ಬೀದರ್ ಜಿಲ್ಲಾ ಸಾಹಿತಿಗಳ ಪರಿಚಯ

ಬೀದರ್ ಜಿಲ್ಲಾ ಸಾಹಿತಿಗಳ ಪರಿಚಯ

ಬೀದರ್ ಜಿಲ್ಲಾ ಸಾಹಿತಿಗಳ ಪರಿಚಯ 

 ಶ್ರೀ ಮಚ್ಚೇಂದ್ರ ಅಣಕಲ್ ರವರು ಸಾಮಾಜಿಕ ಜಾಲತಾಣದ ಮೂಲಕವೇ  ಸಾಹಿತಿಗಳ ಪರಿಚಯವನ್ನು ಕ್ಷೇತ್ರಕಾರ್ಯ ಮಾಡಿ  ಸಮರ್ಥವಾಗಿ ತೋರಿಸಿಕೊಟ್ಟಿದ್ದಾರೆ. ಸಾಹಿತಿಗಳ ಪರಿಚಯ ಮಾಡುವ ಈ ಕಾರ್ಯ ಎಂದೂ ಮುಗಿಯದ ನಿರಂತರತೆಯನ್ನು ಹೊಂದಿದೆ. ಇಂದು ಐದು ನೂರಕ್ಕೂ ಹೆಚ್ಚಿನ ಲೇಖಕರನ್ನು ಗುರುತಿಸಿ ಒಂದು ಕಡೆ ಕ್ರಮಬದ್ಧವಾಗಿ ಬರೆದು ಪ್ರಕಟಿಸಿರುವುದು ಖುಷಿ ಪಡುವಾಗಲೇ ವರ್ಷ ಕಳೆಯುವುದರೊಳಗಾಗಿ ಮತ್ತೆ ಕೆಲವು ಲೇಖಕರು ಕೃತಿ ಪ್ರಕಟಿಸಿ ಸಾಹಿತಿಗಳ ಸಂಖ್ಯೆ ಹೆಚ್ಚಿಸುತ್ತಾರೆ. ಹೀಗೆ ಎಂಟು-ಹತ್ತು ವರ್ಷಗಳಿಗೊಮ್ಮೆ ಹೊಸ ಚಿಗುರುಗಳು ಅರಳುವುದು, ಹೂ ಬಿಟ್ಟು ಹಣ್ಣಾಗುವುದು.ಇವುಗಳನ್ನು ದಾಖಲಿಸುವುದು, ಈ ಕಾರ್ಯಕ್ಕೆ ಕೊನೆ ಇಲ್ಲ. 

ಇಂದು ಮಚ್ಚೇಂದ್ರ ರವರು ಈ ಕಾರ್ಯಮಾಡಿರುವುದು ತುಂಬ ಹೆಮ್ಮೆ ಹಾಗೂ ಅಭಿಮಾನದ ಸಂಗತಿಯಾಗಿದೆ.

'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಈ ಗ್ರಂಥದಿಂದ ಇಲ್ಲಿಯ ಮೊದಲ ಸಾಹಿತಿ ಯಾರು ? ಮೊದಲ ಗ್ರಂಥ ಯಾವುದು ? ಕಾದಂಬರಿ, ಕತೆ, ಕವಿತೆಗಳೆಷ್ಟು ? ತಾಲೂಕಿಗೆ ಪ್ರಥಮರಾರು ? ಹೆಚ್ಚಿನ ಕೃತಿಗಳು ಪ್ರಕಟಿಸಿದವರಾರು? ಎಲೆಮರೆಯಾಗಿ ಉಳಿದವರಾರು? ಎಂಬೆಲ್ಲ ಹಲವು ಸಂಗತಿಗಳು, ಹಲವು ಆಯಾಮಗಳಲ್ಲಿ ಆಯ್ದುಕೊಂಡು ಸಂಶೋಧಿಸುವವರಿಗೆ ಇದು ಉತ್ತಮ ಆಕರ ಗ್ರಂಥವಾಗಿದೆ. ಅಷ್ಟೇ ಅಲ್ಲ. ಬೇರೆ, ಬೇರೆ ಭಾಗದ ಸಾಹಿತಿಗಳಿಗೂ ಇದೊಂದು ಪ್ರೇರಣೆ ಆಗಿದೆ. ಹೊಸ ಹೊಸ ಪ್ರಯೋಗ ಮಾಡುವಲ್ಲಿ ಶರಣ ನಾಡು ಯಾವತ್ತು ಮುಂದಿದೆ.ಅಂತಹ ಮುಂದುಗಳಿಗೆ ಮಚ್ಚೇಂದ್ರ ರವರು ಮತ್ತೊಂದು ಗರಿಯನ್ನು ಜೋಡಿಸಿ ತಮ್ಮ ಕ್ರಿಯಾಶೀಲತೆಗೆ ಸಾಕ್ಷಿಯಾಗಿದ್ದಾರೆ. ಇಲ್ಲಿಯ ಕೆಲವು ಸಾಹಿತಿಗಳು ಇಂದು ಬದುಕಿಲ್ಲ. ಕೆಲವರು ಈ ನಾಡು ಹಾಗೂ ಕರ್ನಾಟಕದಲ್ಲಿಯೂ ಇಲ್ಲ. ಅಂಥವರ ಪರಿಚಯಗಳು ಸೇರಿರುವುದರಿಂದ ಹೊಸಬರಿಗೆ ಇವರು ನಮ್ಮವರೆ ಎಂಬ ಮಾಹಿತಿ ಒದಗಿಸಿದ್ದಾರೆ. ಕೆಲವರು ತಾನು ಪುಸ್ತಕದಲ್ಲಿ ಸೇರಬೇಕೆಂಬ ಹಂಬಲದಿಂದ ಕೃತಿ ಪ್ರಕಟಿಸಿ, ಉತ್ಕಟತೆಯನ್ನು ಮೇರೆದಿದ್ದಾರೆ. ಮತ್ತೆ ಕೆಲವರು ಸಾಹಿತಿಗಳೆಂದು ಪ್ರಸಿದ್ದಿ ಪಡೆದರು ಒಂದು ಪುಸ್ತಕ ಪ್ರಕಟಿಸುವ ಯೋಗ ಕೂಡಿ ಬರದವರು ಇದ್ದಾರೆ. ಇನ್ನೂ ಕೆಲವರು ಇವರು ಯಾವಾಗ ಪುಸ್ತಕ ಬರೆದರು ! ಎಂದು ಆಶ್ಚರ್ಯ ಹಾಗೂ ಖುಷಿ ಪಡುವಂತಹ ಅಪರಿಚಿತರು ಇದ್ದಾರೆ. ಬಹುದೊಡ್ಡ ಸಾಹಿತಿಗಳೆಂದು ಪ್ರಸಿದ್ದಿ ಪಡೆದವರು ಬರೆದದ್ದು. ಎಷ್ಟೆಂಬ ಅದೇಷ್ಟೋ ವಿಷಯಗಳು ಇದರಲ್ಲಿ ಅಡಕವಾಗಿವೆ. ಕೆಲವರು ಕೆಲವೆ ವಿಷಯಗಳಲ್ಲಿ ಹಲವರಿಗೆ ಹಿಂದಿಕ್ಕಿ ಬೆಳೆದವರು ಕಾಣಸಿಗುತ್ತಾರೆ. ಮತ್ತೆ ಕೆಲವರು ಹಿರಿಯರಾಗಿದ್ದು ಪ್ರವಹಿಸದೆ ನೆಲೆಯೂರಿದ್ದು ಕಾಣುತ್ತದೆ. ಇನ್ನೂ ಕೆಲವರ ಬೇರುಗಳು ಆಳವಾಗಿದ್ದು ರೆಂಬೆ- ಕೊಂಬೆಗಳು ವಿಸ್ತಾರವಾಗಿ ಬೆಳೆದವರು ಇದ್ದಾರೆ. ತರ ತರಹದ ಪರಿಮಳ ಬೀರುವ ಹಿರಿ-ಕಿರಿಯರೆಲ್ಲರನ್ನು ಪೋಣಿಸಿ ಮಾಲೆ ಮಾಡಿರುವ ಮಚ್ಚೇಂದ್ರ ರವರ ಕಾರ್ಯಕ್ಕೆ ಮಣಿಯದವರಿರಲಾರರು. ಇದಕ್ಕೆ ಪೂರಕವಾಗಿ ಪ್ರಕಟಣಾ ಕಾರ್ಯಕ್ಕೆ ಆರ್ಥಿಕ ಸಹಾಯ ಮಾಡುವ ಮೂಲಕ ಹಾರಕೂಡದ ಪೂಜ್ಯ ಶ್ರೀ. ಡಾ. ಚೆನ್ನವೀರ ಸಹಕರಿಸಿರುವುದು ಸಂತಸದಾಯಕವಾಗಿದೆ.

ಲೇ: ಮಚ್ಚೇಂದ್ರ ಪಿ.ಅಣಕಲ್.

ಮುದ್ರಣ: 2021

ಪುಟಗಳು: 341

ಬೆಲೆ: 325

ಪ್ರಕಾಶಕರು: ಲಕ್ಷ್ಮೀಕಾಂತ ಪ್ರಕಾಶನ 

ಶರಣನಗರ (ಕಿಣ್ಣಿ)

ತಾ.ಬಸವಕಲ್ಯಾಣ ಜಿ.ಬೀದರ್

ಮೊ: 9945129331

ಡಾ.ರಾಜೇಂದ್ರ ಯರನಾಳೆ