ಎಳ್ಳ ಅಮಾವಾಸ್ಯೆ ಹಬ್ಬ ಭೂದೇವಿಗೆ ನಮನ
ಎಳ್ಳ ಅಮಾವಾಸ್ಯೆ ಹಬ್ಬ ಭೂದೇವಿಗೆ ನಮನ
ಕಮಲನಗರ: ತಾಲೂಕಿನ ರೈತರು ಎಲ್ಲರೂ ಭೂತಾಯಿಯ ಸೀಮಂತದ ಕಾರ್ಯಕ್ರಮದಲ್ಲಿ ಇಂದು ತಮ್ಮ ತಮ್ಮ ಹೊಲಗಳಲ್ಲಿ ಹಿಂಗಾರು ಬೆಳೆಯಲ್ಲಿ ಕೊಂಪೆಯನ್ನು ಹಾಕ್ಕಿ ಸಂಭ್ರಮದಿಂದಲೇ ಕಾರ್ಯಕ್ರಮಗಳು ನೇರವೇರಿದವು.
ವಿವಿಧ ಬೀಜ ಮತ್ತು ಹಸಿರು ತರಕಾರಿ ದಿನಸುಗಳಿಂದ ಬಳಸಿ ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ಬೆಳಗ್ಗೆ ಬುಟ್ಟಿಯಲ್ಲಿ ತುಂಬಿಕೊಂಡು ರೈತರು ತಮ್ಮ ಹೊಲಗಳಿಗೆ ಹೋಗುತ್ತಾರೆ. ಅಲ್ಲಿರುವ ಹೊಲಗಳು ಹಚ್ಚ ಹಸಿರಿನಿಂದ ಕಂಗೊಳಿಸಿ ಪ್ರಕೃತಿ ಸೌಂದರ್ಯದ ನಡುವೆ
ರೈತರು ಹಬ್ಬ ಆಚರಿಸಿದರು.
ತೋಟವಿರಲಿ ಗದ್ದೆಗಳಿರಲಿ ಹೊಲವಿರಲಿ ಹೊಲಕ್ಕೆ ಹೋಗಿ ಪಾಂಡವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಬ್ಬ ಆಚರಿಸಿದ್ದರು. ಭೂಮಿ ತಾಯಿಯನ್ನೇ ನಂಬಿ ವರ್ಷವಿಡೀ ದುಡಿಯುವ ರೈತ ತನ್ನ ಪರಿಶ್ರಕ್ಕೆ ತಕ್ಕ ಫಲವನ್ನು ನೀಡೆಂದು ಭೂಮಾತೆಯನ್ನು ಪೂಜಿಸಿ ಬೇಡುವ ಪವಿತ್ರ ಹಬ್ಬ ಇದಾಗಿದೆ.
ತಮ್ಮ ಕುಟುಂಬ ಮತ್ತು ಬಂದು ಬಳಗ ಸಮೇತ ಎಲ್ಲರೂ ಸೇರಿ ಹೊಲಗದ್ದೆಗಳಿಗೆ ಹೋದರು.ಹಬ್ಬಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ತಯಾರಿಸಿಕೊಂಡು ಹೊಲಗಳಿಗೆ ಆಗಮಿಸಿ ಊಟ ಮಾಡಿದರು.
ನಮ್ಮ ಭಾರತವು ಕೃಷಿ ಪ್ರಧಾನ ದೇಶವಾಗಿದೆ. ಕೃಷಿಯನ್ನು ಅವಲಂಬಿಸಿಕೊಂಡು ನಡೆಯುತ್ತಿರುವ ಬದುಕುತ್ತಿರುವ ರೈತ. ರೈತ ದೇಶದ ಬೆನ್ನೆಲುಬು, ದೇಶವನ್ನು ತಾಯಿಯ ಸ್ವರೂಪದಲ್ಲಿ ಕಂಡುಕೊಳ್ಳುತ್ತಾನೆ. ಮಹಿಳೆಯ ಗರ್ಭವತಿಯಾದಾಗ ಸೀಮಂತ ಕಾರ್ಯಕ್ರಮ ಸಂಭ್ರಮ ಪಡುವಂತೆ ಭೂಮಿಯನ್ನು ತಾಯಿ ದೇವರೆಂದು ನಂಬಿದ ಕಾಯಕಯೋಗಿ ಶ್ರಮಜೀವಿಯಾದ ರೈತ,ತಾನು ಬೆಳೆದ ಬದಲಿಗೆ ಪೂಜೆ ಗೌರವ ಸಲ್ಲಿಸಿ ಸೀಮಂತದ ಕಾರ್ಯಕ್ರಮದಲ್ಲಿ ಭಾಗವಹಿಸಿ ಆರಾಧಿಸುವ ಪ್ರತೀಕ ಹಬ್ಬ ಇದ್ದಾಗಿದೆ.
ಎಳ್ಳ ಅಮಾವಾಸ್ಯೆ ದಿನದಂದು ಬೆಳೆಯನ್ನು ಪೂಜಿಸಿ ಇಳುವರಿ ಹೆಚ್ಚಾಗಲಿ ಎಂಬತೆ ಪ್ರಾರ್ಥನೆ ರೈತನದಾಗಿದೆ.
ರೈತನು ಬೆವರು ಹನಿ ವ್ಯರ್ಥವಾಗಬಾರದು.ರೈತನ ಬದುಕು ಕಷ್ಟದಿಂದ ಕೂಡಿದೆ.ರೈತರ ಬದುಕಿಗೆ ಸರಕಾರದಿಂದ ಸವಲತ್ತುಗಳನ್ನು ದೊರೆಯಬೇಕು.ಸರಕಾರ ರೈತರ ಕಡೆ ಗಮನ ಕೊಡಬೇಕು. ಬೇಕಾಗುವ ಎಲ್ಲಾ ಸರ್ಕಾರದ ಕಾರ್ಯಕ್ರಮಗಳು ಹೆಚ್ಚು ಬೆಳಕಿಗೆ ಬರಬೇಕು. ದುಡಿಯುವ ರೈತನಿಗೆ ಯಾವ್ದೇ ಪಗಾರ್ ಇಲ್ಲ. ಇನ್ಯಾವುದೇ ಗ್ಯಾರಂಟಿ ಸೌಲತ್ತುಗಳಿಲ್ಲ ಬೇಕಾಗಿರುವಂತಹ ರೀತಿಯಲ್ಲಿ ಗೊಬ್ಬರ ಬೀಜ ವಿತರಣೆ ಔಷಧಿ ಉಪಕರಣಗಳು ಇಲ್ಲ ಇದ್ದರು ದೊಡ್ಡ ದೊಡ್ಡ ಅಧಿಕಾರಿಗಳು ರೈತರನ್ನು ಕಡೆಗಣಿಸುತ್ತಾರೆ. ಇವರೆಂದು ಸರ್ಕಾರದ ವಿರುದ್ಧ ವೇತನ ಹೆಚ್ಚಿಸಬೇಕೆಂಬುದು ಧಿಕ್ಕಾರ ಮಾಡುವುದಿಲ್ಲ. ತನ್ನ ತಾನೇ ಬೆವರ ಹನಿ ಸುರಿಸಿ ಕಷ್ಟ ಪಟ್ಟು ತಿನ್ನುವನೆ ರೈತ.
ರೈತಾಪಿ ವರ್ಗದ ಸಂಭ್ರಮದ ಹಬ್ಬಗಳಲ್ಲಿ ಒಂದಾಗಿರುವ ಎಳ್ಳ ಅಮಾವಾಸ್ಯೆ ಹಬ್ಬ ಭೂದೇವಿಗೆ ನಮನ ಸಲ್ಲಿಸುವ ರೈತನ ದೊಡ್ಡ ಹಬ್ಬ ಇದ್ದಾಗಿದೆ.
ಹಬ್ಬಕ್ಕೂ ಒಂದು ವಾರ ಮೊದಲೇ ರೈತರು ಇದರ ತಯಾರಿ ನಡೆಸುತ್ತಾರೆ. ರೈತ ಜೋಳ ಬಿತ್ತಿರುತ್ತಾನೆ.ಸಚಿ ರೊಟ್ಟಿ ಶೇಂಗಾ ಹೋಳಿಗೆ ಜೋಳದ ಕಡಬು ವಿವಿಧ ತರಕಾರಿಯ ಮತ್ತು ಕಾಳುಗಳ ಪಲ್ಯಗಳೊಂದಿಗೆ ಭಜ್ಜಿ ವಿಶೇಷ ಅಡಿಗೆಯನ್ನು ತಯಾರಿಸಿ ತಮ್ಮ ತಮ್ಮ ಹೊಲಗಳಿಗೆ ಹೋಗಿ ಈ ಹಬ್ಬವನ್ನು ಆಚರಿಸುತ್ತಾರೆ.