ಹಕ್ಕುಗಳಿಗಿರುವ ಅರಿವು ಕರ್ತವ್ಯಗಳಿಗೂ ಇರಬೇಕು-ಶಿವರಾಜ ಅಂಡಗಿ
ಹಕ್ಕುಗಳಿಗಿರುವ ಅರಿವು ಕರ್ತವ್ಯಗಳಿಗೂ ಇರಬೇಕು-ಶಿವರಾಜ ಅಂಡಗಿ
ನಮ್ಮ ಸಂವಿಧಾನದಲ್ಲಿ ಅಡಕವಾಗಿರುವ ಅನೇಕ ಮೌಲಿಕವಾದ ತತ್ವಗಳು, ಆದರ್ಶಗಳೊಂದಿಗೆ ಹಕ್ಕುಗಳ ಮತ್ತು ಕರ್ತವ್ಯಗಳ ಕುರಿತು ಹೇಳಲಾಗಿದೆ. ಪ್ರಜ್ಞಾವಂತರಾದ ನಾಗರಿಕರಾದ ನಾವುಗಳು ನಮ್ಮ ಹಕ್ಕುಗಳನ್ನೇ ಕೇಳುತ್ತೇವೆ ವಿನಃ ನಮ್ಮ ನಮ್ಮ ಕರ್ತವ್ಯಗಳ ಕುರಿತು ಗಮನ ಹರಿಸುವುದಿಲ್ಲ. ನಾವು ಮಾಡಬೇಕಾದ ಕರ್ತವ್ಯಗಳೇನು ಎಂಬುದು ಚೆನ್ನಾಗಿ ಓದುವ ಮೂಲಕ ಸಂವಿಧಾನವನ್ನು ಅರಿತುಕೊಳ್ಳಬೇಕಾಗಿದೆ. ಅಂದಾಗ ಮಾತ್ರ ನಾವು ನಮ್ಮ ಸಂವಿಧಾನವನ್ನು ಗೌರವಿಸಿದಂತಾಗುತ್ತದೆ. ಎಂದು ಜಗದ್ಗುರು ದಾಸಿಮಯ್ಯ ಕಾನೂನು ಸೇವಾ ಕಛೇರಿಯಲ್ಲಿ ಆಚರಿಸಿದ ಸಂವಿಧಾನ ದಿನ ಆಚರಣೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಮಾತನಾಡಿದರು.
ದಾಸಿಮಯ್ಯ ಕಾನೂನು ಸೇವಾ ಸಂಸ್ಥೆಯ ಗೌರವಾಧ್ಯಕ್ಷರಾದ ಪ್ರೊ. ಚಂದ್ರಶೇಖರ ಅನಾದಿ ಡಾ. ಬಿ.ಆರ್. ಅಂಬೇಡ್ಕರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ನ್ಯಾಯವಾದಿ ಶಿವಲಿಂಗಪ್ಪಾ ಅಷ್ಠಗಿ ಅವರು ಸಂವಿಧಾನ ಪೀಠಿಕೆಗೆ ಮಾಲಾರ್ಪಣೆ ಮಾಡಿದರು. ದಾಸಿಮಯ್ಯ ಕಾನೂನು ಸೇವಾ ಸಂಸ್ಥೆಯ ಸಂಚಾಲಕರಾದ ನ್ಯಾಯವಾದಿ ವಿನೋದಕುಮಾರ ಜೆನೇವರಿ, ಸಂವಿಧಾನ ಪೀಠಿಕೆ ಓದಿದರು.
ಮಂಜುನಾಥ ಬಾಜಿ, ನಾಗೇಂದ್ರ ಭೊಮ್ಮಕ್ಕ, ಛಾಯಾಗ್ರಾಹಕ ರಾಜು ಕೋಷ್ಠಿ ಅವರು ಉಪಸ್ಥಿತರಿದ್ದರು.