ಹೈದ್ರಾಬಾದ ಕರ್ನಾಟಕ ವಿಮೋಚನೆಗೆ ಹೋರಾಟಗಾರರ ಶ್ರಮ
ಚಿತ್ತಾಪುರದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ
ಹೈದ್ರಾಬಾದ ಕರ್ನಾಟಕ ವಿಮೋಚನೆಗೆ ಹೋರಾಟಗಾರರ ಶ್ರಮ
ಚಿತ್ತಾಪುರ: ಆಗಿನ ಕೇಂದ್ರದ ಗೃಹ ಮಂತ್ರಿ ಸರ್ಧಾರ ವಲ್ಲಾಭಾಯಿ ಪಟೇಲ್‌ರ ದಿಟ್ಟತನದ
ನಿರ್ಧಾರದಿಂದ ಹೈದ್ರಾಬಾದ ಕರ್ನಾಟಕ ಪ್ರದೇಶ ಭಾರತ ಒಕ್ಕೂಟ ಸೇರಲು ಅನುಕೂಲವಾಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ತಹಸೀಲ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡ ಕಲ್ಯಾಣ ಕರ್ನಾಟಕ
ಉತ್ಸವ ಹಾಗೂ ಸಾಂಸ್ಕೃತೀಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಮಾನಂದ ತೀರ್ಥ, ಬಸಪ್ಪ ಸಜ್ಜನಶೆಟ್ಟಿ, ಶರಣಗೌಡ ಇನಾಮದಾರ ಸೇರಿದಂತೆ ಅನೇಕ ಹೋರಾಟಗಾರರ ಶ್ರಮದಿಂದ ಇಂದಿನ ಕಲ್ಯಾಣ ಕರ್ನಾಟಕ
ಅಭಿವೃದ್ದಿಯಾಗುತ್ತಿದೆ. ರಾಜ್ಯಸಭೆ ವಿರೋಧಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಧರ್ಮಸಿಂಗ್ ಅವರ ಯಶಸ್ಸಿನಿಂದ ೩೭೧(ಜೆ)
ಜಾರಿಗೊಳಿಸಿದ್ದಾರೆ. ೩೭೧ (ಜೆ) ಪ್ರತಿಫಲವಾಗಿ ನಾನು ತಹಸೀಲ್ದಾರ್ ಆಗಿ ನೇಮಕವಾಗಿದ್ದೇನೆ. ಕಡ್ಡಾಯವಾಗಿ ಶಿಕ್ಷಣ ಪ್ರತಿಯೊಬ್ಬರೂ ಕಲಿಯಬೇಕು. ಕಡ್ಡಾಯವಾಗಿ ತಮ್ಮ ಎಲ್ಲ ಮಕ್ಕಳಿಗೆ ಶಾಲೆಗೆ ಕಳುಹಿಸಬೇಕೆಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೂಂಡಗಿ ಮಾತನಾಡಿ,
ಮುಂಬಡ್ತಿಯಲ್ಲಿ ದೋಷಗಳು ಇರುವುದರಿಂದ ೩೭೧(ಜೆ) ತಿದ್ದುಪಡಿಯಲ್ಲಿನ ಕಾಯ್ದೆ ಮಾಡಬೇಕಾಗಿದೆ ಎಂದರು.
ದಿಗ್ಗಾoವ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ವಿಶ್ವರಾಜ ಇನಾಮದಾರ ವಿಶೇಷ ಉಪನ್ಯಾಸ ನಿಡಿದರು. ತಹಸೀಲ್ದಾರ್ ನಾಗಯ್ಯ ಹಿರೇಮಠ ದ್ವಜಾರೋಹಣ ನೆರವೇರಿಸಿದರು.ಕ್ಷೇತ್ರ ಶಿಕ್ಷಣ ಇಲಾಖೆಯ ಮಲಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಇಲಾಖೆಯ ಗೀತಾ ಯಡ್ರಾಮಿ, ಆಶಾ ಕಾರ್ಯಕರ್ತೆ ವಿಜ್ಜುಬಾಯಿ, ಪಿಡಬ್ಲೂಇ ಇಲಾಖೆಯ ಮಹ್ಮದ್ ಮೌಸೀನ್ ಅವರನ್ನು ಉತ್ತಮ ಸರ್ಕಾರಿ ನೌಕರರು ಎಂದು ಸನ್ಮಾನಿಸಿ ಗೌರವಿಸಲಾಯಿತು.
ತಾಪಂ ಇಒ ಆಕ್ರಂ ಪಾಶಾ, ಪಿಎಸ್‌ಐ ಚಂದ್ರಾಮಪ್ಪ, ತಾಲೂಕಿನ ವಿವಿಧ ಅಧಿಕಾರಿಗಳಾದ ಪಂಡಿತ್ ಸಿಂಧೆ, ಶಶಿಧರ ಬಿರಾದಾರ್, ಸವಿತಾ ಗೋಣಿ, ವಿಜಯಕುಮಾರ ಬಡಿಗೇರ ಮಲ್ಲಿಕಾರ್ಜುನ ಸೇಡಂ, ಪ್ರಲ್ಹಾದ ವಿಶ್ವಕರ್ಮ, ಅಶ್ವಥನಾರಾಯಣ ಕುಲಕರ್ಣಿ,ಸುನೀಲ ಯನಗುಂಟಿಕರ್, ಲಕ್ಷ್ಮೀನಾರಾಯಣ, ವಿಠಲ ಬಂಡಗಾರ ಸೇರಿದಂತೆ ಇತರರಿದ್ದರು.
ಪೋಲಿಸರಿಂದ ಕವಾಯತು ಪ್ರದರ್ಶನ ನಡೆಸಿದರು. ಸಂತೋಷಕುಮಾರ ಶಿರನಾಳ ನಿರೂಪಣೆ ಮಾಡಿದರು.