ಚಿಂಚೋಳಿ ನಾಗರಿಕ ಹಿತರಕ್ಷಣಾ ಸಮಿತಿ ಕೊಟ್ಟಿದ ಬಂದ್ ಕರೆಗೆ ಅವಳಿ ಪಟ್ಟಣ ಸ್ತಬದ್ಧ

ಚಿಂಚೋಳಿ ನಾಗರಿಕ ಹಿತರಕ್ಷಣಾ ಸಮಿತಿ ಕೊಟ್ಟಿದ ಬಂದ್ ಕರೆಗೆ ಅವಳಿ ಪಟ್ಟಣ ಸ್ತಬದ್ಧ

ಟೈರುಗಳಿಗೆ ಬೆಂಕಿ ಹಚ್ಚಿ, ಕೇಂದ್ರ ಗೃಹ ಮಂತ್ರಿ ಅಮೀತ್ ಷಾ ಅಣಕು ಶವ ಯಾತ್ರೆ ಪ್ರದರ್ಶನ, ಬೆಂಕಿ ಹಚ್ಚಿ ಶವ ದಹನ ಮಾಡಲಾಯಿತು.

ಬಂದ್ ಗೆ, ವೀರಶೈವ ಲಿಂಗಾಯತ, ಬಂಜಾರ, ಕುರುಬ, ಮುಸ್ಲಿಂ ಸಾಮಾಜ ಹಾಗೂ ದಲಿತ ಪರ ಸಂಘಟನೆಗಳಿಂದ ಬೆಂಬಲ 

ಚಿಂಚೋಳಿ : ಸಂಸತ್ ಸದನದಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಅವಮಾನಿಸಲಾಗಿದೆ ಎಂದು ಖಂಡಿಸಿ, ಚಿಂಚೋಳಿ ನಾಗಿರಕ ಹಿತರಕ್ಷಣಾ ಸಮಿತಿ ಕೊಟ್ಟಿದ್ದ ಚಿಂಚೋಳಿ-ಚಂದಾಪೂರ ಅವಳಿ ಪಟ್ಟಣಗಳ ಬಂದ್ ಕರೆಗೆ 

ಬೆ. 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಂಪೂರ್ಣ ಸ್ಥಬದ್ಧವಾಗಿತ್ತು. 

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಕನ್ನಡಪರ ಸಂಘಟನೆಗಳು, ಅಭಿಮಾನಿಗಳು, ಮಹಿಳೆಯರು ಕೈಯಲ್ಲಿ ಬಾಬಾ ಸಾಹೇಬರ್ ಭಾವಚಿತ್ರಗಳನ್ನು ಹಿಡಿದುಕೊಂಡು, ಅಮಿತ್ ಶಾ ಅವರ ಅಣಕು ಶವ ಯಾತ್ರೆ ನಡೆಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಭಸ್ಮ ಮಾಡಿ, ಸಮಿತಿಯ ರಾಜ್ಯ ಕಾಂಗ್ರೇಸ್ ಉಪಾಧ್ಯಕ್ಷ ಸುಭಾಷ ರಾಠೋಡ, ಸಿಪಿಐಎಂ ಪಕ್ಷದ ಶರಣಬಸಪ್ಪ ಮಮ್ಮಶೆಟ್ಟಿ, ಗೌತಮ್ ಬೊಮ್ಮನಳ್ಳಿ, ಮಾರುತಿ ಗಂಜಗಿರಿ, ಚೇತನ ನಿರಾಳ್ಕರ್, ಕಾಶಿನಾಥ ಸಿಂಧೆ, ಅಬ್ದುಲ್ ಬಾಷಿದ್, ಶರಣು ಪಾಟೀಲ್ ಮೋತಕಪಳ್ಳಿ, ಆನಂದ ಟೈರ್ , ಜಗದೇವ ಗೌತಮ್, ರಾಮಶೆಟ್ಟಿ ಪವಾರ, ಗೋಪಾಲ ರಾಂಪೂರೆ ಅವರು ಕ್ರಾಂತಿಕಾರಿ ಭಾಷಣಗಳ್ನಾಡಿ, ಕೇಂದ್ರ ಗೈಹ ಮಂತ್ರಿ ಅಮಿತ್ ಶಾ ಅವರನ್ನು 1989 ರ ದೌರ್ಜನ್ಯ ಕಾಯ್ದೆ ಮತ್ತು 2016 ರ ಪ್ರವಿಷೇನ್ ಅಟ್ರಾಸಿಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಬಂದಿಸಿ, ಕೇಂದ್ರ ಮಂತ್ರಿ ಮಂಡಲದಿಂದ ವಜಾಗೊಳಿಸಿ, ಸಂಸತ್ ಸದಸ್ಯತ್ವವನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಚಿಂಚೋಳಿ ತಹಸೀಲ್ದಾರರ ಮೂಲಕ ರಾಷ್ಟ್ರ ಪತಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿತು. 

ಕಳೆದ ನಾಲ್ಕು ದಿನಗಳಿಂದ ಚಿಂಚೋಳಿ ನಾಗರಿಕ ಹಿತರಕ್ಷಣಾ ಸಮಿತಿ ಬಂದ್ ಗೆ ಕರೆ ನೀಡುವ ಸೂಚನೆ ಕೊಟ್ಟಿದ್ದರಿಂದ ಬೆಳಿಗ್ಗೆ 6 ಗಂಟೆಯಿಂದಲೇ ರಸ್ತೆಯ ಮೇಲೆ ಸಾರಿಗೆ ಬಸ್ಸುಗಳ ಓಡಾಟ, ಸಾರ್ವಜನಿಕರ ಓಡಾಟ ಮತ್ತು ವಾಹನಗಳ ಓಡಾಟಗಳು ಹಾಗೂ ಅಂಗಡಿಗಳು, ಹೋಟಲ್ ಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದರಿಂದ ಬಸ್ ನಿಲ್ದಾಣ ಮತ್ತು ರಸ್ತೆಗಳು ಬಿಕೋ ಎನ್ನುತ್ತಿದ್ದವು. ಮುನ್ನೆಚ್ಚರ ಕ್ರಮವಾಗಿ ಪಟ್ಟಣದ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತು. 

ಡಿವೈಎಸ್ ಪಿ ಸಂಗಮನಾಥ ಹಿರೇಮಠ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ ಒದಗಿಸಿದ್ದರಿಂದ ಯಾವುದೇ ಅಹಿತಕರ ಘಟನೆಗಳು ಆಗದಂತೆ ಮುನ್ನೆಚ್ಚರ ಕ್ರಮವಾಗಿ ಅಲ್ಲಲ್ಲಿ ಪೊಲೀಸ್ ಬ್ಯಾರಿಕೇಡ್ ಗಳನ್ನು ಹಾಕಿ ಲಾರಿಗಳನ್ನು ತಡೆಯಲಾಗಿತು. 

ಸಾಂಯಕಾಲ 5 ಗಂಟೆಗೆ ಎಂದಿನಂತೆ ಸಾರ್ವಜನಿಕ ಓಡಾಟಕ್ಕೆ ಅನುವು ಮಾಡಿಕೊಡಲಾಯಿತು. 

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಜೀತ್ ಪಾಟೀಲ್, ಮಾಜಿ ತಾಲೂಕ ಪಂಚಾಯತ ಸದಸ್ಯ ಚಿರಂಜೀವಿ, ನಾಗೇಶ ಗುಣಾಜಿ, ಅನ್ವರ ಕತೀಬ್, ಶಬ್ಬೀರ್ ಸೇರಿದಂತೆ ಬಂದ್ ಕರೆ ಪ್ರತಿಭಟನೆಯಲ್ಲಿ ಅನೇಕರು ಭಾಗವಹಿಸಿದರು.