ಉದನೂರ ಗ್ರಾಮದಲ್ಲಿ ಬೀದಿ ನಾಯಿಗಳ ಗೋದಾಮ ನಿರ್ಮಾಣ ಕಾಮಗಾರಿ ತಡೆಹಿಡಿಯಬೇಕೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ

ಉದನೂರ ಗ್ರಾಮದಲ್ಲಿ ಬೀದಿ ನಾಯಿಗಳ ಗೋದಾಮ ನಿರ್ಮಾಣ ಕಾಮಗಾರಿ ತಡೆಹಿಡಿಯಬೇಕೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ

ಉದನೂರ ಗ್ರಾಮದಲ್ಲಿ ಬೀದಿ ನಾಯಿಗಳ ಗೋದಾಮ ನಿರ್ಮಾಣ ಕಾಮಗಾರಿ ತಡೆಹಿಡಿಯಬೇಕೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ

ಕಲಬುರಗಿ ದಕ್ಷಿಣ ಮತಕ್ಷೇತ್ರದ ನಂದಿಕೂರ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಉದನೂರ ಗ್ರಾಮದಲ್ಲಿ ಕಲಬುರಗಿ ನಗರದ ಕಸವಿಲೆವಾರಿ ಮಾಡುತ್ತಿರುವುದು ಸ್ಥಳಾಂತರ ಬೀದಿ ನಾಯಿಗಳ ಗೋದಾಮ ನಿರ್ಮಾಣ ಕಾಮಗಾರಿ ತಡೆಹಿಡಿಯಬೇಕೆಂದು ಗ್ರಾಮ ಪಂಚಾಯತ ಕಾರ್ಯಲಯ ನಂದಿಕೂರ ಅಧ್ಯಕ್ಷ ಚಂದ್ರಕಾAತ ಕೆ. ಸೀತನೂರ ಪೂಜಾರಿ ಹಾಗೂ ಶಾಂತಕುಮಾರ ಬಿರಾದಾರ ಇವರ ನೇತೃತ್ವದಲ್ಲಿ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಕಲಬುರಗಿ ದಕ್ಷಿಣ ಮತಕ್ಷೇತ್ರದ ನಂದಿಕೂರ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಉದನೂರ ಗ್ರಾಮದಲ್ಲಿ ಕಲಬುರಗಿ ನಗರದ ಕಸವಿಲೆವಾರಿ ಸುಮಾರು 18 ವರ್ಷದಿಂದ ಮಾಡುತ್ತಿರುವುದರಿಂದ ತುಂಬಾ ಹೊಲಸು ವಾಸನೆ ಬಂದು ಎಲ್ಲಾ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು ಹಾಗೂ ಪದೇ ಪದೇ ಆರೋಗ್ಯ ಹದಗೆಡುತ್ತಿದೆ ಮತ್ತು ಕುಡಿಯುವ ನೀರಿನ ಬಾವಿ ಮತ್ತು ಬೊರವೆಲ್‌ದಲ್ಲಿ ಕಲುಶಿತ ನೀರು ಬರುತ್ತಿದ್ದು ಹಾಗೂ ತಂದು ಬಿಟ್ಟ ಬೀದಿ ನಾಯಿಗಳು ಧನಕರುಗಳಿಗೆ, ಕುರಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಚ್ಚಿ ಮಾರಣಾಂತಿಕ ಹಲ್ಲೆ ಮಾಡುತ್ತಿದ್ದು, ಈಗಾಗಲೇ ಸುಮಾರು 10 ಕುರಿಗಳು ಮೃತಪಟ್ಟಿರುತ್ತವೆ ಹಾಗೂ ಸದರಿ ಕುಠಿಗಳು ಕಳೆದುಕೊಂಡ ರೈತರಿಗೆ ಪರಿಹಾರ ಒದಗಿಸಿರುವುದಿಲ್ಲ. ಇದರಿಂದ ಎಲ್ಲಾ ಗ್ರಾಮಸ್ಥರು ಜೀವ ಭಯದಿಂದ ಬದುಕುತ್ತಿದ್ದಾರೆ ಹಾಗೂ ತುಂಬಾ ತೊಂದರೆ ಸಹ ಉಂಟಾಗುತ್ತಿದೆ. ಇದರ ಬಗ್ಗೆ ಸುಮಾರು 18 ವರ್ಷಗಳಿಂದ ಸತತವಾಗಿ ಹೋರಾಟ ಮಾಡುತ್ತಿದ್ದು, ಸಂಬAಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ.

ಆದ್ದರಿಂದ ಕಸವಿಲೆವಾರಿಯನ್ನು ಬೇರೆ ಕಡೆ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ ಹಾಗೂ ಉದನೂರ ಗ್ರಾಮದಲ್ಲಿ ನಾಯಿಗಳ ಗೋದಾಮ ನಿರ್ಮಾಣ ಕಾಮಗಾರಿಯು ತಡೆಹಿಡಿದು ಬೇರೆ ಕಡೆ ಸ್ಥಳಾಂತರಿಸಿ ಎಲ್ಲಾ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ