ಕನ್ನಡ ನಾಡಿನ ಇತಿಹಾಸ ಅರಿತುಕೊಳ್ಳುವುದು ಅವಶ್ಯಕತೆ- ಸಾಯಿಬಾಬಾ ಅಣಬಿ.

ಕನ್ನಡ ನಾಡಿನ ಇತಿಹಾಸ ಅರಿತುಕೊಳ್ಳುವುದು ಅವಶ್ಯಕತೆ- ಸಾಯಿಬಾಬಾ ಅಣಬಿ.

ಕನ್ನಡ ನಾಡಿನ ಇತಿಹಾಸ ಅರಿತುಕೊಳ್ಳುವುದು ಅವಶ್ಯಕತೆ- ಸಾಯಿಬಾಬಾ ಅಣಬಿ.

ಶಹಾಪುರ : ಪ್ರತಿಯೊಬ್ಬರು ಕನ್ನಡ ನಾಡಿನ ಇತಿಹಾಸ,ಸಂಸ್ಕೃತ, ಕಲೆ,ಭಾಷೆ ಬಗ್ಗೆ ಗೌರವ ಮತ್ತು ಸ್ವಾಭಿಮಾನ ಬೆಳೆಸಿಕೊಳ್ಳಬೇಕು ಅಲ್ಲದೆ ನಾಡು ನುಡಿಗೆ ದಕ್ಕೆ ಬಂದಾಗ ಪ್ರತಿಯೊಬ್ಬರು ಟೊಂಕ ಕಟ್ಟಿ ನಿಲ್ಲಬೇಕೆಂದು ಸಂಶೋಧಕ ಹಾಗೂ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಸಾಯಿಬಾಬಾ ಅಣಬಿ ಹೇಳಿದರು.

ತಾಲೂಕಿನ ಸಗರ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿರುವ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ,ಕೇವಲ ನವೆಂಬರ್ ತಿಂಗಳಲ್ಲೇ ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸದೆ ಪ್ರತಿದಿನವೂ ಕೂಡ ಕನ್ನಡ ಭಾಷೆಯ ಹಬ್ಬವಾಗಿ ಆಚರಿಸಬೇಕೆಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಿರೀಶ್ ಸಿದ್ರಾ ಮಾತನಾಡಿ 1973 ರಲ್ಲಿ ಕರ್ನಾಟಕ ಎಂದು ಮರು ನಾಮಕರಣವಾದ ಹಿನ್ನೆಲೆಯ ದಿನದಂದು,ಈ ನಾಡಿನ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯುವ ದಿನವಾಗಿದ್ದು ನಾಡಿನಲ್ಲಿ ಈ ದಿನವನ್ನು ರಾಜ್ಯೋತ್ಸವ ದಿನಾಚರಣೆ ಅರ್ಥಪೂರ್ಣ ಆಚರಿಸುವುದರ ಜೊತೆಗೆ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಲು ಸ್ವಾಭಿಮಾನದಿಂದ ಕನ್ನಡ ರಕ್ಷಣೆಗೆ ಮುಂದಾಗ ಬೇಕಾಗಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕಾಳಪ್ಪ ಬಡಿಗೇರ್,ಬಿಲ್ ಕಲೆಕ್ಟರ್ ಅಮರಪ್ಪ ಹೇರುಂಡಿ,ಚಂದಪ್ಪ ಹಳ್ಳಿ,ದತ್ತು,ಶಿವಣ್ಣ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಗೂ ಇತರರು ಹಾಜರಿದ್ದರು.