ಕವಯತ್ರಿ ಜ್ಯೋತಿ ಪಾಟೀಲ ಹಿರೇಮಠಗೆ ಸಾಧನ ರತ್ನ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ
ಕವಯತ್ರಿ ಜ್ಯೋತಿ ಪಾಟೀಲ ಹಿರೇಮಠಗೆ ಸಾಧನ ರತ್ನ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ
ಕಲಬುರಗಿ : ಜ್ಯೋತಿ ಪಾಟೀಲ ಹಿರೇಮಠ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನವರು. ಯೋಗ ಶಿಕ್ಷಕಿಯಾಗಿ ವೃತ್ತಿ ನಿರ್ವಹಿಸುತ್ತಾರೆ. ನಾಡಿನ ಸಮಾಚಾರ ದಿನಪತ್ರಿಕೆ ಬಳಗ 8 .9. 2024 ರಂದು ಬೆಳಗಾವಿಯಲ್ಲಿ ಏರ್ಪಡಿಸಿದ ಶಿಕ್ಷಣ ದಿನಾಚರಣೆಯ ಪ್ರಯುಕ್ತ ದ ಗುರುವಂದನಾ ಸಮಾರಂಭದಲ್ಲಿ ಯೋಗ ಶಿಕ್ಷಣ ಸೇವೆಯನ್ನು ಗುರುತಿಸಿ "ಸಾಧನ ರತ್ನ ರಾಷ್ಟ್ರೀಯ ಪ್ರಶಸ್ತಿ"ಗೆ ಭಾಜನರಾಗಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯೋಗಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಹಾಗು ಬರಹದ ಹವ್ಯಾಸ ಮೈಗೂಡಿಸಿಕೊಂಡಿರುವುದು ಅವರ ಪ್ರತಿಭೆಯ ನಿದರ್ಶನ. 1700 ಲೇಖನಗಳನ್ನು ಬರೆದಿದ್ದು ಹಾಗೆ ಶ್ರೀ ಸಿದ್ದೇಶ್ವರ ಸ್ವಾಮಿಗಳ ಶತಮಾನದ ಸಂತನಿಗೆ ಶತಕೋಟಿ ನಮನ "ದಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್" ಅಲ್ಲಿ ಭಾಗಿಯಾಗಿ ಕವನವೂ ಆಯ್ಕೆ ಆಗಿ ಪುಸ್ತಕ ಬಿಡುಗಡೆ ಆಗಿದೆ. ಇದೇ ತರ ಹಲವು ಪುಸ್ತಕಗಳಲ್ಲಿ ಕವನಗಳನ್ನು ಕೊಡುಗೆಯಾಗಿ ನೀಡಿದ್ದು ಹಾಗೆ ಜೇವರ್ಗಿ ತಾಲೂಕಿನ ಹೂವಿನಗಲಿ ಬರಹಗಾರ ಬಳಗದ ಅಧ್ಯಕ್ಷೆ ಯಾಗಿರುವರು. ಇದಲ್ಲದೆ ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆಯವು ನಡೆಸಿಕೊಟ್ಟ ಅಂತರ್ಜಾಲ ಕವನ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ, ಜಿಲ್ಲಾ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಉತ್ತಮ ಸಾಹಿತ್ಯ ಅಂತ ಜಿಲ್ಲಾ ಪ್ರಶಸ್ತಿ, ಹಾಗು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದಲೂ ಕೂಡ ಎರಡುಬಾರಿ ಸಾಧಕಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಮುಡಿಗೇರಿಸಿ ಕೊಂಡಿದ್ದಾರೆ.