ಸತ್ಯಂ ಪಿಯು ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ.
ಸತ್ಯಂ ಪಿಯು ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ.
ನಗರದ ಸತ್ಯಂ ಪದವಿ ಪೂರ್ವ ಕಾಲೇಜಿನಲ್ಲಿ 76ನೇ ಗಣರಾಜ್ಯೋತ್ಸವದ ಅಂಗವಾಗಿ ಕಾಲೇಜಿನ ಪ್ರಾಚಾರ್ಯರಾದ ಬಿ ಎಚ್ ನಿರಗುಡಿಯವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ವಿಶ್ವದಲ್ಲೇ ಅತಿ ದೊಡ್ಡ ಸಂವಿಧಾನ ಹೊಂದಿದ ರಾಷ್ಟ್ರ ನಮ್ಮದಾಗಿದೆ. ನಮ್ಮ ದೇಶವು ಪ್ರಜಾಪ್ರಭುತ್ವ ದೇಶವಾಗಿದೆ . ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಸಂವಿಧಾನ ಮಹತ್ವದ ಆಧಾರ ಶಿಲೆಯಾಗಿದೆ. ಸಂವಿಧಾನದ ತತ್ವಗಳಿಗೆ ಗೌರವ ನೀಡುವುದು ಮತ್ತು ಸಕ್ರಿಯವಾಗಿ ಪಾಲುಗೊಳ್ಳವದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಭಾರತ ಸಂವಿಧಾನವು ನಮ್ಮ ದೇಶದ ಆಧುನಿಕತೆ ಮತ್ತು ಪ್ರಜಾಪ್ರಭುತ್ವದ ಸಂಕೇತವಾಗಿದೆ ಇದನ್ನು ಸಂರಕ್ಷಿಸಲು ಮತ್ತು ಗೌರವಿಸಲು ಪ್ರತಿಯೊಬ್ಬ ಭಾರತೀಯರ ಆದ್ಯ ಕರ್ತವ್ಯವಾಗಿದೆ . ಎಂದು ಕಾಲೇಜಿನ ಪ್ರಾಚಾರ್ಯ ಬಿ.ಎಚ್. ನಿರಗುಡಿ ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮಹೇಶ್ ಗಡಗಿ, ಮಂಜುನಾಥ ಕಲಾಲ್, ರೂಪಾ ಕುಲಕರ್ಣಿ, ಗೀತಾ ಮುಲಗೆ, ರಾಜೇಶ್ವರಿ ಸಾಲಿಮಠ, ನಿರ್ಮಲಾ ಕಣ್ಮುಸೆ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಗಾಯತ್ರಿ ನಿರೂಪಿಸಿದರು ಸೃಷ್ಟಿ ಪ್ರಾರ್ಥನೆ ಮಾಡಿದರು, ಗಿರಿಜಾ ಸ್ವಾಗತಿಸಿದರು . ವಿದ್ಯಾರ್ಥಿಗಳಾದ ಕರಣ, ವಿಶ್ವಾ, ಸಾಯಿನಾಥ್ ಸುವರ್ಣಾ ,ಮೇಘನಾ ಅನೇಕ ವಿದ್ಯಾರ್ಥಿಗಳು ಗಣರಾಜ್ಯೋತ್ಸವ ಕುರಿತು ಮಾತನಾಡಿದರು.