ಟೆಂಗಳಿಯಲ್ಲಿ ಅಂತರಾಷ್ಟ್ರೀಯ ಗ್ರಾಮಿಣ ಮಹಿಳೆಯರ ದಿನಾಚಾರಣೆ.
ಟೆಂಗಳಿಯಲ್ಲಿ ಅಂತರಾಷ್ಟ್ರೀಯ ಗ್ರಾಮಿಣ ಮಹಿಳೆಯರ ದಿನಾಚಾರಣೆ.
ಗ್ರಾಮಿಣ ಭಾಗದ ಮಹಿಳೆಯರ ಪರಿಸ್ಥಿತಿ ಮತ್ತು ಸಮಾಜದಲ್ಲಿ ಅವರ ಪಾತ್ರದ ಕುರಿತು ಬೆಳಕು ಚಲ್ಲುವ ಉದ್ದೇಶದಿಂದ ಅಗಸ್ಟ್ ೧೫ರಂದು ಅಂತರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನವನ್ನಾಗಿ ವಿಶ್ವಸಂಸ್ಥೆ ಘೊಷಿಸಿರುವ ಹಿನ್ನೆಲೆಯಲ್ಲಿ ಇಂದು ಅಗಸ್ಟ್ ೧೬ರಂದು ಟೆಂಗಳಿಯ ಅಂಡಗಿ ಪ್ರತಿಷ್ಠಾನದ ವತಿಯಿಂದ ಗ್ರಾಮಿಣ ಮಟ್ಟದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಟೆಂಗಳಿ ಗ್ರಾಮದ ಗ್ರಾಮೀಣ ಮಠದಲ್ಲಿ ಆರ್ಥೀಕವಾಗಿ ಹಿಂದೂಳಿದ ಮಕ್ಕಳು ಹೆಚ್ಚಿನ ಹಣಕೊಟ್ಟು ಟ್ಯೂಷನ್ ಓದಲು ಆಗದೇ ಇರುವುದರಿಂದ ಅಂತಹಾ ಮಕ್ಕಳಿಗೆ ವಿಶೇಷವಾಗಿ ಶಾಲೆಯ ಸಮಯದ ನಂತರ ಟ್ಯೂಷನ್ ಕ್ಲಾಸ್ ನಡೆಸುವ ಮೂಲಕ ಮಕ್ಕಳಲ್ಲಿನ ವಿದ್ಯಾಗುಣಮಟ್ಟ ಹೆಚ್ಚಿಸುವುದಕ್ಕಾಗಿ ಶಿಕ್ಷಣಾ ಸೇವಾವೃತ್ತಿ ಮಾಡುತ್ತಿರುವ ಜ್ಞಾನಧಾಸೋಹ ಕಲಿಕಾಕೇಂದ್ರದ ಶಿಕ್ಷಕಿಯರಾದ ನಿರ್ಮಲಾ ಮಠಪತಿ ಹಾಗೂ ಭವಾನಿ ಮಠಪತಿ ಅವರಿಗೆ ಟೆಂಗಳಿಯ ಅಂಡಗಿ ಪ್ರತಿಷ್ಠಾನ ಅಧ್ಯಕ್ಷ ಶಿವರಾಜ ಅಂಡಗಿ ಆ ಶಿಕ್ಷಕರನ್ನು ಸನ್ಮಾಸಿವ ಮೂಲಕ ಅಂತರಾಷ್ಟ್ರೀಯ ಗ್ರಾಮಿಣ ಮಹಿಳೆಯರ ದಿನಾಚಾರಣೆ ಅರ್ಥಪೂರ್ಣವಾಗಿ ಆಚರಿಸಿದ್ದರು.
ನಂತರ ಶಿವರಾಜ ಅಂಡಗಿ ಅವರು ಮಾತನಾಡುತ್ತಾ ನಮ್ಮ ಟೆಂಗಳಿ ಗ್ರಾಮದಲ್ಲಿ ಬಹಳಷ್ಟು ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ಗಣನಿಯವಾಗಿ ಸೇವೆ ಸಲ್ಲಿಸಿದ್ದಾರೆ, ಹಾಗೂ ಇವತಿಗೂ ಸೇವೆ ಸಲ್ಲಿಸುತ್ತಿರುವ ಉದಾಹರಣೆಗಾಗಿ ರಾಜಕೀಯ ಕ್ಷೇತ್ರದಲ್ಲಿ ಶಶಿಕಲಾ ಟೆಂಗಳಿ, ಕೃಷಿ ಕ್ಷೇತ್ರದಲ್ಲಿ ಕಮಲಾಬಾಯಿ ಹೆಬ್ಬಾಳ, ಗುಂಡಮ್ಮಾ ಸಂಧಿಮನಿ ಸಾಮಾಜಿಕ ಕ್ಷೇತ್ರದಲ್ಲಿ, ಮುಸ್ಲಿಂ ಮಹಿಳೆ ಚಿತಾಬಿ, ಪೊಲೀಸ್ ಕ್ಷೇತ್ರದಲ್ಲಿ ನರ್ಮದ ಮಠಪತಿ ಮಕ್ಕಳ ಕ್ಷೇತ್ರದಲ್ಲಿ ಆರತಿ ತುಪ್ಪದ ಧಾಮಿರ್ಕ ಕ್ಷೇತ್ರದಲ್ಲಿ ಕಸ್ತೂರಿಬಾಯಿ ಕಡ್ಲಿ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಭಾರತಬಾಯಿ, ವೈಧ್ಯಕೀಯ ಕ್ಷೇತ್ರದಲ್ಲಿ ಶಿವಲಿಲಾ ನಾಗಶೇಟ್ಟಿ, ಶಿಕ್ಷಣ ಕ್ಷೇತ್ರದಲ್ಲಿ ಉಮಾ ಚೆಂಗಟಿ, ನಿರ್ಮಲಾ ಮಠಪತಿ ಮತ್ತು ಭವಾನಿ ಮಠಪತಿ ಹೀಗೆಇನ್ನು ಅನೇಕ ಕ್ಷೇತ್ರದಲ್ಲಿ ತಮ್ಮನೂ ತಾವು ತೊಡಗಿಸಿಕೊಂಡು ಕಾರ್ಯ ಸಾಧನೆ ಮಾಡುತ್ತಿದ್ದಾರೆಯಂದೆ ಈ ಮೇಲ್ಕಂಡ ಮಹಿಳೆಯರನ್ನು ಸ್ಮರಿಸಿಕೊಳ್ಳುತ್ತಾ ಸಾಂಕೆತಿವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿರುವ ನಿರ್ಮಲಾ ಮಠಪತಿ ಮತ್ತು ಭವಾನಿ ಮಠಪತಿ ಸನ್ಮಾಸಿ ಶಿವರಾಜ ಅಂಡಗಿ ರವರು ಮಾತನಾಡಿದ್ದರು.
ಈ ಕಾರ್ಯಕ್ರಮದಲ್ಲಿ ಜ್ಞಾನದಾಸೋಹ ಕಲಿಕಾಕೇಂದ್ರದ ಮಕ್ಕಳು ಉಪಸ್ಥಿತರಿದ್ದರು.