣೆ ಮೂಲಕ ಕೋರಿದ್ದಾರೆ.