ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆಗೆ ಲಿಂಗರಾಜ ತಾರಫೈಲ್ ಒತ್ತಾಯ

ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆಗೆ ಲಿಂಗರಾಜ ತಾರಫೈಲ್ ಒತ್ತಾಯ

ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆಗೆ ಒತ್ತಾಯ

ಕಲಬುರಗಿ:

 ರಾಜ್ಯದಲ್ಲಿ 15 ಒಳಗಾಗಿಯೇ ಸಿಎಂ ಸಿದ್ದರಾಮಯ್ಯ ನೇತೃತ್ವ ಸರಕಾರ ಸುಪ್ರೀಂ ಆದೇಶ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಜಿಲ್ಲಾ ಮಾದಿಗ ಸಮುದಾಯದ ಪರವಾಗಿ ಲಿಂಗರಾಜ ತಾರಫೈಲ್ ಒತ್ತಾಯಿಸಿದರು.

ನಗರದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಅವರು ಕಲಬುರಗಿಗೆ ಬರುವ ಸಂಭವ ಇದ್ದು, ಅವರು ಬರುವ ಒಳಗಾಗಿಯೇ ಒಳಮೀಸಲಾತಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಗೊಳಿಸಬೇಕು ಎಂದು ಆಗ್ರಹಿಸಿದರು. 

ನ್ಯಾ.ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಮೂರು ದಶಕಗಳಿಂದ ಸತತವಾಗಿ ರಾಜ್ಯದಲ್ಲಿರುವ ಮಾದಿಗ ಸಮಾಜ ಹೋರಾಟ ಮಾಡುತ್ತಲೇ ಬಂದಿದೆ. ರಾಜ್ಯದಲ್ಲಿ ಅತಿ ಹೆಚ್ಚು ಮಾದಿಗ ಸಮಾಜದ ಜನಾಂಗವಿದ್ದು, ಜನಸಂಖ್ಯಾಗನುಗುಣವಾಗಿ ಒಳಮೀಸಲು ಜಾರಿಯಾಗಬೇಕು ಮತ್ತು ಶಿಕ್ಷಣ ಮತ್ತು ಉದ್ಯೋಗದಲ್ಲಿ ಅನ್ಯಾಯವಾಗಿರುವುದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಕುರಿತಂತೆ ಚುನಾವಣೆ ಸಮಯದಲ್ಲಿ ಮಾದಿಗರ ಸಮಾವೇಶದಲ್ಲಿ ಸಿದ್ದರಾಮಯ್ಯನವರು ಒಳಮೀಸಲಾತಿಗೆ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದರು. ಈಗ ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾಜ್ಯ ಸರಕಾರ ಕೂಡಲೇ ಒಳಮೀಸಲಾತಿ ಜಾರಿಗೊಳಿಸಿ ಆದೇಶ ಹೊರಡಿಸಿ ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಾದಿಗ ಸಮಾಜ ಮುಖಂಡರಾದ ಪರಮೇಶ್ವರ ಖಾನಾಪುರ, ಶ್ಯಾಮ ನಾಟೀಕಾರ, ದಶರಥ ಕಲಗುರ್ತಿ, ಬಸವರಾಜ ಜವಳಿ, ಬಂಡೇಶ ರತ್ನಡಗಿ, ಶ್ರೀಮಂತ ಭಂಡಾರಿ, ರವಿ ಹೊಸಮನಿ, ರಾಜು ಕಟ್ಟಿಮನಿ ಇತರರಿದ್ದರು.