12 ಪಾಯಿಂಟ್ ಪ್ರೋಗ್ರಾಂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯನ್ನು ಸದೃಢಗೊಳಸಲಿದೆ- ಶ್ರೀ ಶಶೀಲ್ ಜಿ ನಮೋಶಿ

12 ಪಾಯಿಂಟ್ ಪ್ರೋಗ್ರಾಂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯನ್ನು ಸದೃಢಗೊಳಸಲಿದೆ- ಶ್ರೀ ಶಶೀಲ್ ಜಿ ನಮೋಶಿ

12 ಪಾಯಿಂಟ್ ಪ್ರೋಗ್ರಾಂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯನ್ನು ಸದೃಢಗೊಳಸಲಿದೆ- ಶ್ರೀ ಶಶೀಲ್ ಜಿ ನಮೋಶಿ 

ಕಲಬುರಗಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ಹೊಸ ಹೊಸ ಮಾದರಿಯ ವಿನೂತನ ಶೈಕ್ಷಣಿಕ ಚಟುವಟಿಕೆ, ಕೌಶಲ್ಯಗಳ ಮೂಲಕ ಶಿಕ್ಷಣ ಕೊಡುವುದರ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಸ್ಪರ್ಧೆಗಳಿಗಿಳಿದಿರುವದು ತಮಗೂ ತಿಳಿದ ವಿಷಯವಾಗಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಹಾಗೂ ವಿಧಾನ ಪರಿಷತ್ ಸದಸ್ಯ ಶ್ರೀ ಶಶೀಲ್ ಜಿ ನಮೋಶಿ ಹೇಳಿದರು 

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿ ಡಿ ಎ ಎಂಜಿನಿಯರಿಂಗ್ ಕಾಲೇಜಿನ ಸ್ಯಾಕ್ ಕಟ್ಟಡದ ಆಡಿಟೋರಿಯಂ ನಲ್ಲಿ ನಡೆದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ 12 ಪಾಯಿಂಟ್ ಪ್ರೋಗ್ರಾಂ ಎಂಬ ವಿನೂತನ ಶೈಕ್ಷಣಿಕ ಚಟುವಟಿಕೆ ಕಾರ್ಯವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯಲ್ಲಿ ಈ 12 ಪಾಯಿಂಟ್ ಪ್ರೋಗ್ರಾಂ ಸಂಸ್ಥೆಯ ಅಡಿಯಲ್ಲಿ ಬರುವ ಎಲ್ಲಾ ಶಾಲಾ ಕಾಲೇಜುಗಳಲ್ಲಿವ್ಯವಸ್ಥಿತ ವಾದ ಶೈಕ್ಷಣಿಕ ವಾತಾವರಣ ಕೌಶಲ್ಯಯುತ ಶಿಕ್ಷಣ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸ್ಪರ್ಧಾತ್ಮಕ ಚಟುವಟಿಕೆ ನೀಡುವುದಕ್ಕೆ ಇದು ಅನೂಕೂಲ ಮಾಡುತ್ತದೆ ಎಂದು ಹೇಳಿದರು 

ಕಲ್ಯಾಣ ಕರ್ನಾಟಕದಲ್ಲಿಯೆ ಅತ್ಯಂತ ದೊಡ್ಡ ಶಿಕ್ಷಣ ಸಂಸ್ಥೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಇದು ಬೀದರ್ ನಿಂದ ಬೆಂಗಳೂರುವರೆಗೆ ಶಾಲಾ ಕಾಲೇಜುಗಳನ್ನು ಹೊಂದಿದ್ದು ಈ 12 ಪಾಯಿಂಟ್ ಪ್ರೋಗ್ರಾಂ ಎಲ್ಲಾ ಶಾಲಾ ಕಾಲೇಜುಗಳಲ್ಲಿ ನಿರಂತರ ಶೈಕ್ಷಣಿಕ ಚಟುವಟಿಕೆ ನಡೆಯುವ ಹಾಗೆ ನೋಡಿಕೊಳ್ಳಲಿದೆ. ಸಂಸ್ಥೆಯ ಅಡಿಯಲ್ಲಿ ಬರುವ ಎಲ್ಲಾ ಶಾಲಾ ಕಾಲೇಜುಗಳ ದಿನಾಲೂ ನಡೆಯುವ ಚಟುವಟಿಕೆಗಳ ನಿರಂತರವಾಗಿ ಸಂಸ್ಥೆಯ ಗಮನದಲ್ಲಿರಲು ಈ ಯೋಜನೆ ಸಹಾಯ ಮಾಡಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಹೊಸ ಹೊಸ ಕೊರ್ಸಗಳನ್ನು ಪ್ರಾರಂಭಿಸುವ ಮೂಲಕ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಸ್ಪರ್ಧೆ ಮಾಡುವ ಪ್ರಯತ್ನಕ್ಕೆ ಈ 12 ಪಾಯಿಂಟ್ ಪ್ರೋಗ್ರಾಂ ಸಹಾಯ ಮಾಡಲಿದೆ.ಎಂದು ಹೇಳಿದರು 

ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ರಾಜಾ ಭೀಮಳ್ಳಿ, ಕಾರ್ಯದರ್ಶಿಗಳಾದ ಶ್ರೀ ಉದಯಕುಮಾರ್ ಚಿಂಚೋಳಿ ಸರ್ ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಹಾಗೂ ಆಡಳಿತ ಮಂಡಳಿ ಸದಸ್ಯರಾದ

ಶ್ರೀ ಅರುಣಕುಮಾರ ಪಾಟೀಲ್,ಡಾ ಮಹಾದೇವಪ್ಪ ರಾಂಪೂರೆ, ಶ್ರೀ ಅನಿಲ್ ಮರಗೋಳ ,ಡಾ ಶರಣಬಸಪ್ಪ ಹರವಾಳ, ಡಾ ಕಿರಣ್ ದೇಶಮುಖ್, ಡಾ ಅನಿಲ ಪಟ್ಟಣ ಶ್ರೀ ನಿಶಾಂತ್ ಎಲಿ, ಡಾ ರಜನೀಶ್ ವಾಲಿ,ಶ್ರೀ ನಾಗಣ್ಣ ಘಂಟಿ, ಶ್ರೀ ಶಿವಾನಂದ ಮೇಳಕುಂದಿ,

ಆಡಳಿತಾಧಿಕಾರಿ ಪ್ರೋ ಸಿ ಸಿ ಪಾಟೀಲ್, 12 ಪಾಯಿಂಟ್ ಪ್ರೋಗ್ರಾಂ ಸಂಯೋಜಕಿ ಶ್ರೀಮತಿ ಉಮಾ ರೇವೂರ ವಿಶೇಷಾಧಿಕಾರಿ ಡಾ ಪರಮೇಶ್ ಬಿರಾದಾರ ಉಪಸ್ಥಿತರಿದ್ದರು

  ಹಾಗೂ ಸಂಸ್ಥೆಯ ಎಲ್ಲಾ ಶಾಲಾ ಕಾಲೇಜುಗಳ ಪ್ರಾಂಶುಪಾಲರ ಭಾಗವಹಿಸಿದ್ದರು ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾಧ್ಯಮ ಸಂಯೋಜಕ ಶ್ರೀ ಐ ಕೆ ಪಾಟೀಲ್ ಹೇಳಿದರು.