ದೊಡ್ಡಪ್ಪ ಅಪ್ಪ ತ್ರಿವಿಧ ದಾಸೋಹಿ

ಪೂಜ್ಯ ಲಿಂ.ದೊಡ್ಡಪ್ಪ ಅಪ್ಪ, ತ್ರಿವಿಧ ದಾಸೋಹಿಗಳು ಶರಣಬಸವೇಶ್ವರ ಸಂಸ್ಥಾನ ಕಲಬುರಗಿ
ಪೂಜ್ಯ ದೊಡ್ಡಪ್ಪ ಅಪ್ಪ ಅವರು ಕಠೋರ ತಪಸ್ವಿ ಹಾಗೂ ಶಿಕ್ಷಣಪ್ರೇಮಿಯಾಗಿದ್ದರು. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮಹಿಳೆಯರ ಶಿಕ್ಷಣಕ್ಕಾಗಿ 1934ರಲ್ಲಿ ಶಾಲೆ, ಕಾಲೇಜುಗಳನ್ನು ಪ್ರಾರಂಭಿಸಿ ಕೀರ್ತಿ ಅಪ್ಪ ಅವರಿಗೆ ಸಲ್ಲುತ್ತದೆ
ಇಂದಿನ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಗತ್ತಿನಲ್ಲಿ, ಶಿಕ್ಷಣವು ಅವಕಾಶ ಮತ್ತು ಬೆಳವಣಿಗೆಯ ಅಸಂಖ್ಯಾತ ಬಾಗಿಲುಗಳನ್ನು ತೆರೆಯುವ ಕೀಲಿಯಾಗಿದೆ. ಇದು ಸಾರ್ವತ್ರಿಕ ಹಕ್ಕಾಗಿದ್ದು, ಲಿಂಗ ಭೇದವಿಲ್ಲದೆ ಎಲ್ಲರಿಗೂ ಲಭ್ಯವಾಗಬೇಕು. ಶಿಕ್ಷಣದಲ್ಲಿನ ಲಿಂಗ ಅಂತರವನ್ನು ಕಡಿಮೆ ಮಾಡುವಲ್ಲಿ ನಾವು ಗಣನೀಯ ಪ್ರಗತಿಯನ್ನು ಸಾಧಿಸಿದ್ದರೂ, ಹೆಚ್ಚಿನ ಕೆಲಸಗಳನ್ನು ಮಾಡಬೇಕಾಗಿದೆ, ಅದರಲ್ಲೂ ವಿಶೇಷವಾಗಿ ಗುಣಮಟ್ಟದ ಶಿಕ್ಷಣಕ್ಕೆ ಹೆಣ್ಣುಮಕ್ಕಳಿಗೆ ಸಮಾನ ಪ್ರವೇಶವಿದೆ ಎಂದು ಖಚಿತಪಡಿಸಿಕೊಳ್ಳಲು. ಹೆಣ್ಣು ಮಕ್ಕಳ ಶಿಕ್ಷಣದ ಪ್ರಾಮುಖ್ಯತೆ ಮತ್ತು ವ್ಯಕ್ತಿಗಳು, ಕುಟುಂಬಗಳು ಮತ್ತು ಸಮಾಜಗಳಿಗೆ ಅದರ ಹಲವಾರು ಪ್ರಯೋಜನಗಳನ್ನು ನಾವು ಪರಿಶೀಲಿಸುತ್ತೇವೆ.
ಶಿಕ್ಷಣದ ವ್ಯಾಪಾರಿಕರಣ ವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ದಾಸೋಹ ಮನೆಗೆ ಬರುವ ಭಕ್ತರಿಗೆ ಅಷ್ಟೇ ಅಲ್ಲದೆ,ಹೊಲದಲ್ಲಿ ಬರುವ ಪ್ರಾಣಿ ಪಕ್ಷಿಗಳಿಗೆ ಕಾಳು ನೀಡಿ ನೀರುಣಿಸುವ ಮಹಾದಾಸೋಹ ಪರಂಪರೆಯಲ್ಲಿ ಪೂಜ್ಯ ದೊಡ್ಡಪ್ಪ ಅಪ್ಪ ಅವರ ಜ್ಞಾನದಾಸೋಹವು ಸಮಾಜದ ಕಡು ಬಡವನಿಗೆ ಸಿಗುವಂತಾಗಲಿ ಎನ್ನುವ ಭಾವನೆ ಇಂದ
ಉರ್ದುಭಾಷೆಯು ಆಡಳಿತಾತ್ಮಕ ಭಾಷೆಯಾಗಿ ಮುಸ್ಲೀಮೇತರರು ಕಡ್ಡಾಯವಾಗಿ ಉರ್ದು ಮಾಧ್ಯಮದ ಮೂಲಕ ಓದಬೇಕಾದ ಸಂದರ್ಭದ ಸ್ವತಂತ್ರ ಪೂರ್ವದಲ್ಲಿ ಈ ಪ್ರದೇಶವು ಹೈದರಾಬಾದದ ನಿಜಾಮನ ಆಳ್ವಿಕೆಯ ಸ್ಥಿತಿಯಲ್ಲಿ ಕನ್ನಡವು ತನ್ನ ಮನೆಯಲ್ಲಿಯೇ ಅನಾಥವಾಗಿ ನಲುಗಿ ಹೋಗಿತ್ತು.ಕನ್ನಡ ಧರ್ಮ-ಕನ್ನಡ ಸಾಹಿತ್ಯ-ಕನ್ನಡ ಸಂಸ್ಕøತಿಗಳಿಗೆ ಅವಸರ್ಪಣಿಯ ಕಾಲವು ಬಂದಂತಿತ್ತು.ಕನ್ನಡ ಸಂಸ್ಕøತಿಯಂತೆ,ಈ ನೆಲದ ಸ್ತ್ರೀಯರ ಪರಿಸ್ಥಿತಿಯೂ ಚಿಂತಾಜನಕವೇ ಆಗಿದ್ದಿತು.ಇಂತಹ ಸಂದರ್ಭದಲ್ಲಿ ಕ್ರಿ.ಶ1903 ರಲ್ಲಿ ಆರಂಭವಾದ ಖಾಸಗಿ ಮಾದರಿಯಲ್ಲಿದ್ದ ಪ್ರಾಥಮಿಕ ಶಾಲೆಯನ್ನು ಕ್ರಿ.ಶ 1918 ರಲ್ಲಿ ಪೂಜ್ಯ ದೊಡ್ಡಪ್ಪ ಅಪ್ಪ ಅವರ ಘನ ಅಧ್ಯಕ್ಷತೆಯಲ್ಲಿ ಕ್ರಮಬಧ್ಧವಾಗಿ ನೋಂದಣಿ ಹೊಂದಿ ಶ್ರೀ ಶರಣಬಸವೇಶ್ವರ ವಿಧ್ಯಾವರ್ಧಕ ಸಂಘ ಹಾಗು ಅದರ ಇನ್ನೊಂದು ಶಾಖೆಯಾಗಿ ಸಾರ್ವಜನಿಕ ಜನ್ಮತಾಳಿತು.ಅಷ್ಟೇ ಅಲ್ಲದೆ “ಒಬ್ಬ ಮಹಿಳೆ ಸುಶಿಕ್ಷಿತಳಾದರೆ ಒಂದು ಕುಟುಂಬವೇ ಸುಶಿಕ್ಷಿತವಾಗುತ್ತದೆಂಬ ಭರವಸೆ” ಅಪ್ಪ ಅವರಲ್ಲಿದ್ದಿತು.ಅಪ್ಪ ಅವರ ಕನಸಿನಂತೆ 1934 ರಲ್ಲಿ ಮಹಾದೇವಿ ಕನ್ಯಾ ಪ್ರೌಢ ಶಾಲೆಯನ್ನು ತೆರೆಯುದರ ಮೂಲಕ ಹೈದರಾಬಾದ ಕರ್ನಾಟಕ ಪ್ರದೇಶದಲ್ಲಿ ಐತಿಹಾಸಿಕ ಹೆಜ್ಜೆ ವಿದ್ಯೆ ಎನ್ನುವುದು ಸ್ತ್ರೀಯರಿಗೆ ಕನ್ನಡಿಯೊಳಗಿನ ಗಂಟು ಆಗಿದ್ದ ಸಂದರ್ಭದಲ್ಲಿ ಶಾಲೆಯನ್ನು ಪ್ರಾರಂಭಿಸಿ ಸ್ತ್ರೀ ಶಿಕ್ಷಣಕ್ಕೆ ಮೊದಲ ಪ್ರಯತ್ನ ಮಾಡಿದ ಕೀರ್ತಿಯು ಪೂಜ್ಯ ದೊಡ್ಡಪ್ಪ ಅಪ್ಪ ಅವರಿಗೆ ಸಲ್ಲುತ್ತದೆ.
12ನೇ ಶತಮಾನದಲ್ಲಿ ಬಸವಣ್ಣ ಆರಂಭಿಸಿದ್ದ ಮಹಿಳಾ ಸಬಲೀಕರಣದ ಕ್ರಾಂತಿಯನ್ನು 20 ನೇ ಶತಮಾನದಲ್ಲಿ ದೊಡ್ಡಪ್ಪ ಅಪ್ಪ ಮುಂದುವರಿಸಿದರು
ಮಹಿಳೆಯರ ಶಾಲೆ ತೆರೆದು ಮನೆಮನೆಗೆ ತೆರಳಿ ಟಾಂಗಾಗಳಲ್ಲಿ ಮಹಿಳೆಯರನ್ನು ಕರೆತಂದು ಪ್ರವೇಶ ನೀಡಿದರು.
ಅರಿವು, ಆಚಾರ, ಅನುಭಾವಗಳ ಸಂಗಮ ಅವರಾಗಿದ್ದರು. ಕಾಯಕ ಹಾಗೂ ಲಿಂಗಪೂಜೆಯಲ್ಲಿ ಅಪಾರ ನಂಬಿಕೆ ಇಟ್ಟಿದ್ದರು’ ಅಂದು 18ನೇ ಶತಮಾನದಲ್ಲಿ ಶರಣಬಸವೇಶ್ವರರು ಹಾಕಿ ಕೊಟ್ಟ ದಾಸೋಹ ಪರಂಪರೆಯಲ್ಲಿ ಕಲಕೇರಿ ಶ್ರೀ ಮಠದ ಗುರುಗಳಾದ ಲಿಂ. ಷ.ಬ್ರ. ಬಸವಲಿಂಗ ಮರುಳಸಿದ್ಧ ಶಿವಾಚಾರ್ಯರ ಮಾರ್ಗದರ್ಶನದಲ್ಲಿ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಅನ್ನದಾಸೋಹದ ನೀಡುವುದರ ಜೊತೆಜೊತೆಗೆ ಜ್ಞಾನದಾಸೋಹ ಕೈಗೊಂಡು ಶಿಕ್ಷಣಕ್ಕೆ ಬಹಳಷ್ಟು ಪ್ರಾಧಾನ್ಯತೆಯನ್ನು ಕೊಟ್ಟು ಕಲ್ಯಾಣ ನಾಡಿನಾದ್ಯಂತ ಶಿಕ್ಷಣ ಕ್ರಾಂತಿಯನ್ನು ಮಾಡಿ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕೊಡುಸಿದ ಮಹಾಮಹಿಮರು ಏಳನೆಯ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪವರು ಇಂತಹ ಮಹಾನ್ ಕಾರ್ಯಗಳನ್ನು ಕೈಗೊಂಡು ಭಾರತ ದೇಶದ ನಕಾಶೆಯಲ್ಲಿ ಕಲಬುರ್ಗಿ ಜಿಲ್ಲೆಯನ್ನು ಮಿನುಗುವಂತೆ ಮಾಡಿದ ಮಹಿಮಾಶೀಲರು
ಲೇಖನ -ಶ್ರೀ ಬಂಡಯ್ಯ ಸ್ವಾಮೀಜಿ ಸಂಸ್ಥಾನ ಹಿರೇಮಠ ಸುಂಟನೂರ ಯುವ ವಾಗ್ಮಿಗಳು