ಬಿಳವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಾಳಾದ ಕಟ್ಟಡ; ಭಾರಿ ಮಳೆಯಿಂದ ವಿದ್ಯಾರ್ಥಿಗಳ ಜೀವಕ್ಕೆ ಅಪಾಯ

ಬಿಳವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಾಳಾದ ಕಟ್ಟಡ; ಭಾರಿ ಮಳೆಯಿಂದ ವಿದ್ಯಾರ್ಥಿಗಳ ಜೀವಕ್ಕೆ ಅಪಾಯ
ಪರಿಸ್ಥಿತಿ ಗಂಭೀರ ಎಂದು ಎಚ್ಚರಿಸಿದ ಗ್ರಾಮಸ್ಥರು
ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು, ಮೇಲ್ಚಾವಣಿ ಕುಸಿದು ಬೀಳುವ ಹಂತದಲ್ಲಿದೆ. ಸುಮಾರು 50 ವರ್ಷಗಳ ಪ್ರಾಚೀನವಾದ ಈ ಶಾಲಾ ಕಟ್ಟಡ ಒಟ್ಟು 13 ಕೋಣೆಗಳನ್ನೊಳಗೊಂಡಿದ್ದು, ಈಗಾಗಲೇ 5 ಕೋಣೆಗಳಲ್ಲಿ ಮಳೆ ನೀರು ಒಳಗೆ ಬಂದು ಮಕ್ಕಳಿಗೆ ಕ್ಲಾಸುಗಳು ನಡೆಸಲು ಸಾಧ್ಯವಿಲ್ಲಎಂದು ಹೇಳಿದರು.
ಶಾಲೆಯ ಮುಖ್ಯಗುರುರಾದ ಸೈದಪ್ಪ ಅವರು “ಮಕ್ಕಳನ್ನು ಕ್ಲಾಸಿನಲ್ಲಿ ಕೂಡಿಸೋದೆ ಭಯವಾಗುತ್ತಿದೆ” ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ವಿಷಯ ಕೂಡಲೇ ಸರಕಾರದ ಸಂಬಂಧಪಟ್ಟ ಇಲಾಖೆಗಳು ಹಸ್ತಕ್ಷೇಪ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕರಬಸಯ್ಯಸ್ವಾಮಿ ಹಿರೇಮಠ ಹಾಗೂ ಶ್ರೀ ಸಿದ್ದರಾಮೇಶ್ವರ ಗ್ರಾಮೀಣ ಅಭಿವೃದ್ಧಿ ಸಂಸ್ಥಾಪಕರಾದ ಹಣಮಂತ ಬಿ. ದಂಡಗುಲ್ಕರ್ ಅವರು ಕೂಡ ಜಿಲ್ಲಾಧಿಕಾರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಶಾಲೆಯ ಹಳೆಯ ಕಟ್ಟಡವನ್ನು ದುರಸ್ತಿ ಮಾಡಿ ಇಲ್ಲವಾದರೆ ಪುನರ್ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ ಗ್ರಾಮಸ್ಥರೊಂದಿಗೆ ರಸ್ತೆ ತಡೆಯೋ (‘ರಸ್ತಾ ರೋಕೋ’) ಚಳುವಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮೂವರು ಹಿರಿಯ ಗ್ರಾಮಸ್ಥರು ಹಾಗೂ ಪ್ರಮುಖರು – ಶರಣಯ್ಯ ಸ್ವಾಮಿ ಹಿರೇಮಠ, ರಾಮನಗೌಡ ನಾಗರಹಳ್ಳಿ, ಜಗದೇವ ರೆಡ್ಡಿ, ಚಂದ್ರಶೇಖರ್ ರೆಡ್ಡಿ, ಮೊಹಮ್ಮದ್ ಯುನಸ್, ಮಾಲಿ ಪಾಟೀಲ್, ಗೊಲ್ಲಾಳಪ್ಪ ಮ್ಯಾಗೇರಿ, ಮಾಜಿ ತಾ.ಪಂ. ಸದಸ್ಯ ಪರಶುರಾಮ್ ದಂಡಗುಲ್ಕರ್, ಲಾಡ್ಲೆ ಪಟೇಲ್, ಯರಗಲ್ ದೇವಪ್ಪ ಪೂಜಾರಿ, ಮಲ್ಲಾಬಾದಿ ಶರಣು ಪೂಜಾರಿ, ದೊಡ್ಮನಿ ಭೀಮಣ್ಣ ಮಾಸ್ಟರ್, ಭಜನಿ ಶಿವಪುತ್ರ ಗೋಗಿ, ಮಾಳಪ್ಪ ಪೂಜಾರಿ, ಶರಣು ಪೂಜಾರಿ ಅಂಗಡಿ, ರಾಜೇಂದ್ರ ಪೂಜಾರಿ, ಸಿದ್ದಣ್ಣಗೌಡ ಕೊಡಮನಹಳ್ಳಿ, ಶಾಂತಪ್ಪ ಮಾಸ್ಟರ್ ದೇವರಮನಿ, ಈರಪ್ಪ ಪೂಜಾರಿ, ಹಿರೇಕುರುಬರ ಭೀಮಶಂಕರ್ ಗೋಗಿ, ಮಲ್ಲು ಪಡಶೆಟ್ಟಿ, ಮಲ್ಲನಗೌಡ ಕೊಡಮನಹಳ್ಳಿ, ಶಗಿರ ಪಟೇಲ್ ಸೈದಾಪುರ್, ದವಲಸಾಬ್ ಹೋಟೆಲ್, ಶರಣು ಸೌಕಾರ ಯಳಮೇಲಿ ಹಾಗೂ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳಾದ ಆನಂದ್ ಕುಮಾರ್ ಬಡಿಗೇರ್ (ಗು.ಅಧ್ಯಕ್ಷ) ಮತ್ತು ರವೀಂದ್ರ ಗುತ್ತೇದಾರ್ (ಉಪಾಧ್ಯಕ್ಷ) ಉಪಸ್ಥಿತರಿದ್ದರು.
ವರದಿ: ಜೇಟ್ಟೆಪ್ಪ ಎಸ್. ಪೂಜಾರಿ