ಕ್ಯಾಂಪ್ ಬೆಲ್ಸ್ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ ಹ್ಯಾಂಡ ಬಾಲ್ ಕ್ರೀಡಾ ಕೂಟಕ್ಕೆ ಆಯ್ಕೆ

ಕ್ಯಾಂಪ್ ಬೆಲ್ಸ್ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ ಹ್ಯಾಂಡ ಬಾಲ್ ಕ್ರೀಡಾ ಕೂಟಕ್ಕೆ ಆಯ್ಕೆ

ಕ್ಯಾಂಪ್ ಬೆಲ್ಸ್ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ

ಹ್ಯಾಂಡ ಬಾಲ್ ಕ್ರೀಡಾ ಕೂಟಕ್ಕೆ ಆಯ್ಕೆ

ಕಲಬುರಗಿ: ಉಪ ನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಲಬುರಗಿ ಅವರು ನಗರದ ನೂತನ ವಿದ್ಯಾಲಯ ಮೈದಾನದಲ್ಲಿ 14 ಮತ್ತು 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿ ರವರಿಗೆ ಆಯೋಜಿಸಿದ ವಿಭಾಗ ಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಕೂಟದಲ್ಲಿ ನಗರದ ಕ್ಯಾಂಪ್ ಬೆಲ್ಸ್ ಶಾಲೆಯ ವಿದ್ಯಾರ್ಥಿಗಳು ಕಲಬುರ್ಗಿ ಜಿಲ್ಲೆಯನ್ನು ಪ್ರತಿನಿಧಿಸಿ 17 ವರ್ಷದ ಬಾಲಕಿಯರು ಕೊಪ್ಪಳ ಜಿಲ್ಲೆಯ ವಿರುದ್ಧ ಫೈನಲ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ಅದೇ ರೀತಿ 14 ವರ್ಷದೊಳಗಿನ ಬಾಲಕಿಯರು ರಾಯಚೂರು ಜಿಲ್ಲೆಯ ವಿರುದ್ಧ ಫೈನಲ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ಮತ್ತು 17 ವರ್ಷದ ಬಾಲಕರು ವಿಜಯನಗರ ಜಿಲ್ಲೆಯ ವಿರುದ್ಧ ದ್ವಿತೀಯ ಸ್ಥಾನ ಪಡೆದು ಮತ್ತು 14 ವರ್ಷದೊಳಗಿನ ಬಾಲಕರು ಕೊಪ್ಪಳ ಜಿಲ್ಲೆಯ ವಿರುದ್ಧ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಂತ 14 ವರ್ಷ ಮತ್ತು 17 ವರ್ಷ ಬಾಲಕಿಯರು ಅದೇ ರೀತಿ 14 ಮತ್ತು 17 ವರ್ಷದ ಬಾಲಕರು ದಿನಾಂಕ 8.10.2025 ರಿಂದ 10.10.2025 ರ ವರೆಗೆ ತುಮಕೂರು ಜಿಲ್ಲೆಯ ಮಾಯಸಂದ್ರ ದಲ್ಲಿ ನಡೆಯಲಿರುವ ರಾಜ್ಯಮಟ್ಟದ ಹ್ಯಾಂಡ ಬಾಲ್ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ. 

ವಿದ್ಯಾರ್ಥಿಗಳ ಈ ಸಾಧನೆಗೆ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳಾದ ರಾಜಶೇಖರ್ ಗೋನಾಯಕ್, ತಾಲೂಕು ದೈಹಿಕ ಶಿಕ್ಷಣ ಅಧಿಕಾರಿಗಳಾದ ಬಸವರಾಜ್ ರಟಕಲ್, ದಶರಥ, ಜಿಲ್ಲಾ ಮತ್ತು ತಾಲೂಕು ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಭೋಜನಗೌಡ ಪಾಟೀಲ್, ರಾಘವೇಂದ್ರ ಮುಸರಬು, ಅಶೋಕಕುಮಾರ್, ಚಂದ್ರಶೇಖರ್ ಗೋಶಾಲ್, ಮಲ್ಲಿಕಾರ್ಜುನ್ ಬಿದನೂರ, ಉಮೇಶ ಶರ್ಮಾ, ಸಂತೋಷ ಕೊಬಾಳ, ಬಸವರಾಜ ತೆಲಕೇರಿ ಹಾಗೂ ಶಾಲಾ ಆಡಳಿತ ಮಂಡಳಿಯ ಆಡಳಿತ ಅಧಿಕಾರಿ ಇಮಾನ್ವಲ್ ಜಯವಂತ್, ಮುಖ್ಯ ಗುರುಗಳಾದ ಸೂರ್ಯಕಾಂತ ಪವಾರ್, ತಂಡದ ವ್ಯವಸ್ಥಾಪಕರಾದ ಶ್ರೀಮತಿ ಶೀಲಾ ದೇವಿ, ತಂಡದ ತರಬೇತಿದಾರರಾದ ದತ್ತಾತ್ರೇಯ ಜೆವರ್ಗಿ ಅವರು ವಿದ್ಯಾರ್ಥಿಗಳ ಈ ಸಾಧನೆಯ ಶುಭ ಹಾರೈಸಿದ್ದಾರೆ

.