ಕಲಬುರಗಿ: ಸಮಗ್ರ ಅಭಿವೃದ್ಧಿ ಸಂಸ್ಥೆಯಲ್ಲಿ ಗಾಂಧೀ ಜಯಂತಿ ಆಚರಣೆ

ಕಲಬುರಗಿ: ಸಮಗ್ರ ಅಭಿವೃದ್ಧಿ ಸಂಸ್ಥೆಯಲ್ಲಿ ಗಾಂಧೀ ಜಯಂತಿ ಆಚರಣೆ
ಕಲಬುರಗಿಯ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ಸಮಗ್ರ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಗಾಂಧೀ ಜಯಂತಿ ಆಚರಣೆ ನಡೆಯಿತು. ಈ ಸಂದರ್ಭದಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಧರ್ಮಣ್ಣ ಹೆಚ್. ಧನ್ನಿ ಮಾತನಾಡಿ, “ಭಾರತಕ್ಕೆ ಸ್ವಾತಂತ್ರ್ಯ ಸಿಗುವುದರಲ್ಲಿ ಮಹಾತ್ಮರ ಪಾತ್ರ ಅಪಾರ, ಶಾಂತಿ ಮತ್ತು ಅಹಿಂಸೆಯ ಮಾರ್ಗದಿಂದಲೇ ದೇಶಕ್ಕೆ ಮುಕ್ತಿಯನ್ನು ತಂದವರು ಗಾಂಧೀಜಿ” ಎಂದರು.
ಕಾರ್ಯಕ್ರಮದ ಪ್ರಾಸ್ತಾವಿಕವನ್ನು ಬಸವಂತರಾಯ ಕೋಳಕೂರ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ರಾಮ ರಾಜಮಾನೆ ವಹಿಸಿದ್ದರು. ಸಂಸ್ಥೆಯ ಪದಾಧಿಕಾರಿಗಳಾದ ಅರವಿಂದ ಠಾಕೂರ, ಶಿವಕುಮಾರ ವಲ್ಲಾಪುರೆ, ರಾಜಶೇಖರ ತಿಗಶೆಟ್ಟಿ, ಅಶೋಕಕುಮಾರ ಠಾಕೂರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾರ್ಯದರ್ಶಿ ನಾಗರಾಜ ಬಿರಾದಾರನಿರೂಪಿಸಿದರು.