ಹೊಸ SDMC ಆಯ್ಕೆ: ರಂಜಣಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಿತಿ ರಚನೆ

ಹೊಸ SDMC ಆಯ್ಕೆ: ರಂಜಣಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಿತಿ ರಚನೆ

ಹೊಸ SDMC ಆಯ್ಕೆ: ರಂಜಣಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಿತಿ ರಚನೆ  

 ಜೆವರ್ಗಿ: ರಂಜಣಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಂಜಣಗಿಯಲ್ಲಿ ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ (SDMC) ಆಯ್ಕೆ ಪ್ರಕ್ರಿಯೆ ವಿಜೃಂಭಣೆಯಿಂದ ನೆರವೇರಿತು. ಈ ಸಭೆಗೆ BRP ರಮೇಶ ವಿಶ್ವಕರ್ಮ, ಗ್ರಾಮಪಂಚಾಯತ್ ಅಧ್ಯಕ್ಷ ಶಿವಗೊಂಡಪ್ಪಗೌಡ ಮಾಲಿ ಪಾಟೀಲ, ಹಿರಿಯರಾದ ಪಂಡಿತ ಪವಾರ, ಮರಪ್ಪ ಸಿಂಗೆ (ಮಾಜಿ PLD ಬ್ಯಾಂಕ್ ಅಧ್ಯಕ್ಷರು), ಮಾಜಿ SDMC ಅಧ್ಯಕ್ಷ ಭಾಗಣ್ಣ ದೇಶಾಯಿ, ಗ್ರಾಮಪಂಚಾಯತ್ ಸದಸ್ಯರು ಹಾಗೂ ಊರಿನ ಗಣ್ಯರು ಹಾಜರಿದ್ದರು.  

ಚುನಾವಣಾ ಪ್ರಕ್ರಿಯೆ:  

SDMC ಸದಸ್ಯರನ್ನು ಕೈ ಎತ್ತಿ ಮತದಾನ ಮೂಲಕ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ರಾವುತ ಕೆಲ್ಲೂರ ಅವರನ್ನು SDMC ಅಧ್ಯಕ್ಷರಾಗಿ ಹಾಗೂ ಉಮಾದೇವಿ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.  

ಸಭೆಯ ಸಾನ್ನಿಧ್ಯ:

ಈ ಸಭೆಯಲ್ಲಿ ಶಾಲಾ ಮುಖ್ಯಶಿಕ್ಷಕರು ಮಹೇಶ ಬಿರಾದಾರ, ಶಿಕ್ಷಕರಾದ ವಿಶ್ವನಾಥ ದ್ಯಾಮಗೊಂಡ, ಬಸವಂತರಾಯ ಹೊಸಮನಿ, ಮಹಾಂತೇಶ ಪಾಟೀಲ, ಜಾಕಿಯಾ ಸುಲ್ತಾನ್, ಸೀಮಾ ಕಾಂಬಳೆ, ಶಾಲಿನಿ ಹಡಪದ ಸೇರಿದಂತೆ ಮಕ್ಕಳು ಪಾಲಕರು ಉಪಸ್ಥಿತರಿದ್ದರು.  

ಈ ಹೊಸ SDMC ಆಯ್ಕೆ ಶಾಲೆಯ ಆಡಳಿತ ಸುಗಮಗೊಳಿಸಲು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಭಾವಿಸಲಾಗಿದೆ.  

ವರದಿ: ಜೆಟ್ಟಪ್ಪ ಎಸ್. ಪೂಜಾರಿ